ABC

Wednesday, 6 February 2019

ರೈತರಿಗೆ ಉಚಿತ 24 ಗಂಟೆ ವಿದ್ಯುತ್​​ ನೀಡುವ ಕುರಿತು ಚಿಂತನೆ: ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಬೆಸ್ಕಾಂ ಗ್ರಾಹಕರ ಜಾಗೃತಿ ಅರಿವು ಸಮ್ಮೇಳನ-2019ರ ಸೌರ ಮೇಲ್ಛಾವಣಿ ಘಟಕ ಸಾಮರ್ಥ್ಯದ ಮೌಲ್ಯಮಾಪನ ಸದನ ಮತ್ತು ವಿದ್ಯುತ್​ ಚಾಲಿತ ವಾಹನಗಳ ರೀ ಚಾರ್ಜಿಂಗ್ ಸ್ಟೇಷನ್ ಲಾಂಛನ ಬಿಡುಗಡೆ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ದೇಶದಲ್ಲಿ
 ನಮ್ಮ ಬೆಸ್ಕಾಂ ಉತ್ತಮ ಗುಣಮಟ್ಟದ ಕೆಲಸವನ್ನು ಮಾಡಿದೆ. ಎಲ್ಲಾ ಅಧಿಕಾರಿಗಳು ಉತ್ತಮ ಸೇವೆ ಮಾಡುತ್ತಿದ್ದಾರೆ. 11 ಸಾವಿರ ಕೋಟಿ ರೂ. ಸಬ್ಸಿಡಿಗಳನ್ನು ರಾಜ್ಯ ಸರ್ಕಾರ ಗ್ರಾಹಕರಿಗೆ ಕೊಡುತ್ತಿದೆ. ಆದರೆ ಕೆಂದ್ರ ಸರ್ಕಾರ ರೈತರಿಗೆ 5 ಎಕರೆ ಜಮೀನನನ್ನು ಹೊಂದಿದವರಿಗೆ ತಿಂಗಳಿಗೆ 6 ಸಾವಿರ ರೂಪಾಯಿ ಕೊಡುತ್ತಿದೆ. ಅಂದರೆ ಕೇಂದ್ರ ಸರ್ಕಾರ ಕೇವಲ ನಮ್ಮ ರಾಜ್ಯದ ರೈತರಿಗೆ ಕೇವಲ 40 ರಿಂದ 45 ಲಕ್ಷವನ್ನಷ್ಟೇ ಖರ್ಚು ಮಾಡುತ್ತಿದೆ ಎಂದರು.

ರಾಜ್ಯ ಸರ್ಕಾರ ರೈತರಿಗೆ ಉಚಿತ 24 ಗಂಟೆ ವಿದ್ಯುತ್​​​ಅನ್ನು ಕೊಡಬೇಕೆಂದು ಚಿಂತನೆ ಮಾಡಿತ್ತಿದೆ. ಪ್ರತಿ ದಿನ 14 ಗಂಟೆ ವಿದ್ಯುತ್ ಕಳ್ಳತನವಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದರು. ಹಂತ ಹಂತವಾಗಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಅಂಡರ್ ಗ್ರೌಂಡ್ ಕೇಬಲ್ ವಿದ್ಯುತ್​ಚ್ಛಕ್ತಿ ಸಂಪರ್ಕ ಮಾಡುತ್ತಿರುವುದು ತುಂಬಾ ಒಳ್ಳೆಯದು. ಸಾರ್ವಜನಿಕರಿಗೆ ಗ್ರಾಹಕರ ಸಮಸ್ಯೆ, ಗ್ರಾಹಕರ ಕುಂದು ಕೊರತೆಗಳ ನಿವಾರಣೆಗೆ ಬೆಸ್ಕಾಂ ಮುಂದಾಗಿರುವುದು ತುಂಬಾ ಒಳ್ಳೆಯ ಕೆಲಸವಾಗಿದೆ ಎಂದರು.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...