ABC

Tuesday, 5 February 2019

ಸಿಎಂ ಕುಮಾರಸ್ವಾಮಿಯವರಿಗೆ ಹೊಸದೊಂದು ಬೇಡಿಕೆಯಿಟ್ಟ ನವರಸನಾಯಕ..!! ಅಷ್ಟಕ್ಕೂ ಆ ಬೇಡಿಕೆ ಏನ್ ಗೊತ್ತಾ..?

ರಾಜ್ಯ ಸರ್ಕಾರಕ್ಕೆ ಹಲವಾರು ರೀತಿಯ ಬೇಡಿಕೆಗಳು ಬರುತ್ತಿರುತ್ತವೆ.. ಸಮ್ಮಿಶ್ರ ಸರ್ಕಾರ ರಚನೆಯಾದ ದಿನದಿಂದಲೂ ಕೂಡ ಒಂದಲ್ಲ ಒಂದು ಯೋಜನೆಗಳನ್ನು ಜಾರಿಗೆ ತಂದಿದೆ… ರೈತರ ಸಾಲಮನ್ನಾ ಮಾಡಲು ಕುಮಾರಸ್ವಾಮಿಯವರು ಸಾಕಷ್ಟು ಪ್ರಯತ್ನ ಮಾಡಿ ಕೊನೆಗೆ ಅದರಲ್ಲಿ ಯಶಸ್ವಿಯಾಗಿದ್ದಾರೆ.. ರೈತರ ಸಾಲಮನ್ನಾ ಆಯ್ತು. ಇದೀಗ ಬಡ ಮಕ್ಕಳ ಓದಿಗೆ ಸಹಾಯವಾಗಲು ವಿದ್ಯಾ ಸಾಲಮನ್ನಾ ಮಾಡಬೇಕು ಎಂದು ನವರಸನಾಯಕ ಜಗ್ಗೇಶ್  ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದ್ದಾರೆ.

ಬಡ ಮಕ್ಕಳು ಎಷ್ಟೋ ಜನ ವಿದ್ಯಾಭ್ಯಾಸಕ್ಕಾಗಿ ಸಾಲ ಮಾಡಿ ತೀರಿಸಲಾಗದೇ ಒದ್ದಾಡುತ್ತಿರುತ್ತಾರೆ. ಅಂತಹವರ ಸಾಲಮನ್ನಾ ಮಾಡಲು ಯೋಜನೆ ಕೈಗೊಳ್ಳಿ ಎಂದು ಜಗ್ಗೇಶ್ ಸಿಎಂ ಕುಮಾರಸ್ವಾಮಿಗೆ ಟ್ವಿಟರ್ ಮೂಲಕ ಮನವಿ ಮಾಡಿದ್ದಾರೆ. ಸಿನಿಮಾ ನಟರ ಪರ ಪ್ರಚಾರ ಪಕ್ಕಕ್ಕಿಟ್ಟು ಬಡ ಮಕ್ಕಳ ವಿದ್ಯಾರ್ಥಿಗಳ ಸಾಲಮನ್ನಾ ಮಾಡಲು ಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡಿ ಎಂದು ತಮ್ಮ ಅಭಿಮಾನಿಗಳಿಗೂ ಮನವಿಯನ್ನು ಮಾಡಿದ್ದಾರೆ. ಜಗ್ಗೇಶ್ ಈ ರೀತಿ ಬರೆದುಕೊಳ್ಳುತ್ತಿದ್ದಂತೆ ಯಾರೋ ಅವರಿಗೆ ನೀವು ಬಡಮಕ್ಕಳಿಗಾಗಿ ಏನು ಮಾಡಿದ್ದೀರಿ ಎಂದು ಕೇಳಿದ್ದಾರೆ. ಇದಕ್ಕೆ ಜಗ್ಗೇಶ್ ತಾವು ಪ್ರತಿವರ್ಷ 10 ಬಡಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿರುವುದಾಗಿ ಹೇಳಿದ್ದಾರೆ.ಅಷ್ಟೇ ಅಲ್ಲದೆ, ತಮ್ಮ ನೆರವಿನಿಂದ ಓದಿದ ಕೆಲವರು ಇಂದು ಪದವಿ ಮುಗಿಸಿರುವ ಬಗ್ಗೆ ಹೆಮ್ಮೆಯಿಂದಲೇ ಬರೆದುಕೊಂಡಿದ್ದಾರೆ. ಒಟ್ಟಾರೆಯಾಗಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಬೇಕು ಎಂಬುದು ಜಗ್ಗೇಶ್ ಅವರ ಮಾತಾಗಿದೆ.

ಆದರೆ ಒಂದು ಮಾತು ಕುಮಾರಸ್ವಾಮಿ ಅವರು ಏನಾದರೂ ಬಡ ವಿದ್ಯಾರ್ಥಿಗಳ ಸಾಲ ಮನ್ನಾ ಮಾಡಲು ಮುಂದಾದರೆ ಅದರಲ್ಲಿ 70% ಭಾಗ ಶ್ರೀಮಂತರ ಮಕ್ಕಳ ಪಾಲಾಗುತ್ತದೆ ಇದನ್ನು ಗಣನೀಯವಾಗಿ ತೆಗೆದುಕೊಂಡು ಬಡ ಮಕ್ಕಳಿಗೆ ತಲುಪುವಂತೆ ಇದನ್ನು ಜಾರಿ ಮಾಡಬೇಕು.

ನವರಸ ನಾಯಕ ಜಗ್ಗೇಶ್ ಅವರು ಒಳ್ಳೆಯ ವಿಚಾರವನ್ನು ಪ್ರಸ್ತಾಪಿಸಿದ್ದಾರೆ

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...