ಮೈತ್ರಿ ಸರ್ಕಾರ ರೈತರ ಸಾಲ ಮನ್ನಾ ಘೋಷಣೆ ಮಾಡಿದಾಗ ಬಿಜೆಪಿಯವರು ರೈತರಿಗೆ ಲಾಲಿಪಾಪ್ ನೀಡಿದ್ದಾರೆ ಅಂದಿದ್ರು, ಈಗ ಪ್ರಧಾನಿ ಮೋದಿ ರೈತರಿಗೆ ಕೊಟ್ಟಿರೋದು ಕಾಟನ್ ಕ್ಯಾಂಡಿನಾ? ಅಂತ ಸಿಎಂ ಕುಮಾರಸ್ವಾಮಿ ಪ್ರಶ್ನಿಸಿದ್ರು.
ಕೇಂದ್ರ ಸರ್ಕಾರದ ಬಜೆಟ್ ಬಗ್ಗೆ ಗೃಹ ಕಚೇರಿ ಕೃಷ್ಣಾದಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ ಮೋದಿ ಬಜೆಟ್ ಜನರ ನಿರೀಕ್ಷೆ ಸಂಪೂರ್ಣ ಹುಸಿ ಮಾಡಿದೆ ಎಂದು ವಾಗ್ದಾಳಿ ನಡೆಸಿದರು. ರೈತರಿಗೆ ಎರಡು ಹೆಕ್ಟೇರ್ ಜಮೀನಿಗೆ 6000 ರೂ. ಹಣ ನೇರವಾಗಿ ಅಕೌಂಟ್‌ಗೆ ಜಮೆ ಆಗಲಿದೆ ಎಂದು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ.
ಇದು 12 ಕೋಟಿ ರೈತರಿಗೆ ಪ್ರಯೋಜನವಾಗಲಿದ್ದು,75000 ಕೋಟಿ ರೂಪಾಯಿ ಮೀಸಲಿಡುವುದಾಗಿ ಬಜೆಟ್ ನಲ್ಲಿ ಹೇಳಿದ್ದಾರೆ.ಬಜೆಟ್ ಅನುಷ್ಟಾನ ಆದರೆ ನಮ್ಮ ರಾಜ್ಯದ 59 ಲಕ್ಷ ರೈತರಿಗೆ ಕೇವಲ 3579 ಕೋಟಿ ರೂಪಾಯಿ ಪ್ರಯೋಜನ ಸಿಗಲಿದೆ.ಒಂದು ರಾಜ್ಯ ಸರ್ಕಾರವಾಗಿ ನಾವು ಸುಮಾರು 48000 ಕೋಟಿ ರೂ ಸಾಲ ಮನ್ನಾ ಮಾಡ್ತಿದ್ದೀವಿ. ನಾವು ಸಾಲಮನ್ನಾ ಮಾಡಿದರೆ ಅದು ಲಾಲಿಪಾಪ್. ಹಾಗಾದರೆ ಇವರು ರೈತರಿಗೆ ಕೊಟ್ಟಿದ್ದೇನು? ಕಾಟನ್ ಕ್ಯಾಂಡಿನಾ? ಅಂತ ಕುಮಾರಸ್ವಾಮಿ ಬಿಜೆಪಿ ನಾಯಕರ ವಿರುದ್ದ ವ್ಯಂಗ್ಯವಾಡಿದರು.
ಈ ಬಜೆಟ್ ಅನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಬೇಕಿಲ್ಲ.ಈ ಬಜೆಟ್ ನಿಂದ ರಾಜ್ಯಕ್ಕೆ ನೆರವೂ ಸಿಗುತ್ತೆ ಎಂದು ನಾನು ಭಾವಿಸಿಲ್ಲ.ಮುಂದೆ ಬರುವ ಸರ್ಕಾರ ಇದನ್ನು ಬದಲಾಯಿಸಬಹುದು.ಇದು ಚುನಾವಣೆ ಬಜೆಟ್ ಎಂದು ಆರ್ಥಿಕ ತಜ್ಞರೇ ಹೇಳಿದ್ದಾರೆ. ಈ ಬಜೆಟ್ ನಲ್ಲಿ ಯಾವುದೇ ಸ್ಪಷ್ಟನೆ ಇಲ್ಲ ಎಂದು ಸಿಎಂ ಹೇಳಿದ್ರು.

No comments:
Post a Comment