ನವದೆಹಲಿ :ಭಾರತೀಯ ವಾಯುಸೇನೆ ಜೆಟ್ ವಿಂಗ್ ಕಮಾಂಡರ್ ಅಭಿನಂದನ್ ರನ್ನು ಪಾಕಿಸ್ತಾನ ಸೇನೆ ಬಂಧಿಸಿದ್ದು ಆತನ ಬರುವಿಕೆಗಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ತಂದೆ ಮಾಜಿ ಏರ್ ಮಾರ್ಷಲ್ ಸಿಂಹಕುಟ್ಟಿ ವರ್ತಮಾನ್ ಹೇಳಿದ್ದಾರೆ.ದೇಶದಾದ್ಯಂತ ಜೆಟ್ ವಿಂಗ್ ಕಮಾಂಡರ್ ಅಭಿನಂದನ್ ಬಂಧನದ ಬಗ್ಗೆ ದೇಶದ ಜನತೆಯಲ್ಲಿ ಆತಂಕ ಮನೆ ಮಾಡಿದ್ದು ಪೈಲೆಟ್ ಬರುವಿಕೆಗಾಗಿ ಭಾರತದ ಜನತೆ ಮನದಾಳದಿಂದ ಹಾರೈಕೆ ಮಾಡುತ್ತಿದ್ದು ಜನರ ಕಾಳಜಿಗೆ ಪೈಲೆಟ್ ಅಭಿನಂದನ್ ತಂದೆ ಧನ್ಯವಾದ ತಿಳಿಸಿದ್ದಾರೆ.
ಭಾರತೀಯರೆಲ್ಲರೂ ತೋರುತ್ತಿರುವ ಕಾಳಜಿಗೆ ಧನ್ಯವಾದಗಳು. ದೇವರು ಅಭಿನಂದನ್ ಮೇಲೆ ಕೃಪೆ ತೋರಿದ್ದು, ಆತ ಜೀವಂತವಾಗಿದ್ದು, ಯಾವುದೇ ಅನಾಹುತ ನಡೆದಿಲ್ಲ. ಪಾಕಿಸ್ತಾನ ಸೇನೆ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ನನ್ನ ಮಗ ಪಾಕ್ ಮೇಜರ್ ಕೇಳಿದ ಪ್ರಶ್ನೆ ಸಮರ್ಥವಾಗಿ, ಧೈರ್ಯವಾಗಿ ಉತ್ತರಿಸಿದ್ದಾರೆ. ಆತ ನಿಜಕ್ಕೂ ಒಬ್ಬ ಯೋಧ. ನನಗೆ ಅಭಿನಂದನ್ ಬಗ್ಗೆ ಹೆಮ್ಮೆ ಇದೆ.ಆತನಿಗೆ ಯಾವುದೇ ಹಿಂಸೆಯಾಗದಿರಲಿ ಹಾಗೂ ಸುರಕ್ಷಿತವಾಗಿ ಮರಳಲಿ ಎಂದು ನಾನು ಪ್ರಾರ್ಥಿಸುತ್ತೇನೆ. ನಮ್ಮ ಜೊತೆ ನೀವೆಲ್ಲಾ ನಿಂತಿರುವುದಕ್ಕೆ ಧನ್ಯವಾದಗಳು ಎಂದಿದ್ದಾರೆ.

No comments:
Post a Comment