ABC

Tuesday, 19 February 2019

ಈ ಬಾರಿಯ ಮೈಲಾರದ ಕಾರ್ಣಿಕ ‘ಅಂಬ್ಲಿ ರಾಶಿ ತುಂಬಿ ತುಳುಕಿತಲೇ ಪರಾಕ್’ ಇದರ ಸ್ವಾರಸ್ಯ ಹೀಗಿದೆ.

ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಮೈಲಾರಲಿಂಗೇಶ್ವರ ಜಾತ್ರೆ ನಡೆದಿದೆ, ಈ ಬಾರಿಯ ಮೈಲಾರ ಕಾರ್ಣಿಕ ಈ ರೀತಿ ಬಂದಿದ್ದು ಇದು ಶುಭದ ಸಂಕೇತ ಎಂಬುದಾಗಿ ಹಿರಿಯರು ಹೇಳುತ್ತಿದ್ದಾರೆ.

ಮೈಲಾರಲಿಂಗೇಶ್ವರನ ಮೊದಲ ಕಾರ್ಣಿಕೋತ್ಸವ ಎಂದೇ ಕರೆಯಲ್ಪಡುವ ದೊಡ್ಡ ಮೈಲಾರದ ಕಾರ್ಣಿಕ’ ಪಟ್ಟಣದ ಹೊರ ವಲಯದಲ್ಲಿ ನೆನ್ನೆ ನಡಿಯಲಾಯಿತು, ಈ ವೇಳೆಯಲ್ಲಿ ಗೊರವಪ್ಪ ಕೋಟೆಪ್ಪ ಅವರು ಬಿಲ್ಲನ್ನು ಏರಿ ಕಾರ್ಣಿಕವನ್ನು ನುಡಿದರು ಈ ಸಂದರ್ಭದಲ್ಲಿ ಎಲ್ಲ ಭಕ್ತಾದಿಗಳು ಮೌನಕ್ಕೆ ಶರಣಾಗಿದ್ದು, ಗೊರವಪ್ಪ ಕೋಟೆಪ್ಪ ಅವರು ನುಡಿದಂತ ಕಾರ್ಣಿಕವನ್ನು ಕೇಳಿಸಿಕೊಂಡರು.

‘ಅಂಬ್ಲಿ ರಾಶಿ ತುಂಬಿ ತುಳುಕಿತಲೇ ಪರಾಕ್ ಈ ವರ್ಷ ಶುಭವಾಗುವುದು ರೈತರಿಗೆ ಹಾಗೂ ರೈತರು ಬೆಳೆದಂತ ಬೆಳೆಗಳಿಗೆ ಒಳ್ಳೆಯದಾಗುವುದು, ಸಮೃದ್ಧ ಮಳೆ ಸುರಿದು ಉತ್ತಮ ಫಸಲು ಬರಲಿದೆ. ರೈತನ ಬಾಳು ಹಸನಾಗಲಿದೆ ಎಂಬುದು ಇದರ ಅರ್ಥವಾಗಿದೆ ಅನ್ನೋದನ್ನ ಹಿರಿಯರು ಹೇಳುತ್ತಾರೆ.ಮೈಲಾರಲಿಂಗೇಶ್ವರನ ಜಾತ್ರೆಗೆ ದಾವಣಗೆರೆ ಚಿತ್ರದುರ್ಗ ಬಳ್ಳಾರಿ ಶಿವಮೊಗ್ಗ, ಹಾವೇರಿ ಮುಂತಾದ ಹಲವು ಜಿಲ್ಲೆಗಳಿಂದ ಭಕ್ತಾಧಿಗಳು ಬರುತ್ತಾರೆ ಪ್ರತಿ ವರ್ಷ.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...