ABC

Wednesday, 13 February 2019

ಕನ್ನಡದ ಜನತೆ

ಕನ್ನಡದ ಜನತೆ ಕುತೂಹಲದಿಂದ‌ ಕಾಯುತ್ತಾ ಕುಳಿತಿರುವ ಅಂಬರೀಷ್ ಅವರ ಪುತ್ರ ಅಭಿಷೇಕ್‌ ಅಂಬರೀಷ್ ಅಭಿನಯದ ಅಮರ್ ಚಿತ್ರದ ಟೀಸರ್ ಇಂದು ಬಿಡುಗಡೆಯಾಗಿದೆ. ಬಿಡುಗಡೆಯಾದ ಅರ್ಧ ಗಂಟೆಯಲ್ಲೇ 2 ಲಕ್ಷಕ್ಕೂ ಅಧಿಕ‌ ಜನ ಟೀಸರ್ ವೀಕ್ಷಿಸಿದ್ದಾರೆ. ಟೀಸರ್‌ನಿಂದಲೇ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ‌ ಮೂಡಿಸಿದೆ ಚಿತ್ರತಂಡ. ಇನ್ನು ಯಂಗ್ ರೆಬಲ್ ಅಭಿಷೇಕ್ ಅಂಬರೀಷ್ ಖಡಕ್ ಆಗಿ ಕಾಣಿಸಿಕೊಂಡಿದ್ದು ಚಿತ್ರವನ್ನು ಕಣ್ತುಂಬಿಕೊಳ್ಳಲು ಸಿನಿ ರಸಿಕರು ತುದಿಗಾಲಿನಲ್ಲಿ‌ ಕಾಯುವಂತೆ ಮಾಡಿದೆ ಈ ಟೀಸರ್.”ಮೈನಾ” , “ಸಂಜು ವೆಡ್ಸ್ ಗೀತಾ” ಗಳಂತಹ ಚಿತ್ರಗಳನ್ನು ನಿರ್ದೇಶಿಸಿರುವ ನಾಗಶೇಖರ್ ಈ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು‌ ಹೊತ್ತು ಟೀಸರ್ ನಿಂದಲೇ‌ ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲ‌ ಕೆರಳಿಸಿದ್ದಾರೆ.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...