ABC

Saturday, 23 February 2019

ಏರ್ ಷೋದಲ್ಲಿ ಬೆಂಕಿ ಅನಾಹುತ ಕಾರು ಮಾಲೀಕರಿಗೆ: ನಗರ ಪೊಲೀಸ್ ಆಯುಕ್ತರ ಅಭಯ.

ಬೆಂಗಳೂರು: ಬೆಂಕಿ ಅನಾಹುತದಲ್ಲಿ ಕಾರನ್ನು ಕಳೆದುಕೊಂಡಿರುವ ಮಾಲೀಕರ ಸಹಾಯಕ್ಕಾಗಿ ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ಸೂಕ್ತ ನೆರವು ನೀಡಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್‍ಕುಮಾರ್ ತಿಳಿಸಿದ್ದಾರೆ.ಏರ್ ಶೋ ವೀಕ್ಷಿಸಲು ಬಂದವರು ಕಾರಗಳನ್ನು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದರು. ಸುಮಾರು 12.20ರ ಸಮಯದಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು, 300ಕ್ಕೂ ಹೆಚ್ಚು ವಾಹನಗಳು ಸುಟ್ಟು ಹೋಗಿವೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಟ್ಟು ಹೋಗಿರುವ ಕಾರನ್ನು ಮಾಲೀಕರು ಪತ್ತೆ ಹಚ್ಚುತ್ತಿದ್ದಾರೆ. ಅವರ ನೆರವಾಗಿ 4 ಹೆಲ್ಪ್ ಡೆಸ್ಕ್‍ಗಳನ್ನು ತೆರೆದಿದ್ದೇವೆ. ಅವರು ಕಾರನ್ನು ಗುರುತಿಸಿ ನೋಂದಣಿ ಸಂಖ್ಯೆಯನ್ನು ನೀಡಿ ನಾಳೆ ಯಲಹಂಕ ಪೊಲೀಸ್ ಠಾಣೆಗೆ ಬಂದು ದಾಖಲೆ ನೀಡಿದರೆ ಪೊಲೀಸ್ ಇಲಾಖೆಯಿಂದ ನೀಡುವಂತಹ ದಾಖಲೆಗಳನ್ನು ಕೊಡಲಾಗುವುದು.
ಆರ್‍ಟಿಒ ಅಧಿಕಾರಿಗಳು ಹಾಗೂ ನಮ್ಮ ಅಧಿಕಾರಿಗಳ ಸಹಯೋಗಯೊಂದಿಗೆ ಕಾರು ಮಾಲೀಕರಿಗೆ ತಮ್ಮ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ವಿಮಾ ಕಂಪನಿಗೆ ಬೇಕಾದ ದಾಖಲೆಗಳನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.

ಕಾರಿನ ಮಾಲೀಕರು ಮತ್ತು ಅವರ ಕುಟುಂಬದವರು ಮನೆಗಳಿಗೆ ತೆರಳಲು ಬಿಎಂಟಿಸಿ ಬಸ್ ವ್ಯವಸ್ಥೆಯನ್ನು ಸಹ ಮಾಡಲಾಗಿದೆ ಎಂದು ಸುನೀಲ್‍ಕುಮಾರ್ ತಿಳಿಸಿದರು.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...