ABC

Wednesday, 20 February 2019

ಮೋದಿ ಮನವಿಗೆ ಮಣಿದ ಸೌದಿ ರಾಜಕುಮಾರ, ೮೫೦ ಭಾರತೀಯರ ಕೈದಿಗಳ ಬಿಡುಗಡೆ.

ಹೊಸದಿಲ್ಲಿ: ಸೌದಿ ಅರೇಬಿಯಾದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಅವರು ಬುಧವಾರ ಪ್ರಧಾನಿ ನರೇಂದ್ರ ಮೋದಿಯವರ ಮನವಿಯ ಮೇರೆಗೆ ತನ್ನ ರಾಷ್ಟ್ರದ ಜೈಲುಗಳಲ್ಲಿರುವ ೮೫೦ ಭಾರತೀಯರ ಕೈದಿಗಳ ಬಿಡುಗಡೆಗೆ ಆದೇಶಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತಿಳಿಸಿದೆ.

ಕೈದಿಗಳ ಬಿಡುಗಡೆಯ ಆದೇಶದ ಜೊತೆಗೆ ಮೋದಿಯವರ ಮನವಿಯ ಮೇರೆಗೆ ಭಾರತೀಯ ಹಜ್ ಯಾತ್ರಿಗಳ ಕೋಟಾವನ್ನು ಎರಡು ಲಕ್ಷಕ್ಕೆ ಹೆಚ್ಚಿಸಿರುವುದಾಗಿಯೂ ಸಲ್ಮಾನ್ ಪ್ರಕಟಿಸಿದ್ದಾರೆ ಎಂದು ಸಚಿವಾಲಯದ ವಕ್ತಾರ ರವೀಶ್ ಕುಮಾರ ಅವರು ಟ್ವೀಟ್ ಮಾಡಿದ್ದಾರೆ . ಭಾರತೀಯ ಕೈದಿಗಳ ಬಿಡುಗಡೆ ಜತೆಗೆ ಭಾರತದಿಂದ ಹಜ್ ಯಾತ್ರೆಗೆ ತೆರುಳುವ ಕೋಟ್ ಅನ್ನು ಎರಡು ಲಕ್ಶಕ್ಕೆ ಏರಿಸುವುದಾಗಿ ಕೂಡ ತಿಳಿಸಿದ್ದಾರೆ.

ರಾಷ್ಟ್ರಪತಿ ಭವನದಲ್ಲಿ ಅದ್ದೂರಿ ಸ್ವಾಗತ ಸಿಕ್ಕ ಬಳಿಕ ಮಾತನಾಡಿದ ಸ‌ಲ್ಮಾನ್, ಭಾರತ-ಸೌದಿ ಐತಿಹಾಸಿಕ ಸಂಬಂಧ ಹೊಂದಿದ್ದು, ಇದನ್ನು ಇನ್ನಷ್ಟು ಬಲಗೊಳಿಸುವ ಆಶಯ ವ್ಯಕ್ತಪಡಿಸಿದರು.ಭಾರತ ಹಾಗೂ ಸೌದಿ ನಡುವಿನ ಸಂಬಂಧವು ನಮ್ಮ ಡಿಎನ್‌ಎನಲ್ಲೇ ಇದೆ. ಇದು ಇನ್ನಷ್ಟು ವಿಸ್ತರಿಸಬೇಕು. ಸೌದಿ ಅರೇಬಿಯಾದ ಅಭಿವೃದ್ಧಿಯ ಪಾಲುದಾರರಾಗಿರುವ ಲಕ್ಷಾಂತರ ಭಾರತೀಯರಿಗೆ ಧನ್ಯವಾದ’ ಎಂದು ಅವರು ಹೇಳಿದರು.

ಭಾರತ ಭೇಟಿಗೂ ಮೊದಲು ಸೌದಿ ರಾಜ ಪಾಕಿಸ್ತಾನಕ್ಕೆ ಭೇಟಿ ನೀಡಿ, ಇಪ್ಪತ್ತು ನಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡುವುದಾಗಿ ಘೋಷಿಸಿದ್ದಾರೆ. ಜತೆಗೆ ಎರಡು ಸಾವಿರದ ನೂರು ಪಾಕಿಸ್ತಾನಿ ಕೈದಿಗಳ ಬಿಡುಗಡೆಗೆ ಆದೇಶಿಸಿದ್ದಾರೆ.  ಭಾರತದ ಪ್ರವಾಸ ಮುಗಿಸಿದ ನಂತರ ಸೌದಿ ರಾಜ ಮೊಹ್ಮದ್ ಬಿನ್ ಸಲ್ಮಾನ್ ಚೀನಾಗೆ ತೆರಳುವ ನಿರೀಕ್ಷೆ ಇದೆ.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...