ABC

Wednesday, 27 February 2019

ಜನರಿಗೆ ಸೇನೆಯ ಕಿವಿಮಾತು.

ಬೆಂಗಳೂರು: ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿ ರುವ ಬೆನ್ನ ಹಿಂದೆಯೇ ಪಾಕ್ ಪ್ರಚೋದಿತ ಸೈಬರ್ ಪ್ರಾಪಗ್ಯಾಂಡ ಕೂಡ ಅಂತರ್ಜಾಲದಲ್ಲಿ ವಿಪರೀತವಾಗಿ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಯುದ್ಧದ ಸ್ಥಿತಿಯಲ್ಲಿ ಉತ್ತಮ ಪ್ರಜೆಯಾಗಿ ಹೇಗೆ ಜವಾಬ್ದಾರಿಯುತ ವಾಗಿ ವರ್ತಿಸಬೇಕು ಎಂಬ ಬಗ್ಗೆ ನಿರ್ದೇಶನ ಒಂದನ್ನು ಬಿಡುಗಡೆ ಮಾಡಿ.

ಏನು ಮಾಡಬಾರದು?

೧.ಯಾವುದೇ ಸೈನಿಕರ ವಿಡಿಯೋ ಭಾವಚಿತ್ರ ಭದ್ರತಾ ಪಡೆ ಅಥವಾ ಸಂಸ್ಥೆಗಳು ಯುದ್ಧೋಪಕರಣಗಳ ಸಾಗಾಣಿಕೆ ಸಂಬಂಧಿಸಿದ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಡಿ.
೨. ಯಾವುದೇ ವಿಚಾರವನ್ನು ಪ್ರಮಾಣೀಕರಿಸಿಕೊಳ್ಳದೆ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಬೇಡಿ.

ಏನು ಮಾಡಬೇಕು?

೧. ಭಾರತ ವಿರೋಧಿ ಹಾಗೂ ಮಾರಕವಾದ ವಿಡಿಯೋ ಫೋಟೋ ಅಥವಾ ಪೋಸ್ಟ್ ಗಳು ಸಾಮಾಜಿಕ ಜಾಲತಾಣದಲ್ಲಿ ಕಂಡು ಬಂದರೆ ದೂರು ನೀಡಿ.
೨. ನಮ್ಮ ಸೇನೆಯ ತಂತ್ರ ಗಳೆಲ್ಲವನ್ನೂ ತಿಳಿದುಕೊಳ್ಳಬೇಕು ಎಂಬ ಪ್ರಯತ್ನ ಬೇಡ ಬದಲಿಗೆ ನಮ್ಮ ಸೇನೆ ನಿಮ್ಮನ್ನು ಸುರಕ್ಷಿತವಾಗಿಡಲ್ಲಿದೆ ಎಂಬ ಬಗ್ಗೆ ವಿಶ್ವಾಸವಿಡಿ.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...