ABC

Monday, 25 February 2019

ರಾತ್ರೋರಾತ್ರಿ ಪಾಕ್ ಉಗ್ರರಿಗೆ ನರಕ ತೋರಿಸಿದ ಭಾರತೀಯ ವಾಯುಸೇನೆ: ಬಿಗ್ ಬ್ರೇಕಿಂಗ್ ನ್ಯೂಸ್ ನೋಡಿ.

ಉಗ್ರರರನ್ನ ನಿದ್ದೆಯಿಂದ ಎಬ್ಬಿಸಿ ಬೆಳ್ಳಂಬೆಳಿಗ್ಗೆ ದೀಪಾವಳಿ ಆಚರಿಸಿದ ಭಾರತ🇮🇳.....
ಇಂದು ಮುಂಜಾನೆ 3-30 ರ ಸಮಯದಲ್ಲಿ ಭಾರತೀಯ ವಾಯುಪಡೆ ಪಾಕಿಸ್ತಾನದ ಗಡಿಯ ಒಳಗೆ ನುಗ್ಗಿ  ಜೈಷ್ ಉಗ್ರ ಸಂಘಟನೆಗಳ ಉಗ್ರರ ಅಡಗುದಾಣಗಳ ಮೇಲೆ ಬರೋಬ್ಬರಿ  1000 ಕೆಜಿಯ 10 ಬಾಂಬ್ ಗಳನ್ನು  ಎಸೆದು ಉಡೀಸ್ ಮಾಡಿದೆ. ಬಾಲಾಕೋಟ್ , ಮುಜಫರ್ ಬಾದ್ , ಚಾಕೋಟಿ  ನಲ್ಲಿರುವ ಜೈಷ್ ಉಗ್ರ ಸಂಘಟನೆಯ  ಮೂರು ಕಂಟ್ರೋಲ್ ರೂಮ್ ಗಳನ ಸಂಪೂರ್ಣ ನೆಲಸಮ ಮಾಡಲಾಗಿದೆ. ಈ ದಾಳಿಯಲ್ಲಿ ಭಾರತದ ಹನ್ನೆರಡು ಮಿರಾಜ್ – 2000 ಯುದ್ದ ವಿಮಾನಗಳನ್ನು ಬಳಸಿಕೊಳ್ಳಲಾಗಿತ್ತು. ಈ ಮ‌ೂಲಕ ಭಾರತ ಪುಲ್ವಾಮ ದಾಳಿಗೆ ಪ್ರತೀಕಾರ ತೀರಿಸಿಕೊಂಡಿದೆ. ವಿಶೇಷ ಎಂದರೆ ಪಾಕಿಸ್ತಾನದ ಸೇನಾಧಿಕಾರಿ ಬಾಂಬ್ ಬ್ಲಾಸ್ಟ್ ಫೋಟೋ ರಿವೀಲ್ ಮಾಡಿದ್ದಾರೆ‌.

ಈ ಮೂಲಕ  ಪಾಕಿಸ್ತಾನದ ವಿರುದ್ಧ ಅತಿ ದೊಡ್ಡ ಕಾರ್ಯಾಚರಣೆ ನಡೆಸಲಾಗಿದೆ‌. ಉಗ್ರರು ತಂಗಿದ್ದ 500 ಮೀಟರ್ ಜಾಗವನ್ನು ಭಾರತೀಯ ವಾಯುಸೇನೆಯ ವಿಮಾನಗಳು ಸಂಪೂರ್ಣ ಧ್ವಂಸ ಮಾಡಿವೆ. ಈ ದಾಳಿಯಲ್ಲಿ ಜೈಷ್ ಎ ಮೊಹಮ್ಮದ್ ನ ನೂರಾರು ಉಗ್ರರನ್ನು ಸೀದಾ ನರಕಕ್ಕೆ ಭಾರತೀಯ ವಾಯುಸೇನೆ ಕಳಿಸಿಬಿಟ್ಟಿದೆ.
ಪುಲ್ವಾಮ ಉಗ್ರರ ಧಾಳಿಯ ನಂತರ ಭಾರತ ಹಾಗೂ ಪಾಕಿಸ್ತಾನದ ನಡುವೆ ಸಂಬಂಧಗಳು ಮೊದಲಿನಂತೆ ಇಲ್ಲ. ಅಲ್ಲದೆ ಪಾಕಿಸ್ತಾನ ಮೊದಲಿಗೆ ತಾನು ಭಾರತದೊಂದಿಗೆ ಯುದ್ಧ ಮಾಡಲು ಸಿದ್ಧ ಎಂದು ಹೇಳಿಕೆಗಳನ್ನು ನೀಡುತ್ತಾ ಉದ್ದಟತನವನ್ನು ಮೆರೆದಿತ್ತು. ಆದರೆ ವಿಶ್ವದ ಹಲವು ರಾಷ್ಟ್ರಗಳು ಪಾಕ್ ಧೋರಣೆಯನ್ನು ಖಂಡಿಸಲು ಆರಂಭಿಸಿದ ಕೂಡಲೇ ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ಶಾಂತಿಗೆ ಒಂದು ಅವಕಾಶವನ್ನು ಭಾರತ ಮಾಡಿಕೊಡಬೇಕೆಂದು ಬೇಡಿಕೆಯನ್ನು ಇಟ್ಟಿದ್ದರು. ಪಾಕಿಸ್ತಾನ ಒಂದೊಂದೇ ಹೆಜ್ಜೆ ಹಿಂದೆ ಇಡಲು ಆರಂಭಿಸಿತ್ತು.
ಈಗ ಭಾರತೀಯ ಸೇನೆ ಯಾರೂ ಊಹಿಸಿರದ ಒಂದು ದಿಟ್ಟ ಕಾರ್ಯವನ್ನು ಮಾಡಿ ಮುಗಿಸಿದೆ. ಸರ್ಕಾರ ಏಕೆ ಯಾವುದೇ ದಿಟ್ಟ ನಿಲುವು ತೋರಲಿಲ್ಲ ಎಂಬ ಪ್ರಶ್ನೆಗೆ ಇಂದು ಉತ್ತರ ಸಿಕ್ಕಿದೆ.ನಿನ್ನೆ ರಾತ್ರಿ ಭಾರತೀಯ ಸೇನೆ LOC ಯ ಉದ್ದಕ್ಕೂ ಇದ್ದ ಉಗ್ರರ ಕ್ಯಾಂಪ್ ಗಳ ಮೇಲೆ ಮಿಂಚಿನ ಧಾಳಿಯನ್ನು ನಡೆಸಿರುವ ಭಾರತೀಯ ಸೇನೆ ಸುಮಾರು ಸಾವಿರ ಕಿಲೋ ಗ್ರಾಂ ಬಾಂಬ್ ಗಳನ್ನು ಉಗ್ರರ ಕ್ಯಾಂಪ್ ಗಳ ಮೇಲೆ ಹಾಕುವ ಮೂಲಕ ಅವರ ಅಡಗು ತಾಣಗಳನ್ನು ಸರ್ವನಾಶ ಮಾಡಿದೆ. ಇಂದು ಸುಮಾರು 3.30 ರ ಸಮಯದಲ್ಲಿ ಅಂದರೆ ಮಧ್ಯರಾತ್ರಿಯ ನಂತರ ಸೇನೆ ಈ ಮಿಂಚಿನ ಕಾರ್ಯಾಚರಣೆ ಮಾಡಿದ್ದು ಇದು ಯಾರೊಬ್ಬರೂ ಊಹಿಸಿರದ ಬೆಳವಣಿಗೆ ಹಾಗೂ ಇದನ್ನು ಈಗಾಗಲೇ ಸಾವಿರಾರು ಜನರು ಟ್ವಿಟರ್ ನಲ್ಲಿ ಮೆಚ್ಚಿ ಹೊಗಳಿಕೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ.

12 ಮಿರೇಜ್ 2000 ಜೆಟ್ ಪ್ಲೇನ್ ಗಳನ್ನು ಬಳಸಿ LOC ಉದ್ದಕ್ಕೂ ಇದ್ದ ಉಗ್ರರ ಕ್ಯಾಂಪ್ ಗಳ ಮೇಲೆ ಧಾಳಿಯನ್ನು ನಡೆಸಿದೆ ಸೇನೆ. ಉಗ್ರರು ಕೂಡಾ ಇಂತಹುದೊಂದು ಧಾಳಿಯನ್ನು ನಿರೀಕ್ಷಿಸುವುದು ಅಸಾಧ್ಯ. ನಿಜಕ್ಕೂ ಭಾರತ ಸರ್ಕಾರ ಮಾಡಿರುವ ಈ ದಿಟ್ಟ ನಿರ್ಧಾರ ಹಾಗೂ ಭಾರತೀಯ ಸೇನೆಯ ಸಾಹಸಕ್ಕೆ ಈಗಾಗಲೇ ಸಹಸ್ರಾರು ಮಂದಿ ಶುಭಾಷಯಗಳನ್ನು ಕೋರಿ, ಟ್ವಿಟರ್ ನಲ್ಲಿ ಹರ್ಷ ವ್ಯಕ್ತ ಪಡಿಸುತ್ತಿದ್ದಾರೆ. ಉಗ್ರರಿಗೂ ಭಯ ಹುಟ್ಟಿಸುವಲ್ಲಿ ಭಾರತೀಯ ಸೇನೆಯ ಮಿಂಚಿನ ಧಾಳಿ ಅದ್ಭುತ ಎನಿಸಿದೆ.

https://play.google.com/store/apps/details?id=com.application.onead&referrer=GFN1E0 Sign up with OneAD app. You can earn up to 2.5 L monthly OneAD Balance. Your referral code for registration is GFN1E0 . Register today

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...