ದೇಶದಲ್ಲಿ ದೊಡ್ಡ ದೊಡ್ಡ ಉದ್ಯಮಿಗಳು ಮಾತ್ರ ದಾನ ಧರ್ಮ ಕೊಟ್ಟಿದ್ದು ಹೈಲೈಟ್ ಆಗುತ್ತೆ ಆದರೆ ಇಲ್ಲೊಬ್ಬರು ವೃದ್ಧೆ ಭಿಕ್ಷುಕಿ ಮಹಿಳೆ ತನ್ನ ಸಾವಿನ ಬಳಿಕವೂ ಇವರೆಲ್ಲರನ್ನು ಮೀರಿಸಿ ಯೋಧರಿಗೆ ಆರ್ಥಿಕ ನೆರವು ಆಗುವುದರ ಮೂಲಕ ಮಾನವೀಯತೆಗೆ ಭೇದಭಾವ ಇಲ್ಲ ಎಂಬುವುದನ್ನು ಸಾಬೀತು ಪಡಿಸಿದ್ದಾರೆ. ಹೌದು ರಾಜಸ್ಥಾನದ ಅಜ್ಮೀರ್ ನಲ್ಲಿ ಓರ್ವ ವೃದ್ದೆಯೊಬ್ಬರು ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಆಕೆ ನಿಧನರಾಗಿದ್ದಾರೆ. ಆಕೆ ಭಿಕ್ಷೆ ಬೇಡಿ ಕೂಡಿಟ್ಟ 6.61 ಲಕ್ಷ ರೂ.ವನ್ನು ಭಾರತದ ಯೋಧರಿಗೆ ದಾನ ಮಾಡಬೇಕು ಎಂದು ಬಯಸಿದ್ದರು. ಇದೀಗ ಅವರ ಅಂತಿಮ ಇಚ್ಛೆಯಂತೆ ಆ ಹಣವನ್ನು ಪುಲ್ವಾಮಾ ಕಾಶ್ಮೀರ ದಲ್ಲಿ ಹುತಾತ್ಮರಾದ ಸಿಆರ್ಪಿಎಫ್ ಜಾವಾನರಿಗೆ ಅದನ್ನು ದಾನ ಮಾಡಲಾಗಿದೆ. ನಂದಿನಿ ಶರ್ಮಾ ಹೆಸರಿನ ಈ ವೃದ್ಧೆ ಅಜ್ಮೀರ್ ಅಂಬೆ ಮಾತಾ ಮಂದಿರದ ಹೊರಕೆ ಹಲವು ವರ್ಷಗಳಿಂದ ಭಿಕ್ಷೆ ಬೇಡುತ್ತಿದ್ದರು. ಸಾಯುವ ಮುನ್ನ ತಾನು ಕೂಡಿಟ್ಟ ಹಣವನ್ನು ದೇಶದ ಯಾವುದೇ ಪುಣ್ಯ ಕಾರ್ಯಕ್ಕೆ ವ್ಯಯಿಸಬೇಕು ಎಂದು ಅವರು ತನ್ನ ಆಪ್ತರಿಗೆ ಉಪದೇಶ ಮಾಡಿದ್ದರು. ಆಕೆ ಪ್ರತಿದಿನ ಬ್ಯಾಂಕ್ ನಲ್ಲಿ ಹಣ ಜಮಾಯಿಸುತ್ತಿದ್ದರು ಮತ್ತು ತನ್ನ ಮರಣದ ಬಳಿಕ ತನ್ನ ಹಣವನ್ನು ಇಂತಹ ಕಾರ್ಯಗಳಿಗೆ ಉಪಯೋಗಿಸಬೇಕು ಎಂದು ಇಬ್ಬರು ವಿಶ್ವಸ್ಥರಿಗೆ ವಹಿಸಿಕೊಟ್ಟಿದ್ದರು.

ಯೋಧರ ಕುಟುಂಬಗಳಿಗೆ ಸಹಾಯ ಮಾಡುವ ಉದ್ದೇಶದೊಂದಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಣವನ್ನು ದೇಣಿಗೆ ನೀಡುವ ಬಗ್ಗೆ ನಂದಿನಿಯವರ ಹಣದೊಂದಿಗೆ ಅವರು ನನ್ನ ಕಚೇರಿಗೆ ಬಂದು ಮಾತನಾಡಿದರು. ನಾನು ಅವರಿಗೆ ಔಪಚಾರಿಕವಾಗಿ ಕಾನೂನು ಸಹಾಯ ಮಾಡಿದೆ” ಎಂದು ಅಜ್ಮೀರ್ ಕಲೆಕ್ಟರ್ ವಿಶ್ವ ಮೋಹನ್ ಶರ್ಮಾ ಹೇಳಿದರು.
ಈ ಹಣ ಬಿಕ್ಷಾಟನೆಯಿಂದ ಬಂದಿದ್ದರಿಂದ ಈ ಹಣವನ್ನು ಒಂದು ಉತ್ತಮ ಕಾರ್ಯಕ್ಕೆ ಬಳಸಬೇಕು ಎಂದು ನಾನು ಬಯಸಿದ್ದೆ. ಈಗ ಅದು ಕೂಡಿಬಂದಿದೆ ಎಂದು ನಂದಿನಿಯ ಪೋಷಕ ಸಂದೀಪ್ ಗೌರ್ ಹೇಳಿದ್ದಾರೆ.
No comments:
Post a Comment