ABC

Thursday, 21 February 2019

ಅನಾರೋಗ್ಯಕ್ಕೆ ತುತ್ತಾದವರಿಗೆ ದೋಸ್ತಿ ಸರ್ಕಾರದಿಂದ ಗುಡ್ ನ್ಯೂಸ್.

ಬೆಂಗಳೂರು: ಹೌದು ಅನಾರೋಗ್ಯಕ್ಕೆ ತುತ್ತಾದವರಿಗೆ ದೋಸ್ತಿ ಸರ್ಕಾರದಿಂದ ಗುಡ್ ನ್ಯೂಸ್ ಕೊಟ್ಟಿದೆ ಯಾರಿಗೆ ಮತ್ತು ಯಾವ ಕಾಯಿಲೆಗೆ ಅನ್ನೋದು ಇಲ್ಲಿದೆ ನೋಡಿ.ಅನಾರೋಗ್ಯಪೀಡಿತ ಸರ್ಕಾರಿ ನೌಕರರಿಗೆ ದೋಸ್ತಿ ಸರ್ಕಾರ ನೆಮ್ಮದಿಯ ಸುದ್ದಿಯೊಂದನ್ನ ಕೊಟ್ಟಿದೆ. ಕ್ಯಾನ್ಸರ್ ಚಿಕಿತ್ಸೆಗೆ ನೀಡಲಾಗುವ ಮೊತ್ತವನ್ನು ಹೆಚ್ಚಿಸಿದೆ.

ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಯಡಿ ಕ್ಯಾನ್ಸರ್ ಚಿಕಿತ್ಸೆಗೆ ನಿಗದಿಪಡಿಸಿದ ಮರುಪಾವತಿ ದರಪಟ್ಟಿಯನ್ನೇ ಇದೀಗ ರಾಜ್ಯ ಸರ್ಕಾರವೂ ಅಳವಡಿಸಿಕೊಳ್ಳಲು ತೀರ್ಮಾನಿಸಿದೆ. ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬಸ್ಥರ ಕ್ಯಾನ್ಸರ್ ಚಿಕಿತ್ಸೆ ವೆಚ್ಚವನ್ನು ಪರಿಷ್ಕರಿಸಿದೆ. 3 ಹಂತದ ಚಿಕಿತ್ಸೆಗೂ ಹೊಸ ಪರಿಷ್ಕರಣೆ ಅನ್ವಯ ಆಗಲಿದೆ.ಮೊದಲ ಹಂತದ 6 ಚಿಕಿತ್ಸಾ ವಿಧಾನಕ್ಕೆ 2700 ರೂ.ಯಿಂದ 18 ಸಾವಿರದವರೆಗೆ ಚಿಕಿತ್ಸಾ ವೆಚ್ಚ ಭರಿಸಲಾಗುತ್ತದೆ. 2ನೇ ಹಂತದ 7 ಚಿಕಿತ್ಸಾ ವಿಧಾನಕ್ಕೆ 500 ರೂ.ಯಿಂದ 20 ಸಾವಿರದವರೆಗೆ ಚಿಕಿತ್ಸಾ ವೆಚ್ಚ ಹಾಗೂ 3ನೇ ಹಂತದ 6 ಸರ್ಜರಿ ವಿಧಾನಕ್ಕೆ 5 ಸಾವಿರದಿಂದ 45 ಸಾವಿರದವರೆಗೆ ಚಿಕಿತ್ಸಾ ವೆಚ್ಚವನ್ನು ನೀಡಲಾಗುತ್ತದೆ.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...