ABC

Monday, 4 February 2019

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ನಿಂದ ಟಿಕೆಟ್ ಯಾರಿಗೆ ಗೊತ್ತಾ.?


ಮಂಡ್ಯದ ಸೊಸೆಯಾದ ಸುಮಲತಾ ಅಂಬರೀಷ್​ ಬದಲಿಗೆ ಮಂಡ್ಯದ ಮನೆಮಗಳನ್ನೇ ಅಖಾಡಕ್ಕಿಳಿಸಲು ಜೆಡಿಎಸ್ ತಂತ್ರ ರೂಪಿಸಿದೆ. 2 ಬಾರಿ ಜೆಡಿಎಸ್​ನಿಂದ ಟಿಕೆಟ್ ವಂಚಿತರಾಗಿದ್ದ ಮಂಡ್ಯದ ಲಕ್ಷ್ಮೀ ಅಶ್ವಿನ್​ ಗೌಡ ಅವರಿಗೆ ಈಗ ಅವಕಾಶ ನೀಡಲು ಜೆಡಿಎಸ್​ ಮುಂದಾಗಿದೆ ಎನ್ನಲಾಗಿದೆ.


ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಅಖಾಡಕ್ಕಿಳಿಯಲು ಕಾಂಗ್ರೆಸ್​- ಜೆಡಿಎಸ್​ ಸಜ್ಜಾಗಿವೆ. ಆದರೆ, ಕೆಲವು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಎರಡೂ ಪಕ್ಷಗಳಿಗೆ ಕಗ್ಗಂಟಾಗಿದೆ. ಅಂತಹ ಕ್ಷೇತ್ರಗಳಲ್ಲಿ ಮಂಡ್ಯ ಕೂಡ ಒಂದು. ಜೆಡಿಎಸ್​ನ ಪ್ರಭಾವ ಹೆಚ್ಚಿರುವ ಮಂಡ್ಯದಲ್ಲಿ ಕಾಂಗ್ರೆಸ್​ ನಾಯಕರ ಹವಾ ಕೂಡ ಜೋರಾಗೇ ಇದೆ. ಅಲ್ಲದೆ, ಈ ಬಾರಿಯ ಚುನಾವಣೆಗೆ ಅಂಬರೀಷ್​ ಅವರ ಪತ್ನಿ ಸುಮಲತಾಗೆ ಮಂಡ್ಯದಿಂದ ಟಿಕೆಟ್​ ನೀಡಬೇಕೆಂದು ಕಾಂಗ್ರೆಸ್​ ಬೆಂಬಲಿಗರು ಪಟ್ಟು ಹಿಡಿದಿದ್ದರು.

ಇತ್ತ ದೇವೇಗೌಡರ ಮೊಮ್ಮಗ ನಿಖಿಲ್​ ಕುಮಾರ್ ಮಂಡ್ಯದಿಂದ ಸ್ಪರ್ಧೆಗಿಳಿಯುವ ಸಾಧ್ಯತೆ ಇದೆ ಎನ್ನಲಾಗಿತ್ತು. ಹೀಗಾಗಿ, ಇಲ್ಲಿನ ಟಿಕೆಟ್​ ಹಂಚಿಕೆ ಒಂದು ರೀತಿಯ ಸವಾಲಿನದ್ದಾಗಿತ್ತು. ಆದರೆ, ಇದೀಗ ಹೊಸ ಲೆಕ್ಕಾಚಾರ ನಡೆಸಿರುವ ದೇವೇಗೌಡರು ಜಾಣತನ ಹೆಜ್ಜೆಯಿಡುವ ಮೂಲಕ ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆಯಲು ಮುಂದಾಗಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...