ರಾಯಚೂರು:ಅಪರೇಶನ್ ಕಮಲದ ಹೀನಾಯ ಹಿನ್ನಡೆ ಒಂದೆಡೆಯಾದರೆ ಅಪರೇಶನ್ ಆಡಿಯೋ ಮೂಲಕ ಕಾನೂನಿನ ಕುಣಿಕೆಗೆ ಯಡ್ಯೂರಪ್ಪ ಸಿಕ್ಕಿಬಿದ್ದು ರಾಜಕೀಯ ಬದುಕೇ ಹಾಳು ಮಾಡಿಕೊಂಡರೇನೋ ಅಂತ ಜನ ಆಡಿಕೊಳ್ಳುವಂತಾಗಿದೆ ಯಡ್ಯೂರಪ್ಪ ಅವರ ಪರಿಸ್ಥಿತಿ. ರಾಯಚೂರು ಜಿಲ್ಲೆಯ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಆಪರೇಷನ್ ಆಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗುರುಮಿಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ನಾಗನಗೌಡ ಕಂದಕನೂರು ಅವರ ಪುತ್ರ ಶರಣಗೌಡ ಕಂಡಕೂರು ಎಫ್ಐಆರ್ ದಾಖಲು ಮಾಡಿದ್ದಾರೆ.ಕಳೆದ ಫೆಬ್ರವರಿ 7ರಂದು ರಾತ್ರಿ ಶಾಸಕ ನಾಗನಗೌಡ ಕಂದಕನೂರು ಅವರ ಪುತ್ರ ಶರಣಗೌಡ ಅವರನ್ನು ದೇವದುರ್ಗ ಪ್ರವಾಸಿ ಮಂದರಕ್ಕೆ ಕರೆಸಿಕೊಂಡು ಬಿಜೆಪಿಗೆ ಬರುವಂತೆ ಹಣದ ಅಮಿಷವೊಡ್ಡಲಾಗಿತ್ತು. ಈ ಮಾತುಕತೆಯು ಆಡಿಯೊ ಮೂಲಕ ದೃಢ ಮಾಡಿದ್ದಲ್ಲದೆ ,ಕುಮಾರಸ್ವಾಮಿ ಆಡಿಯೊ ಬಿಡುಗಡೆ ಮಾಡಿದ್ದರು ಕೂಡ. ಈ ಎಲ್ಲಾ ಬೆಳವಣಿಗೆಗಳು ರಾಜಕೀಯ ಅಸ್ಥಿರತೆಗೆ ಕಾರಣವಾಗಿ ಇದೀಗ ದೂರು ದಾಖಲು ಮಾಡುವ ಮೂಲಕ ನಿರ್ಣಾಯಕ ಹಂತ ತಲುಪಿದೆ. ಅಲ್ಲದೆ ದೂರು ದಾಖಲಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರಿಗೆ ಮತ್ತೊಂದು ಹಿನ್ನಡೆಯಾಗಿದ್ದು, ಮೊದಲ ಆರೋಪಿಯಾಗಿ ಬಿ ಎಸ್ ಯಡಿಯೂರಪ್ಪ, 2ನೇ ಆರೋಪಿ ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ , 3ನೇ ಆರೋಪಿ ಹಾಸನ ಶಾಸಕ ಪ್ರೀತಂಗೌಡ ಮತ್ತು ಪತ್ರಕರ್ತ ಮರಮಕಲ್ ಎನ್ನುವರನ್ನು 4ನೇ ಆರೋಪಿಯನ್ನಾಗಿ ಮಾಡಲಾಗಿದೆ.
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಯಡಿಯೂರಪ್ಪ ಹಾಗೂ ಶಾಸಕರಾದ ಪ್ರೀತಂ ಗೌಡ, ಕೆ ಶಿವನಗೌಡ ನಾಯಕ್ ಮತ್ತು ಮಾಜಿ ಪತ್ರಕರ್ತರೊಬ್ಬರ ವಿರುದ್ಧ ಗುರುಮಿಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ನಾಗನಗೌಡ ಕಂದಕನೂರು ಅವರ ಪುತ್ರ ಶರಣಗೌಡ ಕಂಡಕೂರು ಎಫ್ಐಆರ್ ದಾಖಲು ಮಾಡಿದ್ದಾರೆ. 10 ಕೋಟಿ ರೂಪಾಯಿ ನೀಡುವುದಾಗಿ ಆಮಿಷವೊಡ್ಡಿದ್ದಲ್ಲದೆ ತಂದೆಯನ್ನು ಮನವೊಲಿಸುವಂತೆ ಮಾಡಬೇಕು ಇಲ್ಲದೇ ಹೋದರೆ ರಾಜಕೀಯ ಜೀವನ ನಾಶ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಹೇಳಲಾಗಿದೆ. ಲೋಕಸಭೆಯ ಚುನಾವಣಾ ಹೊಸ್ತಿಲಲ್ಲಿರುವ ಯಡ್ಯೂರಪ್ಪನವರಿಗೆ ಈ ಎಲ್ಲ ಬೆಳವಣಿಗೆಗಳು ಮುಳ್ಳಾಗಿ ಪರಿಣಮಿಸಿದರೂ ಅಚ್ಚರಿಯಿಲ್ಲ. ಬಿಎಸ್ ವೈ ಗೆ ಕಂಟಕಗಳ ಮೇಲೆ ಕಂಟಕ.

No comments:
Post a Comment