ABC

Thursday, 14 February 2019

ದೇವೇಗೌಡರ ಬಗ್ಗೆ ಆ ರೀತಿಯ ಮಾತುಗಳನ್ನು ದೇವರು ಮೆಚ್ಚಲ್ಲ: ಜನಾರ್ಧನ ಪೂಜಾರಿ.

ಮಂಗಳೂರು: ಶಾಸಕ ಪ್ರೀತಂಗೌಡ ಆಗಲಿ, ಯಾರೇ ಆಗಲಿ ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಈ ರೀತಿ ಮಾತನಾಡುವುದನ್ನು ದೇವರು ಮೆಚ್ಚಲ್ಲ ಎಂದು ಕಾಂಗ್ರೆಸ್ ನ ಹಿರಿಯ ಮುಖಂಡ ಜನಾರ್ದನ ಪೂಜಾರಿ ಹಾಸನದಲ್ಲಿ ನಡೆದ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಘರ್ಷಣೆ ಕುರಿತು ಪ್ರತಿಕ್ರಿಯಿಸಿದ್ದಾರೆ.
ದೇವೇಗೌಡರಿಗೆ ಸಾಕಷ್ಟು ಮಂದಿ ಅಭಿಮಾನಿಗಳಿದ್ದಾರೆ. ಜೆಡಿಎಸ್ ಕಾರ್ಯಕರ್ತರು ಗಲಾಟೆ ಎಲ್ಲಾ ಮಾಡುವುದಕ್ಕೆ ಹೋಗಬೇಡಿ. ನಮ್ಮ ನಡುವೆ ದೇವರೊಬ್ಬನಿದ್ದಾನೆ. ದೇವರು ಎಲ್ಲವನ್ನು ನೋಡಿಕೊಳ್ಳುತ್ತಾನೆ. ಎಲ್ಲವನ್ನು ದೇವರಿಗೆ ಬಿಟ್ಟು ಬಿಡಿ, ದೇವರಿಗಿಂತ ದೊಡ್ಡವರು ನಾವಲ್ಲ ಎಂದು ಪೂಜಾರಿ ಹೇಳಿದರು.
ಆಪರೇಷನ್ ಕಮಲದ ವಿಚಾರವಾಗಿ ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರಿಗೆ ಆಪರೇಷನ್ ಮಾಡುವುದು ಹವ್ಯಾಸವಾಗಿದೆ. ಪ್ರಾಣ ಹೋದರೂ ಅವರು ಆಪರೇಷನ್ ನಿಲ್ಲಿಸುವುದಿಲ್ಲ. ಆಪರೇಷನ್ ಕಮಲ ಯಡಿಯೂರಪ್ಪ ಅವರಿಗೆ ರಾಷ್ಟ್ರಮಟ್ಟದಲ್ಲಿ ಕೆಟ್ಟ ಹೆಸರು ತಂದಿದೆ ಎಂದು ಅವರು ಹೇಳಿದರು.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...