ಬೆಂಗಳೂರು : ಪಾಕ್ನಲ್ಲಿ ಭಾರತೀಯ ವಾಯುಸೇನಾ ಪೈಲಟ್ ಉಗ್ರರ ವಶದಲ್ಲಿರುವಾಗ ಎರಡು ರಾಷ್ಟ್ರಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಇದ್ರೆ ಇತ್ತ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ವೈ ಮಾತ್ರ ಲೋಕಸಭೆಯಲ್ಲಿ ಈ ಭಾರತ-ಪಾಕ್ ನಡುವಿನ ಉದ್ವಿಗ್ನ ಪರಿಸ್ಥಿತಿಯಿಂದ ಎಷ್ಟು ಸೀಟು ಬರಬಹುದು ಎಂದು ಲೆಕ್ಕಾಚಾರದಲ್ಲಿ ಇದ್ದಾರೆ.
ನಿನ್ನೆ ಮಾದ್ಯಮಗಳ ಜೊತೆ ಮಾತನಾಡಿದ ಬಿಎಸ್ ವೈ, ವಾಯುಸೇನೆಯ ಯೋಧನ ಮೇಲೆ ಪಾಕಿಸ್ಥಾನದಲ್ಲಿ ಹಲ್ಲೆ ನಡೆದಿದ್ದು, ಮುಖದಲ್ಲಿ ರಕ್ತ ಚೆಲ್ಲುವ ದೃಶ್ಯಗಳು ಎಲ್ಲೆಡೆ ವೈರಲ್ ಆಗಿದೆ, ಇದರಿಂದಾಗಿ ಭಾರತೀಯರ ರಕ್ತ ಕುದಿಯುವಂತಾಗಿದೆ. ಜನರ ಮನಸ್ಸು ಭಾರತೀಯ ಜನತಾ ಪಾರ್ಟಿಯ ಪರವಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 22 ಸ್ಥಾನ ಗಳಿಸಲು ಸಹಕಾರಿ ಎಂದು ಹೇಳಿದ್ದು ವ್ಯಾಪಕವಾದ ಟೀಕೆಗೆ ಗುರಿಯಾಗಿದ್ದಾರೆ.
ಸೇನಾ ಕಾರ್ಯಾಚರಣೆ ಬಳಿಕ ಮೋದಿ ಪರ ಅಲೆ ಎದ್ದಿದೆ ಎಂದ ಬಿಎಸ್ ವೈ, ಯುವಕರು ಎದ್ದು ಕುಣಿಯುತ್ತಿದ್ದಾರೆ. ಇವೆಲ್ಲದರ ಪರಿಣಾಮ ರಾಜ್ಯದಲ್ಲಿ 22 ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿದ್ದು, ದೇಶದ ಯೋಧ ಅಭಿನಂದನ್ ಅವರನ್ನು ಪಾಕ್ ಉಗ್ರರು ಸೆರೆ ಇಟ್ಟು ಶಿಕ್ಷಿಸುತ್ತಿದ್ದರೆ ಇತ್ತ ಬಿಎಸ್ ವೈ ರಾಜಕೀಯ ಮಾಡುತ್ತಿದ್ದು, ಬಿಜೆಪಿಯ ನೈಜ ಮುಖವಾಡವನ್ನು ಕಳಚಿಟ್ಟಿದೆ.
No comments:
Post a Comment