ABC

Wednesday, 20 February 2019

ಅರುಣಾಚಲ ಪ್ರದೇಶ ಮಾಜಿ ಸಿಎಂ ಅಪಾಂಗ್​ ಜೆಡಿಎಸ್​ಗೆ ಸೇರ್ಪಡೆ

ಬೆಂಗಳೂರು: ಅರುಣಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಜಿಗಾಂಗ್​ ಅಪಾಂಗ್​ ಇಂದು ಜಾತ್ಯಾತೀತ ಜನತಾ ದಳ (ಜೆಡಿಎಸ್​)ಗೆ ಸೇರ್ಪಡೆಯಾಗಿದ್ದಾರೆ.
ಅರುಣಾಚಲ ಪ್ರದೇಶದ ದೀಬ್ರೂಗಡದಲ್ಲಿ ಮಾಜಿ ಪ್ರಧಾನ ಮಂತ್ರಿ,  ಜೆಡಿಎಸ್​ ವರಿಷ್ಠ ಎಚ್​.ಡಿ. ದೇವೇಗೌಡ ಸಮ್ಮುಖದಲ್ಲಿ 69 ವರ್ಷದ ಅಪಾಂಗ್​ ಜೆಡಿಎಸ್​ಗೆ ಸೇರ್ಪಡೆಯಾದರು.  ಇವರು 23 ವರ್ಷ ಅರುಣಾಚಲ ಪ್ರದೇಶದ ಸಿಎಂ ಆಗಿ ಸೇವೆ ಸಲ್ಲಿಸಿದ್ದರು.

ಅಪಾಂಗ್​ ಜನವರಿ 1980 ರಿಂದ ಜನವರಿ 1999ರವರೆಗೆ ಮತ್ತು ಆಗಸ್ಟ್​ 2003 ರಿಂದ ಏಪ್ರಿಲ್​ 2007ರವರೆಗೆ ಮುಖ್ಯಮಂತ್ರಿಯಾಗಿದ್ದರು. 2014ರ ಲೋಕಸಭೆ ಚುನಾವಣೆಗೂ ಮುನ್ನ ಇವರು ಕಾಂಗ್ರೆಸ್​ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಈ ವರ್ಷ ಜನವರಿ 15ರಂದು ಅವರು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟು ಪಕ್ಷದಿಂದ ಹೊರಬಂದಿದ್ದರು. ಸದ್ಯ ಕರ್ನಾಟಕ ಮೂಲದ ಜಾತ್ಯತೀತ ಜನತಾದಳ ಸೇರಿದ್ದಾರೆ.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...