ABC

Monday, 25 February 2019

ಮೋದಿಯಿಂದ ನಾನು ದೇಶ ಪ್ರೇಮವನ್ನ ಕಲಿಯಬೇಕಿಲ್ಲ: ದೇವೇಗೌಡರು.

ಬೆಂಗಳೂರು: ನರೇಂದ್ರ ಮೋದಿಯಿಂದ ನಾನು ರಾಷ್ಟ್ರ ಪ್ರೇಮವನ್ನ ಕಲಿಯಬೇಕಿಲ್ಲ’ ಎಂದು ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡ ಗುಡುಗಿದ್ದಾರೆ. 
ನಗರದಲ್ಲಿ ಮಾತನಾಡಿದ ಅವರು, ಮಹಾಘಟಬಂಧನ್​​ ಮೈತ್ರಿಯಲ್ಲಿ ನಾನು ಪ್ರಧಾನಿ ಅಭ್ಯರ್ಥಿ ಅಲ್ಲ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ನಡೆಯಲಿದೆ. ನಾನು ರಾಹುಲ್ ಗಾಂಧಿ ಜೊತೆ ಇರುತ್ತೇನೆ. ಯಾರೇ ಪ್ರಧಾನಿಯಾದರೂ ಸ್ಥಿರ ಸರ್ಕಾರ ಕೊಡಲು ಪ್ರಮುಖ ಪಾತ್ರ ವಹಿಸುತ್ತೇನೆ. ಸ್ಥಿರ ಸರ್ಕಾರ ಇದ್ದರೇ ಮಾತ್ರ ಯುದ್ಧ ಗೆಲ್ಲೋದು ಅಂತಾ ಮೋದಿ ಹೇಳ್ತಾರೆ. ಆದರೆ ವಾಜಪೇಯಿ‌ ಇದ್ದಾಗ ಯುದ್ಧ ಗೆದ್ದಿಲ್ವಾ? ರಾಷ್ಟ್ರ ಪ್ರೇಮವನ್ನ ಮೋದಿಯಿಂದ ಕಲಿಯಬೇಕಿಲ್ಲ. ರಾಷ್ಟ್ರವನ್ನ ಐಕ್ಯತೆಯಿಂದ ಕರೆದುಕೊಂಡು ಹೋಗಲು ನನ್ನ ಸಹಕಾರ ಇರುತ್ತದೆ ಎಂದರು.
ರಾಜ್ಯದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಮಾಡುತ್ತಿದೆ. ನಾವೂ ಯಾತ್ರೆ ಮಾಡುತ್ತೇವೆ. ಜನರ ಬಳಿ ಹೋಗುತ್ತೇವೆ. ಪ್ರಧಾನಿ ಮೋದಿ, ರೈತರ ಖಾತೆಗೆ ಎರಡು ಸಾವಿರ ರೂಪಾಯಿ ಹಾಕಿದ್ದಾರೆ. ನಾಲ್ಕು ಮುಕ್ಕಾಲು ವರ್ಷ ರೈತರನ್ನು ಮರೆತಿದ್ದು, ಈಗ ನೆನಪಿಸಿಕೊಂಡಿದ್ದಾರೆ. ಮರೆತಿರುವವರಿಗೆ ಶಿಕ್ಷೆ ಕೊಡುವ ಶಕ್ತಿ ರೈತರಿಗಿದೆ. ಇದನ್ನ ಮೋದಿ ಈಗ ಅರಿತಿದ್ದಾರೆ ಎಂದರು.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...