ಬಜೆಟ್ ನಲ್ಲಿ ಆಟೋ ಚಾಲಕರಿಗೆ ಸಿಹಿಸುದ್ದಿ..!
ಬೆಂಗಳೂರು: ಆಟೋ ಚಾಲಕರಿಗೆ ಸಾರಥಿಯ ಸೂರು ಬಾಡಿಗೆ ಆಧಾರದ ವಸತಿ ಯೋಜನೆಗೆ 50 ಕೋಟಿ ರೂ.ಗಳ ವಿಶೇಷ ಯೋಜನೆ ಪ್ರಕಟಿಸಲಾಗಿದೆ.2019 -20ನೇ ಸಾಲಿನಲ್ಲಿ ವಿವಿಧ ವಸತಿ ಯೋಜನೆಗಳಡಿ ನಾಲ್ಕು ಲಕ್ಷ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ.ಬಜೆಟ್ ಹೈಲೈಟ್ಸ್ .
ಎಸ್‍ಸಿ, ಎಸ್‍ಟಿ ಜನಾಂಗದವರು ವಾಸಿಸುತ್ತಿರುವ ಅಧಿಸೂಚಿತ ಕೊಳೆಗೇರಿ ಪ್ರದೇಶಗಳ ಅಭಿವೃದ್ಧಿಗೆ 300 ಕೋಟಿ ರೂ.ಗಳ ಕೊಡುಗೆ ನೀಡಲಾಗಿದೆ.
ಸಿದ್ದ ಉಡುಪು ಕಾರ್ಮಿಕರಿಗೆ ಬಾಡಿಗೆ ಆಧಾರದ ವಸತಿ ಯೋಜನೆಗೆ 50 ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ.
ಬೀದಿಬದಿ ವ್ಯಾಪಾರಿಗಳಿಗೆ ಒಟ್ಟು 7.69 ಕೋಟಿ ಬಡ್ಡಿರಹಿತ ಸಾಲ : ಸಣ್ಣಮೊತ್ತದ ಸಾಲದ ಸುಳಿಗೆ ಹಲವು ಬಡವರ ಬಾಳು ಹಾಳಾದ ನಿದರ್ಶನಗಳು ನಮ್ಮ ಮುಂದಿವೆ. ಇಂತಹವರ ಕಣ್ಣೊರೆಸಲು ಸರ್ಕಾರ ರಾಜ್ಯದಲ್ಲಿ ಬಡವರ ಬಂಧು ಯೋಜನೆಯನ್ನು ಜಾರಿಗೊಳಿಸಿದೆ ಎಂದು ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಇಂದು ಮಂಡಿಸಿದ ಬಜೆಟ್‍ನಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ರಾಜ್ಯದಲ್ಲಿ 13,522 ಮಂದಿ ಬೀದಿಬದಿ ವ್ಯಾಪಾರಿಗಳಿಗೆ ಒಟ್ಟು 7.69 ಕೋಟಿ ಬಡ್ಡಿರಹಿತ ಸಾಲ ವಿತರಿಸಲಾಗಿದೆ.ಇದರಿಂದ ಬೀದಿ ಬದಿ ಸಣ್ಣ ವ್ಯಾಪಾರಿಗಳು ಸಾಲಗಾರರ ಶೋಷಣೆ ಮತ್ತು ದೌರ್ಜನ್ಯದಿಂದ ಮುಕ್ತರಾಗಿ ತಮ್ಮ ವ್ಯವಹಾರ ನಡೆಸಲು ಅನುಕೂಲವಾಗುತ್ತಿದೆ. ಇದೊಂದು ಮಾನವೀಯ ಮುಖವುಳ್ಳ ಪ್ರಗತಿಶೀಲ ಕಾರ್ಯಕ್ರಮ ಎಂದು ಹೇಳಿದರು.
No comments:
Post a Comment