ABC

Wednesday, 20 February 2019

1997 ರಲ್ಲಿ ತಾವೇ ಅಡಿಗಲ್ಲು ಹಾಕಿದ್ದ ಬೋಗಿ ಬೀಲ್​ ಸೇತುವೆ ವೀಕ್ಷಿಸಿದ ಮಾಜಿ ಪ್ರಧಾನಿ ದೇವೇಗೌಡರು.

ದಿಬ್ರೂಗಢ: ಮಾಜಿ ಪ್ರಧಾನಿ ಎಚ್​.ಡಿ ದೇವೇಗೌಡ ಅವರು ಇಂದು ಬೋಗಿ ಬೀಲ್​ ಸೇತುವೆ ಬಳಿಗೆ ತೆರಳಿ ಕೆಲಹೊತ್ತು ವೀಕ್ಷಣೆ ಮಾಡಿದರು.

ಅಸ್ಸಾಂ ಮತ್ತು ಅರುಣಾಚಲ ಪ್ರದೇಶವನ್ನು ಸಂಪರ್ಕಿಸುವ, ಭ್ರಹ್ಮಪುತ್ರ ನದಿಗೆ ಅಡ್ಡಲಾಗಿ ದಿಬ್ರೂಗಢ ಮತ್ತು ದೇಮಾಜಿ ಜಿಲ್ಲೆಗಳ ನಡುವೆ ನಿರ್ಮಿಸಲಾಗಿರುವ ಈ ಸೇತುವೆಗೆ ಮಾಜಿ ಪ್ರಧಾನಿ ಎಚ್​.ಡಿ ದೇವೇಗೌಡರು ತಾವು ಪ್ರಧಾನಿಯಾಗಿದ್ದಾಗ ಅಡಿಗಲ್ಲು ಹಾಕಿದ್ದರು.

1997ರಲ್ಲಿ ದೇವೇಗೌಡರು ಅಡಿಗಲ್ಲು ಹಾಕಿದ ನಂತರ 2002ರಲ್ಲಿ ಇದರ ನಿರ್ಮಾಣ ಕಾರ್ಯ ಆರಂಭವಾಗಿತ್ತು. 2018ರ ಡಿಸೆಂಬರ್​ 25ರಂದು ಈ ಸೇತುವೆ ಲೋಕಾರ್ಪಣೆಗೊಂಡಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಸೇತುವೆ ಉದ್ಘಾಟಿಸಿದ್ದರು.

ಕುತೂಹಲ ಮೂಡಿಸಿದ ಅರುಣಾಚಲ ಪ್ರದೇಶ ಮಾಜಿ ಸಿಎಂ ಗೆಗಾಂಗ್​ ಅಪಾಂಗ್​ ದೇವೇಗೌಡ ಭೇಟಿ:


ಈಶಾನ್ಯ ರಾಜ್ಯಗಳ ಪ್ರವಾಸದಲ್ಲಿರುವ ಮಾಜಿ ಪ್ರಧಾನಿ ದೇವೇಗೌಡ ಇಂದು ಅರುಣಾಚಾಲ ಪ್ರದೇಶ ಮಾಜಿ ಸಿಎಂ ಗೆಗಾಂಗ್​ ಅಪಾಂಗ್​ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಲೋಕಸಭಾ ಚುನಾವಣೆಗೆ ಬಿಜೆಪಿ ವಿರುದ್ಧ ಎಲ್ಲ ಪ್ರಾದೇಶಿಕ ಪಕ್ಷಗಳು ಒಟ್ಟುಗೂಡಿದ್ದು ಈ ಸಂಬಂಧ ಪ್ರಾದೇಶಿಕ ಪಕ್ಷಗಳ ಮಾತುಕತೆ ನಡೆಯುತ್ತಲೆ ಇದೆ. ಆಯಾ ರಾಜ್ಯಗಳ ಪಕ್ಷಗಳ ಜೊತೆ ಒಟ್ಟುಗೂಡುತ್ತ ಬಿಜೆಪಿ ಮಣಿಸಲು ಪ್ರಾದೇಶಿಕ ಪಕ್ಷಗಳು ನಿರ್ಧರಿಸಿದ್ದು, ಈ ಸಂಬಂಧವಿವಿಧ ಪಕ್ಷಗಳ  ನಾಯಕರ ಮಾತುಕತೆ ನಡೆಯುತ್ತಲೆ ಇದೆ. ಈ ಮೂಲಕ ಪ್ರಾದೇಶಿಕ ಪಕ್ಷಗಳ ನಡುವೆ ಸಮನ್ವಯವನ್ನು ಗಟ್ಟಿಗೊಳಿಸುವ ಕಾರ್ಯ ಕೂಡ ನಡೆಯುತ್ತಿದೆ.

ಇತ್ತೀಚೆಗಷ್ಟೇ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕೂಡ ದೇವೇಗೌಡ ಅವರನ್ನು ಭೇಟಿಯಾಗಿ ಮಾತುಕತಡ ನಡೆಸಿದ್ದರು. ಈ ವೇಳೆ ಮಹಾ ಮೈತ್ರಿ ಕುರಿತು ನಾಯಕರು ಚರ್ಚಿಸಿದ್ದರು.

ಗೆಗಾಂಗ್​ ಅಪಾಂಗ್​ ಕಾಂಗ್ರೆಸ್ ಬಿಟ್ಟು ಯುಡಿಎಫ್ ಎಂಬ ಪಕ್ಷ ಕಟ್ಟಿ ಬಳಿಕ ವಾಪಸ್ ಕಾಂಗ್ರೆಸ್ ಸೇರಿ ಸಿಎಂ ಆಗಿದ್ದರು.  ಅದಾದ ಬಳಿಕ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದರು.ಈಗಿನ ಬಿಜೆಪಿ ಮಾಜಿ ಪ್ರಧಾನಿ ವಾಜಪೇಯಿ ಅವರ ಸಿದ್ಧಾಂತಗಳನ್ನು ಪಾಲಿಸುತ್ತಿಲ್ಲ ಎಂದು ಆರೋಪಿಸಿ ಕಳೆದ ಜನವರಿಯಲ್ಲಿ ಬಿಜೆಪಿಯನ್ನೂ ತೊರೆದಿದ್ದರು.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...