ABC

Friday, 1 February 2019

ಮನೆ-ಮನೆಗೆ 'ಸೀತಾರಾಮ ಕಲ್ಯಾಣ' ಉಚಿತ ಟಿಕೆಟ್... ರೂಮರ್​​ ಬಗ್ಗೆ ಸಿಎಂ ಹೆಚ್​​ಡಿಕೆ ಕಿಡಿ


ಮಂಡ್ಯದಲ್ಲಿ 'ಸೀತಾರಾಮ ಕಲ್ಯಾಣ' ಚಿತ್ರದ ಟಿಕೆಟ್​ ಉಚಿತವಾಗಿ ಹಂಚಲಾಗುತ್ತಿದೆ. ಸಿಎಂ ಪುತ್ರ ನಿಖಿಲ್​ ಚಿತ್ರ ನೋಡಲು ಮನೆಮನೆಗೆ ಟಿಕೆಟ್​ ತಲುಪಿಸುವ ಕಾರ್ಯ ನಡೆದಿದೆ ಎನ್ನುವ ರೂಮರ್​ ಕೇಳಿ ಬಂದಿತ್ತು. ಈ ಬಗ್ಗೆ ಮುಖ್ಯಮಂತ್ರಿ ಹೆಚ್​​​ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ನಿನ್ನೆ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಟಿಕೆಟ್​ ಪುಕ್ಸಟ್ಟೆಯಾಗಿ ವಿತರಿಸಲಾಗುತ್ತಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ನಾವು ಅಷ್ಟೊಂದು ಅಗ್ಗದ ರಾಜಕಾರಣ ಮಾಡೋದಿಲ್ಲ ಎಂದು ಬೇಸರದಿಂದ ಪ್ರತಿಕ್ರಿಯಿಸಿದ್ದಾರೆ.

ಕುಮಾರಸ್ವಾಮಿಯವರು ಮಗ ನಿಖಿಲ್​ರ ಚಿತ್ರಕ್ಕೆ ಮೊದಲಿನಿಂದಲೂ ಬೆಂಬಲವಾಗಿ ನಿಂತಿದ್ದಾರೆ. ಸೀತಾರಾಮ ಕಲ್ಯಾಣ ಶೂಟಿಂಗ್ ಪ್ರಾರಂಭದಿಂದ ಹಿಡಿದು ತೆರೆಗೆ ಕಾಣುವವರೆಗೂ ಪ್ರತಿಯೊಂದನ್ನು ಗಮನಿಸಿ, ಸೂಕ್ತ ಸಲಹೆ ನೀಡುತ್ತಿದ್ದಾರೆ. ಅಲ್ಲದೆ ಎಲ್ಲಾ ಪಕ್ಷಗಳ ನಾಯಕರಿಗೆ ಪುತ್ರನ ಸಿನಿಮಾ ಶೋ ಏರ್ಪಡಿಸಿದ್ದರು.

ಇನ್ನು ಸೀತಾರಾಮ ಕಲ್ಯಾಣ ಚಿತ್ರದಲ್ಲಿ ನಿಖಿಲ್​ ಗೌಡ, ರಚಿತಾರಾಮ್ ನಟಿಸಿದ್ದಾರೆ. ಎ.ಹರ್ಷಾ ನಿರ್ದೇಶನ ಚಿತ್ರಕ್ಕಿದೆ. ಅನೀತಾ ಕುಮಾರಸ್ವಾಮಿ ಹಣ ಹಾಕಿದ್ದಾರೆ. ಈಗಾಗಲೇ 20 % ಲಾಭ ಬಂದಿದೆ ಎಂದು ಮೊನ್ನೆಯಷ್ಟೆ ಚಿತ್ರತಂಡ ಹೇಳಿಕೊಂಡಿದೆ.
ಇಷ್ಟು ಲಾಭ ಬಂದಿದೆ ಅಂದ್ರೆ ನಾವು ಫ್ರೀಯಾಗಿ ಹಂಚಿದರೆ ಲಾಭ ಹೇಗೆ ಬರುತ್ತದೆ ಇದು ಕಿಡಿಗೇಡಿಗಳ ಅಪಪ್ರಚಾರವೇ ಸರಿ.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...