ABC

Saturday, 23 February 2019

ಕುಮಾರಣ್ಣನ ಕೈ ಕೆಳಗೆ ಕೆಲಸ‌ ಮಾಡುವುದು ನನ್ನ ಪಾಲಿನ ಪುಣ್ಯ: ಡಿ.ಕೆ. ಶಿವಕುಮಾರ್.

ರಾಮನಗರ: ಧರಂಸಿಂಗ್ ನಂತರ ಇದೀಗ ಜಾತ್ಯಾತೀತ ತತ್ವದ ಆಧಾರದ ಮೇಲೆ ಸಮ್ಮಿಶ್ರ ಸರ್ಕಾರ ರಚನೆಗೊಂಡಿದೆ. ಅದರಲ್ಲೂ‌ ಕುಮಾರಸ್ವಾಮಿಯವರ ಕೈ ಕೆಳಗೆ ಕೆಲಸ‌ ಮಾಡುವುದು ನನ್ನ ಪಾಲಿನ ಪುಣ್ಯ. ಅವರ ಕನಸನ್ನು ರಾಮನಗರ ಜಿಲ್ಲೆಯ ಜನರು ನನಸು ಮಾಡಿದ್ದಾರೆ ಎಂದು ಸಚಿವ ಡಿ.ಕೆ.ಶಿವಕುಮಾರ್​ ಹೇಳಿದರು.

ನಗರದಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಮಂತ್ರಿಯಾದ ಬಳಿಕ ಅಭಿವೃದ್ಧಿಪಡಿಸಲು ಶ್ರಮಿಸಿದ್ದೇನೆ.‌ ಅಧಿಕಾರ ಮುಖ್ಯ ಅಲ್ಲ. ಅಧಿಕಾರದಲ್ಲಿ‌ದ್ದಾಗ ಏನು ಮಾಡಿದ್ದೇವೆ ಎಂಬುದಷ್ಟೆ ಮುಖ್ಯ ಎಂದರು.ರೈತನಿಗೆ ಲಂಚ ಇಲ್ಲ. ಪ್ರಮೋಷನ್ ಇಲ್ಲ. ಹೀಗಾಗಿ ನೀರಾವರಿ ಇಲಾಖೆ ಮೂಲಕ ರೈತರ ಬೆನ್ನಿಗೆ ನಿಲ್ಲಲು ಮುಖ್ಯಮಂತ್ರಿಗಳ ಸೂಚನೆ ಕಾರಣವಾಗಿದೆ. ಕಾವೇರಿ ನಿಗಮದ ವತಿಯಿಂದ ಹತ್ತಾರು ಯೋಜನೆ ಮಾಡಿದ್ದೇವೆ. ಸೌಟು ನಮ್ಮ ಕೈಯಲ್ಲಿದೆ. ಹೀಗಾಗಿ ಯಾರು ಎಲ್ಲಿಯೇ ಕುಳಿತರು ಊಟ ಬಡಿಸುತ್ತೇವೆ. ಸೌಟು ನಮ್ಮ ಬಳಿಯೇ ಇದೆ. ಎಲೆಯಲ್ಲಿ ಎರಡು ಖಂಡ ಜಾಸ್ತಿ ಹಾಕುತ್ತೇವೆ. ಬಜೆಟ್​​ನಲ್ಲಿ ನಮ್ಮ ಜಿಲ್ಲೆಯ ಹೆಸರು ಹಾಕಿಕೊಳ್ಳಬೇಕಿಲ್ಲ. ನಮಗೆ ಗೊತ್ತು. ನಮ್ಮ ಜಿಲ್ಲೆ ಅಭಿವೃದ್ಧಿ ನಾವು‌ ಮಾಡುತ್ತೇವೆ ಎಂದು ಹೇಳಿದರು.

ಇನ್ನು ಯಡಿಯೂರಪ್ಪ ಅವರಿಗೆ ತಾಳ್ಮೆಯೇ ಇಲ್ಲ. ಒಂದು ವರ್ಷ ನಾವೇನು ಮಾಡುತ್ತೇವೆ ಅಂತ ನೋಡ್ರಪ್ಪ. ಇವರ ಜತೆಗೆ ನಿಮ್ಮ ಮಾಜಿ ಎಂಎಲ್ಎ ಬೇರೆ ಸೇರಿಕೊಂಡಿದ್ದಾರೆ. ಬರೀ ಬೆಂಗಳೂರಿನಲ್ಲಿ ಕುಳಿತುಕೊಂಡು ರಾಜಕೀಯ ಮಾಡಿ ನಮ್ಮನ್ನು ಇಳಿಸಲು ಯತ್ನಿಸುತ್ತೀರಾ. ಸಾಲಮನ್ನಾದ ವೇಳೆ ಕೇಂದ್ರದಿಂದ ಕಾಲುಭಾಗ ಹಣವನ್ನು ಕೊಡಿಸಿಲ್ಲ. ಬರೀ ಹಸಿರು ಟವಲ್ ಹಾಕಿಕೊಂಡರೆ ರೈತರ ಮಕ್ಕಳಾಗೋದಿಲ್ಲ ಎಂದು ಟೀಕಿಸಿದರು.ಇನ್ನು ರಾಮನಗರ ಉಪ ಚುನಾವಣೆ ವೇಳೆ ಕಂಡವರ ಮಕ್ಕಳ ಕರೆದುಕೊಂಡು ಬಂದು ಹರಕೆ ಕುರಿ ಮಾಡಿದ್ದಾರೆ. ಹೀಗಾಗಿ ಚಂದ್ರಶೇಖರ್ ನಡೆಯಿರಿ ಅಂತ ಕುಮಾರಣ್ಣನ ಕಡೆ ಬಂದ. ಇನ್ನು ನಮ್ಮ ಹಾಗೂ ಕುಮಾರಣ್ಣನ ಮನೆ ಬಾಗಿಲು ಸದಾ ಕಾಲ ತೆರೆದಿದೆ. ಬಿಜೆಪಿಯ ದೊಡ್ಡವರು ನಮಗೆ ಬೇಡ. ಕಾರ್ಯಕರ್ತರು ನಮ್ಮ ಮನೆಗೆ ಬನ್ನಿ‌. ಬಡವರ ಮಕ್ಕಳನ್ನು ನಾವು ಕಾಪಾಡುತ್ತೇವೆ. ಹಾಲು ಕುಡಿದ ಮಕ್ಕಳೇ ಬದುಕಲ್ಲ. ಇನ್ನು ವಿಷ ಕುಡಿದ ಮಕ್ಕಳು ಬದುಕುತ್ತಾರಾ? ಇನ್ನು ಸಿನಿಮಾ ಟ್ರೇಲರ್ ಮುಗೀತು. ಮುಂದಿನ ಚುನಾವಣೆಯಲ್ಲಿ ಡಿ.ಕೆ.ಸುರೇಶ್ ಅವರನ್ನು ಬೆಂಬಲಿಸಿ. ಕಾಂಗ್ರೆಸ್ ಅಥವಾ ಜೆಡಿಎಸ್ ಸೇರಿಕೊಳ್ಳಿ ಎಂದು‌ ಮತದಾರರಿಗೆ ಕರೆ ನೀಡಿದರು.

ರೆಡಿಮೇಡ್ ಗಂಡು ನಾವಿರುವಾಗ ಇನ್ನೊಬ್ಬ ಗಂಡು ಬರೋಕೆ ಸಾಧ್ಯವೇ ಇಲ್ಲ. ಆಪರೇಷನ್ ಕಮಲ ಬಿಟ್ಟು ಚುನಾವಣೆ ಮಾಡಿದರೂ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ. ಕುಮಾರಣ್ಣನ ನೋಡ್ಬೇಕು‌ ಅಂತ ದಿನಾಲು ಮನೆಗೆ‌ ಫೋನ್ ಬರುತ್ತೆ. ಹೀಗಾಗಿ ಬರುವ ಕಾರ್ಯಕರ್ತರೆಲ್ಲ ಮೈತ್ರಿ ಪಕ್ಷಕ್ಕೆ ಬನ್ನಿ ಎಂದು ಆಹ್ವಾನ ನೀಡಿದರು.ಇನ್ನು ನಾವು ಜಾತ್ಯಾತೀತ ಪಕ್ಷದವರು. ಹೀಗಾಗಿ ಪೊಲೀಸರಿಗೆ ಈಗಾಗಲೇ ಸೂಚಿಸಲಾಗಿದ್ದು, ವೈಷಮ್ಯದ ಹಿನ್ನೆಲೆಯಲ್ಲಿ‌ ಕೇಸ್ ಹಾಕುವಂತಿಲ್ಲ ಎಂದಿದ್ದೇವೆ. ರಾಮನಗರ ಹಾಗೂ ಚನ್ನಪಟ್ಟಣದ ಮನೆ ಬಾಗಿಲಿಗೆ ಲಕ್ಷ್ಮೀ ಬಂದಿದೆ. ಹೀಗೆ ನಮ್ಮ ಡಿ.ಕೆ.ಸುರೇಶ್ ಅವರನ್ನು ನಿಮ್ಮ ಮನೆಗೆ ಕಳುಹಿಸುತ್ತೇವೆ. ಎಲ್ಲರೂ ಒಂದಾಗಿ ಚುನಾವಣೆ ಎದುರಿಸಿ ಇತಿಹಾಸ ಸೃಷ್ಟಿಸಬೇಕು ಎಂದರು.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...