ABC

Wednesday, 27 February 2019

ಪರಿಶಿಷ್ಟ ಜಾತಿ ಪಂಗಡ ಮತ್ತು ಹಿಂದುಳಿದ ಸಮುದಾಯದಕ್ಕೆ ಸಿಹಿಸುದ್ದಿ ನೀಡಿದ: ರಾಜ್ಯ ಸರ್ಕಾರ.

ಸಾಕಷ್ಟು ದಿನಗಳಿಂದ ತೀವ್ರ ಜಟಾಪಟಿಗೆ ಕಾರಣವಾಗಿದ್ದ ಬಡ್ತಿ ಮೀಸಲಾತಿ ವಿವಾದವನ್ನು ಕೊನೆಗೂ ರಾಜ್ಯ ಸರ್ಕಾರ ಬಗೆಹರಿಸಿದೆ. 

ಪರಿಶಿಷ್ಟ ಜಾತಿ, ಪರಿಸಿಷ್ಟ ಪಂಗಡ ಸೇರಿ ಹಿಂದುಳಿದ ಸಮುದಾಯದ ಸರ್ಕಾರಿ ನೌಕರರಿಗೆ  ಬಡ್ತಿ ಮೀಸಲಾತಿ ಕಾಯ್ದೆಯನ್ನು ಇಂದಿನಿಂದಲೇ ಜಾರಿಯಾಗುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಇನ್ನು ಈ ಹಿಂದೆ ಬಡ್ತಿ ಮೀಸಲಾತಿ ಕಾಯ್ದೆಗೆ ರಾಷ್ಟ್ರಪತಿಗಳ ಅಂಕಿತ ಸಿಕ್ಕಿದ್ದರೂ ಸಹ ಬಹು ಕಾಲದಿಂದ ಜಾರಿ ಮಾಡದೆ ಮೀನಾ-ಮೇಷ ಎಣಿಸಲಾಗುತ್ತಿತ್ತು. ಆದರೆ ಕುಮಾರಸ್ವಾಮಿಯವರ ಸರ್ಕಾರ ಬಡ್ತಿ ಮೀಸಲಾತಿ ಕಾಯ್ದೆ ಜಾರಿಗೆ ಆದೇಶ ಹೊರಡಿಸುವ ಮೂಲಕ ರಾಜ್ಯದ ದಲಿತ ಸಮುದಾತಕ್ಕೆ ಸೂಕ್ತ ಪ್ರಾತಿನಿಧ್ಯ ಒದಗಿಸಿದ್ದಾರೆ.

ಇನ್ನು ಬಡ್ತಿ ಮೀಸಲಾತಿಯನ್ನು ಸುಪ್ರಿಂಕೋರ್ಟ್ 2017 ರಲ್ಲಿ ರದ್ದು ಮಾಡಿತ್ತು. ಆ ನಂತರ ಸಿದ್ದರಾಮಯ್ಯ ಸರ್ಕಾರ ಬಡ್ತಿ ಮೀಸಲಾತಿ ಕಾಯ್ದೆಗೆ ತಿದ್ದುಪಡಿ ತಂದು ರಾಷ್ಟ್ರಪತಿಗಳ ಅಂಕಿತ ಪಡೆಯಲಾಗಿತ್ತು. ಆದರೆ ಕಾಯ್ದೆಯನ್ನು ಜಾರಿ ಮಾಡಿರಲಿಲ್ಲ. ಆದರೆ ಈಗ ಕುಮಾರಸ್ವಾಮಿಯವರ ನೇತೃತ್ವದ ಸರ್ಕಾರವು ತ್ವರಿತವಾಗಿ ಜಾರಿ ಆಗುವಂತೆ ಆದೇಶದಲ್ಲಿ ಹೊರಡಿಸಿದೆ.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...