ABC

Tuesday, 5 February 2019

ಎ. ಮಂಜು ಹೇಳಿಕೆಗೆ ಲೋಕೋಪಯೋಗಿ ಸಚಿವ ಹೆಚ್​.ಡಿ. ರೇವಣ್ಣ ತಿರುಗೇಟು ನೀಡಿದ್ದಾರೆ.

ಬಾಗಲಕೋಟೆ: ದೇವೇಗೌಡರಿಂದ ಮಾತ್ರ ಹಾಸನ ಗೆಲ್ಲೋಕೆ ಸಾಧ್ಯ. ಪ್ರಜ್ವಲ್​​ಗೆ ಸಾಧ್ಯವಿಲ್ಲ ಎಂಬ ಮಾಜಿ ಸಚಿವ ಎ. ಮಂಜು ಹೇಳಿಕೆಗೆ ಲೋಕೋಪಯೋಗಿ ಸಚಿವ ಹೆಚ್​.ಡಿ. ರೇವಣ್ಣ ತಿರುಗೇಟು ನೀಡಿದ್ದಾರೆ. ನಿನ್ನೆ ತಡರಾತ್ರಿ ಬಾಗಲಕೋಟೆಯಲ್ಲಿ ಮಾತನಾಡಿದ ರೇವಣ್ಣ, ಎ. ಮಂಜುರನ್ನು ಏಕವಚನದಲ್ಲೇ ತರಾಟೆ ತೆಗೆದುಕೊಂಡಿದ್ದಾರೆ. ಎ. ಮಂಜು ಅಂತವನ ಮಾತಿಗೆಲ್ಲ ನಾನು ಪ್ರತಿಕ್ರಿಯೆ ಕೊಡೊಕಾಗುತ್ತೇನ್ರಿ? ನಾನು ಅಂತವ್ರಿಗೆಲ್ಲ ರಿಯಾಕ್ಟ್ ಮಾಡಾಕಾಗುತ್ತೇನ್ರಿ? ಅವನಿಗೆ ನಾನು ರಿಯಾಕ್ಟ್​​ ಮಾಡಲ್ಲ. ಇಗ್ನೋರ್​ ಮಾಡ್ತೀನಿ. ಇಷ್ಟೊತ್ತಲ್ಲಿ ಯಾಕ್ರಿ ಅವನು ನೆನಪು ಮಾಡ್ಕೊಂತೀರಾ? ಅಂತಾ ವಾಗ್ದಾಳಿ ನಡೆಸಿದ್ದಾರೆ.
‘ಕಾಂಗ್ರೆಸ್​ ಟಿಕೆಟ್​ ಕೊಟ್ರೆ ನಾನೇ ಗೆಲ್ತೀನಿ’
ಇದೇ ವೇಳೆ ಹಾಸನ ಲೋಕಸಭೆ ಕ್ಷೇತ್ರದ ಟಿಕೆಟ್​ಗೆ ಸಂಬಂಧ ಪ್ರತಿಕ್ರಿಯಿಸಿದ ರೇವಣ್ಣ, ‘ಈ ಸಾರಿ ಹಾಸನ ಲೋಕಸಭೆಗೆ ಕಾಂಗ್ರೆಸ್​​ನಿಂದ ಟಿಕೆಟ್ ಕೊಟ್ರೂ ನಾನೇ ಗೆಲ್ತೀನಿ. ಹಾಸನದಲ್ಲಿ ದೇವೇಗೌಡರು ಅಥವಾ ಪ್ರಜ್ವಲ್ ಯಾರು ಸ್ಪರ್ಧೆ ಮಾಡಬೇಕು ನೀವೇ ಹೇಳಿ. ಅವರನ್ನೇ ನಿಲ್ಲಿಸೋಣ ಅಂತಾ ಹಾಸ್ಯ ಚಟಾಕಿ ಹಾರಿಸಿದ್ರು.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...