ಕೇಂದ್ರದಲ್ಲಿ ಲೋಕಪಾಲ್ ಮಸೂದೆ ಹಾಗೂ ರಾಜ್ಯಗಳಲ್ಲಿ ಲೋಕಾಯುಕ್ತ ಜಾರಿಗೆ ಆಗ್ರಹಿಸಿ ಕಳೆದ ಕೆಲ ದಿನಗಳಿಂದ ಉಪವಾಸ ಸತ್ಯಾಗ್ರಹವನ್ನು ಆಚರಿಸುತ್ತಿರುವ ಅಣ್ಣಾ ಹಜಾರೆ, ನನಗೇನಾದರೂ ಆದರೆ ಪ್ರಧಾನಿ ನರೇಂದ್ರ ಮೋದಿಯೇ ಅದಕ್ಕೆ ಕಾರಣ ಎಂದು ಹೇಳಿದ್ದಾರೆ.
81 ವರ್ಷದ ಅಣ್ಣಾ ಹಜಾರೆ ಜ.30ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಜನ ನನ್ನನ್ನು ಪರಿಸ್ಥಿತಿಯನ್ನು ನಿಭಾಯಿಸಿದ ವ್ಯಕ್ತಿ ಎನ್ನುತ್ತಾರೆ. ಒಂದು ವೇಳೆ ನನಗೇನಾದರೂ ಆದರೆ ಪ್ರಧಾನಿ ಮೋದಿಯಲ್ಲಿ ಕೇಳಬೇಕು ಎಂದಿದ್ದಾರೆ.
ಒಂದು ವೇಳೆ ಲೋಕಪಾಲ್ ಅನುಷ್ಠಾನಗೊಳ್ಳುವುದು ಎಂದರೆ ಪ್ರಧಾನಿಗೆ ಭಯ ತರಿಸುತ್ತಿದೆ. ಲೋಕಪಲ್ ತನಿಖಾ ವ್ಯಾಪ್ತಿಗೆ ಪ್ರಧಾನಿ, ಮುಖ್ಯಮಂತ್ರಿ, ಸಚಿವರು ಸೇರಿದಂತೆ ಎಲ್ಲರೂ ಒಳಪಡುತ್ತಾರೆ. ಇದು ಕೆಲವರಿಗೆ ಭಯ ತಂದಿದೆ ಎಂದು ಹೇಳಿದ್ದಾರೆ.
No comments:
Post a Comment