ABC

Monday, 4 February 2019

ರಿವರ್ಸ್ ಆಪರೇಷನ್ ಇಳಿದ ಎಚ್ಡಿಕೆ: ಬೆದರಿದ ಬಿಜೆಪಿ.

ಬೆಂಗಳೂರು: ಬಜೆಟ್ ಅಧಿವೇಶನಕ್ಕೆ ಮುನ್ನ ಅಥವ ಅಧಿವೇಶನ ಸಂದರ್ಭದಲ್ಲಿ ಆಪರೇಶನ್ ಕಮಲಕ್ಕೆ ಬಿಜೆಪಿ ಕೈ ಹಾಕಲು ಮುಂದಾಗಿರುವುದನ್ನು ಮನಗಂಡಿರುವ ದೋಸ್ತಿ ಸರಕಾರ ಅದನ್ನು ವಿಫಲಗೊಳಿಸಲು ಮುಂದಾಗಿದೆ.

ಈ ಯೋಜನೆಯ ಅಂಗವಾಗಿ ಬಿಜೆಪಿಯ ನಾಲ್ವರು ಶಾಸಕರಿಂದ ರಾಜೀನಾಮೆ ಕೊಡಿಸುವ ಮೂಲಕ ಆಪರೇಶನ್ ಕಮಲ ಟುಸ್ ಆಗುವಂತೆ ಮಾಡಲು ದೋಸ್ತಿಗಳು ನಿರ್ಧಾರ ಕೈಗೊಂಡಿದ್ದಾರೆ.

ಒಂದು ವೇಳೆ ‘ಕೈ’ ಶಾಸಕರು ರಾಜೀನಾಮೆ ನೀಡಿದರೆ, ತಕ್ಷಣವೇ ಬಿಜೆಪಿಯ ನಾಲ್ವರು ಶಾಸಕರು ರಾಜೀನಾಮೆ ನೀಡಲು ಸಿದ್ದರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಾತುಕತೆ ಫಲಪ್ರದವಾದ ಹಿನ್ನೆಲೆ ಸಿಎಂ ಕುಮಾರಸ್ವಾಮಿ ನಿರಾಳರಾಗಿದ್ದಾರೆ ಎಂದು ತಿಳಿದು ಬಂದಿದೆ.ಈ ಹಿನ್ನೆಲೆಯಲ್ಲಿ ಬಿಜೆಪಿ ಮಂಗಳವಾರ ತುರ್ತು ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ತನ್ನವರು ದೋಸ್ತಿಗಳ ಕಡೆ ವಾಲದಂತೆ ಪ್ರಯತ್ನ ನಡೆಸಲಿದೆ.

ಹಳೆ ಮೈಸೂರು ಹಾಗೂ ಚಿತ್ರದುರ್ಗ ಭಾಗದ ಶಾಸಕರು ಈಗಾಗಲೆ ಜನತಾದಳದ ಸಂಪರ್ಕದಲ್ಲಿದ್ದು, ರಾಜೀನಾಮೆ ನೀಡ ಬಂದರೆ ಅವರಿಗೆ ಮಂತ್ರಿಗಿರಿ ನೀಡುವ ಆಶ್ವಾಸನೆ ನೀಡಲಾಗಿರುವುದಾಗಿ ಮೂಲಗಳು ತಿಳಿಸಿವೆ.

ಬಿಜೆಪಿಯ ಶಾಸಕರನ್ನು ತಮ್ಮತ್ತ ಕರೆತರುವ ವಿಚಾರದಲ್ಲಿ ಎಲ್ಲವೂ ಅಂತಿವಾಗಿದ್ದು ಯಾವ ಕ್ಷಣದಲ್ಲಾದರೂ ಅದು ಕಾರ್‍ಯರೂಪಕ್ಕೆ ಬರಬಹುದು ಎಂದು ಹೇಳಲಾಗುತ್ತಿದೆ.ಈ ಮಧ್ಯೆ ಅಧಿಕಾರಕ್ಕೇರುವ ತನ್ನ ಪ್ರಯತ್ನದ ಸಾಫಲ್ಯಕ್ಕಾಗಿ ಬಿಜೆಪಿ ಕೆಲ ಮುಖಂಡರು ಯಜ್ಞ-ಯಾಗಾದಿಗಳ ಮೊರೆಹೋಗಿದ್ದಾರೆ ಎಂಬ ಸುದ್ದಿಗಳೂ ಹರಿದಾಡುತ್ತಿವೆ.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...