ABC

Monday, 4 February 2019

ಬಿಜೆಪಿಯವರು ಸರ್ವ ಸ್ವತಂತ್ರರಿದ್ದಾರೆ ಆಪರೇಷನ್ ಕಮಲ ಮಾಡಿಕೊಳ್ಳಲಿ : ಎಚ್ ಡಿ ಕುಮಾರಸ್ವಾಮಿ.


ಬೆಂಗಳೂರು: ಬಿಜೆಪಿಯವರು ಸರ್ವ ಸ್ವತಂತ್ರರಿದ್ದಾರೆ. ಅವರು ಏನು ಮಾಡುತ್ತಿದ್ದಾರೆ ಎಂದು ನನಗೆ ಸಂಪೂರ್ಣವಾಗಿ ಗೊತ್ತಿದೆ. ಅವರು ಸಂತೋಷವಾಗಿ ಆಪರೇಷನ್ ಕಮಲ ಮಾಡಬಹುದು ಎಂದು ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರು ವ್ಯಂಗ್ಯವಾಡಿದ್ದಾರೆ.

ಸೋಮವಾರ ಪದ್ಮನಾಭ ನಗರದ ನಿವಾಸದಲ್ಲಿ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಯಾವ ಶಾಸಕರಿಗೆ ಬಿಜೆಪಿ ಅವರು ಕರೆ ಮಾಡಿದ್ದಾರೆ? ಎಷ್ಟು ಆಫರ್ ಕೊಟ್ಟಿದ್ದಾರೆ? ನಿನ್ನೆ ಎಷ್ಟು ಜನ ಶಾಸಕರಿಗೆ ಫೋನ್ ಮಾಡಿದ್ದಾರೆ? ಮೊನ್ನೆ ಯಾರಿಗೆ ಫೋನ್ ಮಾಡಿದ್ದಾರೆ ಎಂಬುದರ ಸಂಪೂರ್ಣ ಮಾಹಿತಿ ನನಗಿದೆ ಎಂದು ಹೇಳಿದರು.

ಆಪರೇಷನ್​ ಕಮಲಕ್ಕೆ ಅವರೆಲ್ಲ ಎಲ್ಲಿಂದ ದುಡ್ಡು ತರುತ್ತಾರೋ? ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರ ನಿಲ್ಲಿಸುತ್ತೇನೆ ಎಂದು ಹೇಳುತ್ತಾರೆ. ಆದರೆ, ಅವರ ಪಕ್ಷದವರೇ ಶಾಸಕರನ್ನು ಸೆಳೆಯಲು ದೊಡ್ಡ ಮೊತ್ತದಲ್ಲಿ ಹಣದ ಆಮಿಷ ಒಡ್ಡುತ್ತಿದ್ದಾರೆ. ಅದಕ್ಕೆ ಬ್ಲಾಕ್ ಮನಿ ಎಲ್ಲಿಂದ ಬರ್ತಿದೆ? ಅವರ ಆಫರ್ ಕೇಳಿದರೆ ನಮಗೆ ಭಯ ಬರುತ್ತಿದೆ ಎಂದರು. ಇದೇ ವೇಳೆ ಮಾಜಿ ಪ್ರಧಾನಿ ದೇವೇಗೌಡರ ಜತೆ ಆಪರೇಷನ್ ಕಮಲದ ಬಗ್ಗೆ ಚರ್ಚಿಸಿಲ್ಲ ಎಂದು ತಿಳಿಸಿದರು.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...