ಬೆಂಗಳೂರು: ಆಪರೇಷನ್ ಕಮಲಕ್ಕೆ ತಿರುಗೇಟು ನೀಡಲು ಮೈತ್ರಿ ಸರ್ಕಾರ ಭರ್ಜರಿ ಫ್ಲಾನ್ ಮಾಡಿದೆ. ಬಿಜೆಪಿಗೆ ಸೇರಲು ಅಣಿಯಾಗಿರುವ ಶಾಸಕರನ್ನು ತ್ರಿಶಂಕು ಸ್ಥಿತಿಯಲ್ಲಿಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಬ್ಯಾಕ್ ಟು ಬ್ಯಾಕ್ ಪ್ಲಾನ್ ರೂಪಿಸಿದೆ.
ಸದನಕ್ಕೆ ಗೈರಾದವರನ್ನ ಪಕ್ಷದಿಂದ ಅಮಾನತು ಮಾಡುವುದು. ನಂತರ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡುವುದು. ಇದನ್ನೂ ಮೀರಿ ರಾಜೀನಾಮೆಗೆ ಮುಂದಾದ್ರೆ, ಮತ್ತೊಂದು ಪ್ಲಾನ್ ಮಾಡಿದ್ದು, ರಾಜೀನಾಮೆ ಸ್ವೀಕರಿಸಿ ವಿಚಾರಣೆ ನಡೆಸದೇ ಕಾಯ್ದಿಡುವುದು. ಸದನದಿಂದ ಶಾಸಕರನ್ನು ಹೊರಗಿಡುವ ತಂತ್ರ ರೂಪಿಸುವುದು.
ಒಂದು ವೇಳೆ ಶಾಸಕರು ರಾಜೀನಾಮೆಗೆ ಒತ್ತಡ ತಂದರೆ ಇನ್ನೊಂದು ಪ್ಲಾನ್ ರಚಿಸಿದ್ದು, ವಿಪ್ ಉಲ್ಲಂಘನೆಯಡಿ ದೂರು ದಾಖಲಿಸುವುದಲ್ಲದೇ, ವಿಧಾನಸಭೆ ಸದಸ್ಯತ್ವದಿಂದಲೇ ಅನರ್ಹಗೊಳಿಸುವುದು. ಈ ಮೂಲಕ ಬಿಜೆಪಿಗೆ ಅತೃಪ್ತರು ಹೋಗದಂತೆ ಬ್ರೇಕ್ ಹಾಕಲು ಮೈತ್ರಿ ಸರ್ಕಾರ ತಂತ್ರಗಾರಿಕೆ ರೂಪಿಸಿದ್ದಾರೆ.


No comments:
Post a Comment