ಬೆಂಗಳೂರು: ಖಾಸಗಿ ಶಾಲೆಗಳು ಬರುವ ಏಪ್ರಿಲ್ 15ರಿಂದಲೇ ಶಾಲೆಗಳನ್ನು ಆರಂಭಿಸಲು ಈಗಾಗಲೇ ನಿರ್ಧರಿಸಿವೆ.ಆದರೆ ಸರ್ಕಾರಿ ಶಾಲೆಗಳನ್ನು ಮೇ ತಿಂಗಳ ಮೊದಲನೇ ವಾರದಿಂದ ಆರಂಭಿಸಲು ನಿರ್ಧಾರ ಬಗ್ಗೆ ಸರ್ಕಾರ ಹಾಗೂ ಶಿಕ್ಷಕರ ನಡುವೆ ಸಾಕಷ್ಟು ಗೊಂದಲಗಳು ಎದುರಾಗಿವೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಮಹಾರಾಣಿ ಕಲಾ ವಾಣಿಜ್ಯ ಹಾಗೂ ನಿರ್ವಹಣ ಕಾಲೇಜು ನಗರದಲ್ಲಿ ಗುರುವಾರ ಆಯೋಜಿಸಿದ್ದ ಭಾರತೀಯ ಉನ್ನತ ಶಿಕ್ಷಣ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಕುಮಾರಸ್ವಾಮಿಯವರು.
ಈ ಬಗ್ಗೆ ಶಿಕ್ಷಕರು ಚರ್ಚಿಸಿ ತೀರ್ಮಾನಿಸಬೇಕು ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ ಹಾಗೂ ಯುಕೆಜಿ ಪ್ರಾರಂಭಿಸುವ ಬಗ್ಗೆ ಈಗಾಗಲೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಮುಂದಿನ ಶೈಕ್ಷಣಿಕ ವರ್ಷದಿಂದ ಒಂದು ಸಾವಿರ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಪ್ರಥಮ ಹಂತವಾಗಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ ಆಯ್ಕೆಯನ್ನು ಪಾಲಕರಿಗೆ ಬಿಡಲಾಗುವುದು ಎಂದು ಹೇಳಿದರು.
ಗುಣಮಟ್ಟದ ಶಿಕ್ಷಣ ಹಾಗೂ ನಿರುದ್ಯೋಗ ಸಮಸ್ಯೆಯನ್ನು ಸಂಪೂರ್ಣವಾಗಿ ತೊಡೆದು ಹಾಕಲು ಅಗತ್ಯ ತೀರ್ಮಾನಗಳನ್ನು ತೆಗೆದು ಕೊಳ್ಳಲಾಗುವುದು ಶಿಕ್ಷಕರ ಪ್ರಾಧ್ಯಾಪಕರ ಸಮಸ್ಯೆಗಳನ್ನು ಪರಿಹರಿಸಲು ನಾನು ಸಿದ್ಧನಿದ್ದೇನೆ ನೀವೆಲ್ಲ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಸೂಚಿಸಿದರು.
ಕಳೆದ ಮುಂಗಾರಿನ ಸಮಯದಲ್ಲಿ ರಸ್ತೆ ಗಳಿಲ್ಲದೆ ನದಿ ಸೇತುವೆ ದಾಟುತ್ತಿರುವ ವೇಳೆ ಮಗುವೊಂದು ಮೃತಪಟ್ಟ ಘಟನೆ ನಡೆದಿತ್ತು.ಇದನ್ನು ಗಮನದಲ್ಲಿಟ್ಟುಕೊಂಡು ಅಂತಹ ಗ್ರಾಮಗಳಲ್ಲಿ ಸೇತುವೆ ಕಟ್ಟಲು ತೀರ್ಮಾನಿಸಲಾಗಿದೆ.ಅಲ್ಲದೇ ಹೆಣ್ಣು ಮಕ್ಕಳಿಗೆ ಪದವಿ ಶಿಕ್ಷಣದವರೆಗೆ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಶುಲ್ಕ ರಹಿತ ಶಿಕ್ಷಣ ವ್ಯವಸ್ಥೆ ಜಾರಿಗೆ ತರಲು ತೀರ್ಮಾನಿಸಿ ಆದೇಶ ನೀಡಲಾಗಿದೆ ಎಂದು ತಿಳಿಸಿದರು.

No comments:
Post a Comment