ABC

Thursday, 7 February 2019

ಬಜೆಟ್ ಪುಸ್ತಕವನ್ನು ಸಿಎಂ ಪೂರ್ತಿ ಓದಿದ ಬಳಿಕವೇ ಉಳಿದವರಿಗೆ ವಿತರಣೆ! ಸ್ಪೀಕರ್ ರಮೇಶ್ ಕುಮಾರ್.

ಬೆಂಗಳೂರು :ಮುಖ್ಯಮಂತ್ರಿಯವರು ಬಜೆಟ್ ಭಾಷಣದ ಪೂರ್ತಿ ಪ್ರತಿ ಓದಿ ಮುಗಿಸುವವರೆಗೂ ಬಜೆಟ್ ಪುಸ್ತಕಗಳನ್ನು ಶಾಸಕರಿಗೆ ನೀಡದಿರುವ ನಿರ್ಧಾರಕ್ಕೆ ಮುಂದಾಗಿರುವ ವಿಧಾನಸಭೆಯ ಸ್ಪೀಕರ್, ಹೊಸ ಸಂಪ್ರಾದಾಯಕ್ಕೆ ಮುನ್ನುಡಿ ಹಾಡಿದ್ದಾರೆ. ಲೋಕಸಭೆಯಲ್ಲಿ ಅನುಸರಿಸಲಾದ ಈ ಮಾದರಿಯನ್ನುಸ್ಪೀಕರ್ ರಮೇಶ್‍ ಕುಮಾರ್ ಕೂಡ ಅನುಸರಿಸಲು ಮುಂದಾಗಿದ್ದು ಉತ್ತಮ ಬೆಳವಣಿಗೆಯಾಗಿದೆ.

ಈ ಬಗೆಗೆ ಸದನದ ಎಲ್ಲಾ ಶಾಸಕರಿಗೂ ಸುತ್ತೋಲೆ ಕಳುಹಿಸಲಾಗಿದ್ದು, ನಾಳೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಬಜೆಟ್ ಪುಸ್ತಕವನ್ನು ಪೂರ್ತಿಯಾಗಿ ಓದಿ ಮುಗಿಸಿದ ಬಳಿಕ ಶಾಸಕರಿಗೆ ಬಜೆಟ್​ ಪ್ರತಿಗಳನ್ನು ವಿತರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಶಾಸಕರಿಗೆ ಬಜೆಟ್ ಪುಸ್ತಕ ನೀಡದಿದ್ದರೆ ಮಾಧ್ಯಮದವರಿಗೆ ಬಜೆಟ್ ಪುಸ್ತಕ ಸಿಗುವುದಿಲ್ಲ. ನಾಳಿನ ಬಜೆಟ್ ಮಂಡನೆ ಮಾತ್ರ ಕುತೂಹಲ ಕೆರಳಿಸಿದೆ.

ಸಂಪ್ರದಾಯದಂತೆ ಹಣಕಾಸು ಸಚಿವರು ಬಜೆಟ್ ಓದಲು ಆರಂಭಿಸುತ್ತಿದ್ದಂತೆ ಬಜೆಟ್‍ನ ಪ್ರತಿಗಳನ್ನು ಶಾಸಕರಿಗೆ ಮತ್ತು ಮಾಧ್ಯಮದವರಿಗೆ ನೀಡಲಾಗುತ್ತಿತ್ತು. ಹಣಕಾಸು ಸಚಿವರು ಬಜೆಟ್ ಓದುತ್ತಿದ್ದಂತೆ ಬಜೆಟ್ ಪುಸ್ತಕವನ್ನು ಓದಿಕೊಂಡು ಅರ್ಥ ಮಾಡಿಕೊಳ್ಳಲು ಸುಲಭವಾಗುತ್ತಿತ್ತು. ಇದೇ ಮೊದಲ ಬಾರಿ ಹೊಸ ಸಂಪ್ರದಾಯ ಹುಟ್ಟು ಹಾಕುವ ಮೂಲಕ ಬಜೆಟ್ ಭಾಷಣ ಕೇಳುವ ಅವಕಾಶ ಮಾಡಿಕೊಡಲಾಗುತ್ತಿದೆ.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...