ಹಾಸನ: ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಕೇಂದ್ರ ಬಜೆಟ್ ಬಗ್ಗೆ ಹೇಳಿಕೆ ನೀಡಿದ್ದು, ಕೇಂದ್ರ ಬಜೆಟ್‌ನಲ್ಲಿ ರೈತರಿಗೆ ಏನೇನೂ ಇಲ್ಲ. ಎಲ್ಲಾ ನಿರೀಕ್ಷೆ ಹುಸಿಯಾಗಿದೆ. ಒಂದೇ ಕಂತಿನಲ್ಲಿ ಸಾಲಮನ್ನಾ ಮಾಡ್ತಾರೆಂಬ ನಿರೀಕ್ಷೆಯಿತ್ತು. ಸಾಲಮನ್ನಾ ಮಾಡಿಲ್ಲ, ಅದು ಹುಸಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಲ್ಲದೇ, ರೈತರಿಗೆ ನಾಲ್ಕು ತಿಂಗಳಿಗೆ ಎರಡು ಸಾವಿರ ಕೊಡ್ತೀವಿ ಅಂತ ಹೇಳಿದ್ದಾರೆ. ತಿಂಗಳಿಗೆ 500 ರೂ. ಅಕೌಂಟಿಗೆ ಬೀಳುತ್ತೆ ಅಂತಾರೆ. ನಾವೇ ದಿನಕ್ಕೆ 500 ಕೂಲಿ ಕೊಡ್ತೀವಲ್ರೀ. ರೈತರಿಗೆ ಏನೇನು ಕೊಟ್ಟಿದ್ದಾರೆ ನೀವೇ ಹೇಳಿ ಎಂದು ರೇವಣ್ಣ ವ್ಯಂಗ್ಯವಾಡಿದ್ದಾರೆ.
ಇನ್ನು ಲೋಕಸಭೆ ಚುನಾವಣೆ ಬಗ್ಗೆ ಮಾತನಾಡಿದ ರೇವಣ್ಣ, ತ್ರಿಕೋನ ಸ್ಪರ್ಧೆಗೂ ನಾವ್ ರೆಡಿ. ಎಲ್ಲದಕ್ಕೂ ನಾವ್ ಸಿದ್ದ ಇದ್ದೇವೆ ಎನ್ನುವುದರ ಮೂಲಕ ಪರೋಕ್ಷವಾಗಿ ರೇವಣ್ಣ ಕಾಂಗ್ರೆಸ್‌ಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.
ಇನ್ನು ಲೋಕಸಭಾ ಚುನಾವಣೆ ಮೈತ್ರಿ ಬಗ್ಗೆ ರೇವಣ್ಣ ಮಾತನಾಡಿದ್ದು, ಟಿಕೆಟ್ ಹಂಚಿಕೆ ಬಗ್ಗೆ ದೇವೇಗೌಡರು ತೀರ್ಮಾನಿಸ್ತಾರೆ. ಮೈತ್ರಿಯಾದ್ರೂ ಸ್ಪರ್ಧೆ ಮಾಡ್ತೀವಿ. ಆಗಿಲ್ಲ ಅಂದ್ರೂ ಸ್ಪರ್ಧೆಗೆ ಸಿದ್ದ ಇದ್ದೇವೆ. ಹಾಸನದಲ್ಲಿ ದೇವೇಗೌಡರೇ ಸ್ಪರ್ಧಿಸಲಿ . ಅತಿ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಿಸ್ತೀವಿ. ದೇವೇಗೌಡರ ತೀರ್ಮಾನವೇ ಅಂತಿಮ ಎಂದಿದ್ದಾರೆ.

No comments:
Post a Comment