ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗಲಿನಿಂದಲೂ, ಪ್ರತಿ ವರ್ಷ ಬಜೆಟ್ ಗಳು ಬರುತ್ತಲೇ ಇರುವಂತೆ ಈ ವರ್ಷವೂ ಬಂದಿದೆ. ಪ್ರತಿ ವರ್ಷದ ಬಜೆಟ್ ನಲ್ಲಿ ಇರುವಂತೆ ಈ ಬಾರಿಯೂ ‘ವ್ಹಾ..ವ್ಹಾ’ ಎನ್ನುವಂತ ಯೋಜನೆಗಳಿವೆ. ಆದರೆ ಈ ಬಾರಿಯಾದರೂ ಬಜೆಟ್ ನಲ್ಲಿ ಘೋಷಿಸಿದಂತೆ ಕನಿಷ್ಠ ಶೇ.30 ರಷ್ಟು ಯೋಜನೆಗಳಾದರು ಕಾರ್ಯ ರೂಪಕ್ಕೆ ಬರುತ್ತದಾ ಎಂದು ಕಾದು ನೋಡಬೇಕು.
ಏಕೆಂದರೆ ಕಳೆದ ನಾಲ್ಕುವರೇ ವರ್ಷದಿಂದ, ಮೋದಿಯ ಬಜೆಟ್ ನಲ್ಲಿ ಘೋಷಿಸುವ ‘ಬಂಪರ್ ಕೊಡುಗೆಗಳು’, ಬಜೆಟ್ ಘೋಷಣೆಯ ದಿನ ಟಿವಿಯಲ್ಲಿ ನೋಡಿದ್ದೊಂದೇ ಜನರಿಗೆ ನೆನಪು. ಅದ್ಯಾವುದು ಇನ್ನು ಕಾರ್ಯರೂಪಕ್ಕೆ ಬಂದು ನಮಗೆ ಉಪಯೋಗವಾಗಿಲ್ಲ.
ಆದರೆ ಈ ಬಾರಿಯಾದರೂ, ಚುನಾವಣೆ ಎದುರಿಸುವ ಭಯದಿಂದ, ಶೇ.೫೦ ಅಷ್ಟಾದರೂ ಯೋಜನೆಗಳು ಕಾರ್ಯರೂಪಕ್ಕೆ ಬಂದು, ಜನರಿಗೆ ಅನುಕೂಲವಾಗಲಿ ಎಂದು ಪ್ರಾರ್ಥಿಸೋಣ. ನಾವು ಅಂದುಕೊಂಡಂತೆ ಮೋದಿ ಆಡಳಿತ ‘ಬರ್ತಾ ಬರ್ತಾ ರಾಯರ ಕುದುರೆ ಕತ್ತೆ ಅಯ್ತಂತೆ’ ತರ ಇಲ್ಲ. ಮೋದಿ ಕುದುರೆಯೇ. ಆದರೆ ನಮಗೆ ಬೇಕಿರುವುದು ‘ಕತ್ತೆ’ಯಂತೆ ಜನ ಸೇವೆ ಮಾಡುವ ಜನ ಸೇವಕನೆ ಹೊರತು, ಕೇವಲ ಜನರಲ್ಲಿ ಅಭಿವೃದ್ಧಿಯ ಹಗಲುಗನಸು ಕಾಣಿಸೋ ಆಸೆಯಲ್ಲೇ ಸವಾರಿ ಮಾಡಿಸೋ ‘ಚೌಕಿದಾರ’ ಎಂದು ಹೇಳಿಕೊಂಡು ‘ಶೋಕಿದಾರ’ನಂತೆ ತಿರುಗಾಡುವ ನಾಯಕನಲ್ಲ.

No comments:
Post a Comment