ABC

Thursday, 21 February 2019

ಬಡವರನ್ನು ಸೆಳೆಯುತ್ತಿರುವ: ಕುಮಾರಸ್ವಾಮಿಯವರ ಕನಸಿನ ಕೂಸು ಬಡವರ ಬಂಧು.

ಬೆಂಗಳೂರು: ಬೀದಿಬದಿ ವ್ಯಾಪಾರಿಗಳನ್ನು ಮೀಟರ್ ಬಡ್ಡಿ ದಂಧೆಕೋರರ ಹಿಡಿತದಿಂದ ತಪ್ಪಿಸುವ ಸಲುವಾಗಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ ಅವರು  ಜಾರಿಗೆ ತಂದಿರುವ ಬಡವರ ಬಂಧು ಯೋಜನೆಗೆ ಜನ ನಿಧಾನವಾಗಿ ಆಕರ್ಷಿತರಾಗುತ್ತಿದ್ದಾರೆ ಎಂಬುದಕ್ಕೆ ಇಲ್ಲೊಂದು ಉದಾಹರಣೆ ಇದೆ. ಸಹಕಾರ ಸಚಿವ ಬಂಡೆಪ್ಪ ಖಾಶೆಂಪುರ ಜ.30ರಂದು ಸಂಜೆ ಹೊಸಪೇಟೆಗೆ ಕಾರಿನಲ್ಲಿ ತೆರಳುತ್ತಿದ್ದರು. ಗೊರಗುಂಟೆಪಾಳ್ಯದ ಟ್ರಾಫಿಕ್​ನಲ್ಲಿ ನಿಂತಿದ್ದಾಗ ಟವೆಲ್ ಮಾರುವ ಯುವಕನೊಬ್ಬ ‘ಬಡವರ ಬಂಧು ಸಾರ್’ ಎಂದು ಕೂಗಿ ಕರೆದ. ಆತನನ್ನು ಕರೆದು ಅವನ ಮೊಬೈಲ್ ನಂಬರ್ ಪಡೆದು ಸಚಿವರು ಹೋಗಿದ್ದರು.
ಬೆಂಗಳೂರಿಗೆ ವಾಪಸ್ ಬಂದ ನಂತರ ಆತನ ಬಗ್ಗೆ ಮಾಹಿತಿ ಪಡೆದರು. ಆ ಯುವಕ ಕೊಪ್ಪಳ ಜಿಲ್ಲೆ ಕೂಕನೂರ ತಾಲೂಕು ತಳಬಾಳು ಗ್ರಾಮದ ಕಳಕಯ್ಯಸ್ವಾಮಿ. ಪಿಯುಸಿ ಫೇಲಾಗಿರುವ ಈತ ಕುಟುಂಬ ನಿರ್ವಹಣೆ ಹಾಗೂ ಸಹೋದರನ ವಿದ್ಯಾಭ್ಯಾಸದ ಸಲುವಾಗಿ ಬೆಳಗ್ಗೆ 10 ಗಂಟೆ ತನಕ ಹೂವಿನ ವ್ಯಾಪಾರ ಮಾಡಿದರೆ, ನಂತರ ಸಂಜೆಯವರೆಗೆ ಟವೆಲ್ ಮಾರುತ್ತಾನೆ. ವ್ಯಾಪಾರಕ್ಕೆ ಶೇ.15ರ ಬಡ್ಡಿದರದಲ್ಲಿ ಸಾಲ ಪಡೆಯುತ್ತಾನೆ. ಸಚಿವರು ಯೋಜನೆಯ ನೋಡಲ್ ಅಧಿಕಾರಿಗೆ ಕಳಕಯ್ಯಸ್ವಾಮಿ ಮೊಬೈಲ್ ನಂಬರ್ ಕೊಟ್ಟು ಆತನಿಗೆ 10 ಸಾವಿರ ರೂ. ಸಾಲದ ವ್ಯವಸ್ಥೆಗೆ ಸೂಚನೆ ನೀಡಿದರು. ಬುಧವಾರ ಬೆಂಗಳೂರಿನಲ್ಲಿ ಚೆಕ್ ವಿತರಣೆ ಮಾಡಿದ್ದು, ಯೋಜನೆ ಈ ರೂಪದಲ್ಲಿ ಅರ್ಹರಿಗೆ ತಲುಪುತ್ತಿರುವುದಕ್ಕೆ ಬಂಡೆಪ್ಪ ಖಾಶೆಂಪುರ ಭಾವುಕರಾದರು.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...