ABC

Friday, 8 February 2019

ಶೃಂಗೇರಿ ಶಾರದಾಂಬೆಯ ದರ್ಶನ ಪಡೆಯಲು ಎಚ್ ಡಿ ಕುಮಾರಸ್ವಾಮಿ ಅವರ ಆಗಮನ.

ಚಿಕ್ಕಮಗಳೂರು: ಇಂದು ಯಶಸ್ವಿಯಾಗಿ ಬಜೆಟ್​ ಮಂಡಿಸಿರುವ ಸಿಎಂ ಕುಮಾರಸ್ವಾಮಿ ಶೃಂಗೇರಿಗೆ ಆಗಮಿಸಲಿದ್ದಾರೆ.

ದೇವಾಲಯಕ್ಕೆ ಆಗಮಿಸಲಿರುವ ಸಿಎಂ ಶೃಂಗೇರಿ ಶಾರದೆಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಯಶಸ್ವಿಯಾಗಿ ಬಜೆಟ್ ಮಂಡಿಸಿರುವುದರಿಂದ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ ಎನ್ನಲಾಗ್ತಿದೆ. ಈ ಹಿನ್ನೆಲೆ ಪೊಲೀಸರಿಂದ ಸಕಲ ಸಿದ್ಧತೆ ನಡೆದಿದೆ.

ಮೆಣಸೆಯಲ್ಲಿ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದ್ದು, ಹೆಲಿಪ್ಯಾಡ್ ಸುತ್ತ ಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಹೆಲಿಪ್ಯಾಡ್​ನಿಂದ ಸಿಎಂ ನೇರವಾಗಿ ದೇವಸ್ಥಾನಕ್ಕೆ ತೆರಳಲಿದ್ದಾರೆ. ನಂತರ ರಾತ್ರಿ ಶೃಂಗೇರಿಯಲ್ಲೇ ವಾಸ್ತವ್ಯ ಹೂಡುವ ಸಾಧ್ಯತೆ ಇದೆ. ಸಿಎಂ ಜೊತೆ ಸಹೋದರ ಹೆಚ್.ಡಿ ರೇವಣ್ಣ ಕೂಡ ಆಗಮಿಸುತ್ತಾರೆ ಎನ್ನುವ ಮಾಹಿತಿ ಕೂಡ ಲಭ್ಯವಾಗಿದೆ.

 ಸಿಎಂ ಇಷ್ಟಾರ್ಥ ದೈವ: ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಇಷ್ಟಾರ್ಥ ದೈವ ಚಿಕ್ಕಮಗಳೂರಿನಲ್ಲಿರುವ ಶೃಂಗೇರಿ ಶಾರದಾಂಬೆ. ಈ ಹಿಂದೆ ಅಧಿಕಾರಕ್ಕಾಗಿ ಶಾರದಾಂಭೆಗೆ ಸಿಎಂ ಮೊರೆ ಹೋಗಿದ್ದರು. ಸಿಎಂ ಪಟ್ಟಕ್ಕಾಗಿ ಕಳೆದ ವರ್ಷ ಜನವರಿ ತಿಂಗಳಿನಲ್ಲಿ ಅತಿರುದ್ರ ಮಹಾಯಾಗವನ್ನು ದೇವೇಗೌಡರು ನಡೆಸಿದ್ದರು. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆದ ಮೇಲೆ ಐದು ಬಾರಿ ಶೃಂಗೇರಿಗೆ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆಯನ್ನೂ ಸಲ್ಲಿಸಿದರು.

ಅಲ್ಲದೆ, ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಕುಮಾರಸ್ವಾಮಿ ಅವರು ಪ್ರತಿ ಶೂಲಿನಿ ಯಾಗ ಮಾಡಿಸಿದ್ದರು. ಕುಮಾರಸ್ವಾಮಿ ಬಂದಾಗೆಲ್ಲಾ ಒಂದೊಂದು ವಿಶೇಷ ಪೂಜೆ ಕೈಗೊಂಡಿದ್ದರು. ಸಮ್ಮಿಶ್ರ ಸರ್ಕಾರದಲ್ಲಿ ದಿನಕ್ಕೊಂದು ರಾಜಕೀಯ ಚದುರಂಗದಾಟದಿಂದ ಸಿಎಂ ಕಂಗಾಲಾಗಿದ್ದು, ಇಂದು ಮತ್ತೆ ಶೃಂಗೇರಿಗೆ ಬರಲಿದ್ದಾರೆ.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...