ದಾವಣಗೆರೆ: ನಮಗೆ ಕರ್ನಾಟಕದಲ್ಲಿ ಯೋಧರು ಜಾಸ್ತಿ ಇರುವುದು ಎಲ್ಲಿ ಅಂತ ಕೇಳಿದರೆ ನಾವು ತಟ್ಟನೆ ಹೇಳೋದು ಕೊಡಗು ಅಂತ ಆದರೆ ಇಲ್ಲಿ ಇನ್ನೊಂದು ಗ್ರಾಮವಿದೆ ಅಲ್ಲಿ ಸುಮಾರು ಮನೆಗೆ ಒಬ್ಬರಂತೆ ಅತಿ ಹೆಚ್ಚು ಯೋಧರನ್ನು ಕಾಣಬಹುದು. ಆ ಗ್ರಾಮವೇ ಕರ್ನಾಟಕದ ದಾವಣಗೆರೆ ಜಿಲ್ಲೆಯ ತೋಳಹುಣಸೆ ಈ ಗ್ರಾಮಕ್ಕೆ ಯೋಧರ ಗ್ರಾಮ ಎಂದು ಕೂಡ ಕರೆಯುತ್ತಾರೆ. ಕರ್ನಾಟಕದಲ್ಲಿ ಕೊಡಗು ಹೇಗೋ ಈ ದಾವಣಗೆರೆಗೆ ತೋಳಹುಣಸೆ ಸೈನಿಕರ ಊರು. ಗ್ರಾಮದ ಪ್ರತಿಯೊಂದು ಮನೆಯಲ್ಲಿಯೂ ಒಬ್ಬೊಬ್ಬ ಯೋಧನಿದ್ದು, ದೇಶ ಸೇವೆಗಾಗಿಯೇ ತಮ್ಮ ಜೀವನ ಮುಡಿಪಾಗಿಟ್ಟು ದೇಶಕ್ಕಾಗಿ ದುಡಿಯುತ್ತಿದ್ದಾರೆ.
ಗುರುವಾರ ಕಾಶ್ಮೀರದ ಪುಲ್ವಾಮಾದಲ್ಲಿ ನೆಡೆದ ಉಗ್ರರ ಅಟ್ಟಹಾಸಕ್ಕೆ ಬಲಿಯಾದ ಮೃತ ಯೋಧರಿಗೆ ಗ್ರಾಮದ ಯುವಕರು ಮತ್ತು ಹಾಲಿ ಸೈನಿಕರು ಶ್ರದ್ಧಾಂಜಲಿ ಸಲ್ಲಿಸಿದರು. ಇದೇ ವೇಳೆ ರಜೆಗೆಂದು ಗ್ರಾಮಕ್ಕೆ ಬಂದಿದ್ದ 10ಕ್ಕೂ ಹೆಚ್ಚು ಯೋಧರು ಉಗ್ರರು 49 ಯೋಧರನ್ನು ಬಲಿ ಪಡೆದಿರಬಹುದು. ಆದರೆ ನಾವು ಇದಕ್ಕಿಂತ ಜಾಸ್ತಿಯಾಗಿ ಪಾಕ್‌ನ ಸೈನಿಕರು ಹಾಗೂ ಉಗ್ರರನ್ನು ಸದೆಬಡಿದು ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದು ಮೃತ ಯೋಧರ ಭಾವಚಿತ್ರದ ಮುಂದೆ ಪ್ರತಿಜ್ಞೆ ಮಾಡಿದ್ದಾರೆ.
ಈ ಘಟನೆಯಿಂದ ಇಡೀ ದೇಶಕ್ಕೆ ದೇಶವೇ ದುಃಖದಲ್ಲಿದೆ.
ನಾವು ಇದಕ್ಕೆ ಪ್ರತೀಕಾರ ತೆಗೆದುಕೊಳ್ಳುತ್ತೇವೆ. ಸದ್ಯ ಮೋದಿ ಆದೇಶಕ್ಕಾಗಿ ನಾವು ಕಾಯುತ್ತಿದ್ದೇವೆ. ಈಗಾಗಲೇ ತೋಳಹುಣಸೆಯಲ್ಲಿ ಸಾಕಷ್ಟು ಯುವಕರು ಸೇನೆಗೆ ಸೇರಲು ತುದಿಗಾಲಲ್ಲಿ ನಿಂತಿದ್ದು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಡಲು ಸಿದ್ದರಿದ್ದೇವೆ ಎಂದು ಈ ಗ್ರಾಮದ ಯೋಧರು ಹೇಳಿದರು.

No comments:
Post a Comment