ಮಂಡ್ಯ: ಡಿಸ್ನಿಲ್ಯಾಂಡ್ ಯೋಜನೆ ನನ್ನ ಬ್ರೈನ್ ಚೈಲ್ಡ್. ಈ ಯೋಜನೆ ಆಗಲೇ ಬೇಕು, ಮಾಡೇ ಮಾಡ್ತೀವಿ ಅಂತಾ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ನೆನ್ನೆ ನಗರದಲ್ಲಿ ಮಾತನಾಡಿದ ಅವರು, ಕೆಆರ್‌ಎಸ್ ನಮ್ಮ ಆಸ್ತಿ, ಜಲಾಶಯಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಹೊಸ ತಂತ್ರಜ್ಞಾನದ ನೈಪುಣ್ಯತೆಯಲ್ಲಿ ಈ ಯೋಜನೆ ನಿರ್ಮಾಣವಾಗಲಿದೆ. ಈ ಯೋಜನೆಗಾಗಿ ರೈತರ ಭೂಮಿಯನ್ನ ವಶಪಡಿಸಿಕೊಳ್ಳದೇ ಸರ್ಕಾರಿ ಜಮೀನಿನಲ್ಲೇ ಈ ಯೋಜನೆ ನಿರ್ಮಾಣ ಮಾಡಲಿದ್ದೇವೆ.
ಈ ಯೋಜನೆಯಿಂದ 50 ಸಾವಿರ ಉದ್ಯೋಗ ಸೃಷ್ಟಿಯಾಗಲಿವೆ ಅಂತಾ ಹೇಳಿದರು. ಇದೇ ವೇಳೆ, ನನಗೆ ಸಲಹೆ ಕೊಡುವವರು ಡ್ಯಾಮೇಜ್ ಸಲಹೆ ಕೊಡುವವರಲ್ಲ. ಇದಕ್ಕೆ ಪೂರಕವೆಂಬಂತೆ ಮಂಚನಬೆಲೆ ಡ್ಯಾಂ ಬಳಿ ಪೈಲಟ್ ಪ್ರಾಜೆಕ್ಟ್ ನಿರ್ಮಾಣ ಮಾಡಲಿದ್ದೇವೆ. ಈ ಯೋಜನೆಗೆ ವಿರೋಧ ಮಾಡುವ ಹೋರಾಟಗಾರರೊಂದಿಗೆ ಚರ್ಚಿಸಲು ಸಿದ್ಧನಿದ್ದೇನೆ ಅಂತಾ ಹೇಳಿದರು.

No comments:
Post a Comment