ABC

Thursday, 7 February 2019

ಕೇಂದ್ರ ಸರ್ಕಾರದ ಬಜೆಟ್ ಗೆ ಸೆಡ್ಡು ಹೊಡೆದ ರಾಜ್ಯ ಸರ್ಕಾರದ ಬಜೆಟ್: ಎಚ್ ಡಿ ಕುಮಾರಸ್ವಾಮಿ

ಇಂದು ಕರ್ನಾಟಕ ರಾಜ್ಯದ ಈ ವರ್ಷದ ಬಜೆಟ್ ಅನ್ನು ಮಾನ್ಯ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ಮಂಡಿಸಿದರು. ತಮ್ಮ ವಿರೋಧದ ಬಗ್ಗೆ ಒಂದಿಷ್ಟೂ ಬೆಲೆಕೊಡದೆ ಸಿಎಂ ಬಜೆಟ್​ ಮಂಡಿಸುವ ಪ್ರಕ್ರಿಯೆ ಮುಂದುವರಿಸಿದ್ದರಿಂದ, ಪ್ರತಿಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದರು.
ವಾಣಿಜ್ಯ ಬ್ಯಾಂಕ್‌ಗಳ ಸಾಲಮನ್ನಾ ಮಾಡಲು ಪ್ರಯತ್ನ, ಸಾಲಮನ್ನಾ ಸವಾಲಾಗಿ ಸ್ವೀಕರಿಸುವೆ. ರೈತರ ಖಾತೆಗಳಿಗೆ ಸಾಲಮನ್ನಾ ಹಣ ಪಾವತಿ. 12 ಲಕ್ಷ ಖಾತೆಗೆ 5 ಸಾವಿರದ 400 ಕೋಟಿ ರೂ ಹಣ ಬಿಡುಗಡೆ ಆಗಿದೆ.

ಖ್ಯಾತ ಕೃಷಿ ಅರ್ಥಶಾಸ್ತ್ತ್ರಜ್ಞ ಡಾ.ಎಂ.ಎಸ್.ಸ್ವಾಮಿನಾಥನ್ ಮಾತು ಪ್ರಸ್ತಾಪ. ರೈತರು ಕೃಷಿ ಪದ್ಧತಿಯಲ್ಲಿ ಕೆಲವು ಬದಲಾವಣೆಗಳನ್ನು ಅಳವಡಿಸಿಕೊಳ್ಳಬೇಕು. ಇದೇ ನಿಟ್ಟಲ್ಲಿ ಶೂನ್ಯ ಬಂಡವಾಳದಲ್ಲಿ ಸಾವಯವ ಕೃಷಿ ವ್ಯವಸ್ಥೆಗೆ ಯೋಜನೆ. ಇಸ್ರೇಲ್ ಮಾದರಿ ಕೃಷಿ ಪದ್ಧತಿ ಜಾರಿಗೆ ಎಲ್ಲಾ ರೀತಿಯ ವ್ಯವಸ್ಥೆ ಜಾರಿ ಇದೆ.

ಕೇಂದ್ರದಿಂದ ಅನುದಾನ ಬಿಡುಗಡೆಯಲ್ಲಿ ತಾರತಮ್ಯ. ನಾವು ಕೇಂದ್ರಕ್ಕೆ ಕೇಳಿದ ಎರಡೂವರೆ ಸಾವಿರ ಕೋಟಿ ರೂ. ಆದರೆ, ರಾಜ್ಯಕ್ಕೆ ಬಿಡುಗಡೆಯಾಗಿದ್ದು 949 ಕೋಟಿ ರೂ. ಮಾತ್ರ,
ಬೀದಿ ಬದಿ ವ್ಯಾಪಾರಿಗಳಿಗೆ 7.5 ಕೋಟಿ ರೂ. ಸಾಲ ವಿತರಣೆ. 13,520 ಮಂದಿ ಬೀದಿಬದಿ ವ್ಯಾಪಾರಿಗಳಿಗೆ ಸಾಲ ವಿತರಣೆ.

ಕೃಷ್ಣಾಮೇಲ್ದಂಡೆ ಯೋಜನೆಗೆ 1050 ಕೋಟಿ ರೂ. ಬಿಡುಗಡೆ.ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಪ್ರದೇಶಗಳಿಗೆ ಶಾಶ್ವತ ನೀರಾವರಿ ಯೋಜನೆ.ಗುಣಮಟ್ಟದ ಶಿಕ್ಷಣ ಆಶಯದೊಂದಿಗೆ ಶಾಲಾ ಸಂಪರ್ಕ ಯೋಜನೆ ಜಾರಿ, 176 ಕರ್ನಾಟಕ ಪಬ್ಲಿಕ್ ಸ್ಕೂಲ್ ಸ್ಥಾಪನೆ. ಸರ್ಕಾರಿ ಶಾಲೆಗಳ ಅಭಿವೃದ್ಧಿ ಕ್ರಮ.

ಕೈಗಾರಿಕಾ ಕ್ಷೇತ್ರಕ್ಕೆ ಆದ್ಯತೆ ನೀಡಲು ಬೆಂಗಳೂರು ನಗರದಾಚೆಗೆ ವಿಸ್ತರಣೆ.ಮಹಾನ್ ಮಾನವತಾವಾದಿ ನೆಲ್ಸನ್ ಮಂಡೇಲಾ ಆದರ್ಶಗಳ ಪ್ರಸ್ತಾಪ.ಬಡವ ಬಲ್ಲಿದರೆನ್ನದೇ ಜಾತಿ ಭೇದ ಮಾಡದೆ ಸಿದ್ಧಗಂಗಾ ಶ್ರೀಗಳು ಮಾದರಿ.ರಾಜ್ಯ ಸರ್ಕಾರ ಸಹ ರಾಜ್ಯದಲ್ಲಿ ಬಡಮಕ್ಕಳ ಶಿಕ್ಷಣಕ್ಕೆ ಅನುದಾನ ಸ್ಮರಣೆ.
ಆಯುಷ್ಮಾನ್ ಭಾರತ್ ಯೋಜನೆಯೊಂದಿಗೆ ಆರೋಗ್ಯ ಕರ್ನಾಟಕ ಯೋಜನೆ ವಿಲೀನ. ಆಯುಷ್ಮಾನ್ ಯೋಜನೆ ಕೇವಲ 62 ಲಕ್ಷ ಕುಟುಂಬಗಳಿಗಷ್ಟೇ ಲಾಭ. ಹೆಚ್ಚು ಜನರಿಗೆ ತಲುಪಿಸಲು ಆರೋಗ್ಯ ಯೋಜನೆ ಜತೆ ವಿಲೀನ. ಎಪಿಎಲ್ ಕುಟುಂಬಗಳಿಗೂ ಆರೋಗ್ಯ ಯೋಜನೆ ಲಾಭ. ಆರೋಗ್ಯ ಯೋಜನೆಗೆ ಸರ್ಕಾರದಿಂದಲೇ ಹೆಚ್ಚಿನ ವೆಚ್ಚ.

ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 10 ಕೋಟಿ ಉದ್ಯೋಗ ಸೃಷ್ಟಿ.ಕರ್ನಾಟಕ ಬಯಲು ಶೌಚಮುಕ್ತ ರಾಜ್ಯ.415 ಕೋಟಿ ವೆಚ್ಚದಲ್ಲಿ ನಗರಗಳಲ್ಲಿ ಒಳಚರಂಡಿ ಯೋಜನೆ.
64 ಕಿ. ಮೀಟರ್ ಫೆರಿಫೆರಲ್, 100 ಕಿ. ಮೀಟರ್ ಎಲಿವೇಟರ್ ಕಾರಿಡಾರ್ ನಿರ್ಮಾಣ. ತ್ಯಾಜ್ಯ ನೀರು ಸಂಪೂರ್ಣ ಸಂಸ್ಕರಣೆಗೆ ಕ್ರಮ.ರಾಜ್ಯದಲ್ಲಿ ರಸ್ತೆಗಳ ಅಭಿವೃದ್ದಿಗೆ ಕ್ರಮ, 10,405 ಕೋಟಿ ಅನುದಾನ.
ಮಾತೃಶ್ರೀ ಯೋಜನೆಯಡಿ ಗರ್ಭಿಣಿಯರಿಗೆ ಮಾಸಿಕ 6 ಸಾವಿರ .ನವೆಂಬರ್ 1, 2018ರಿಂದ ಮಾತೃಶ್ರೀ ಯೋಜನೆ ಜಾರಿಯಾಗಿದೆ.
ವಸತಿ ಯೋಜನೆಗಾಗಿ ಅನುದಾನ.ಮೊದಲ ಹಂತದಲ್ಲಿ 48 ಸಾವಿರ ಅರ್ಜಿಗಳು ಸ್ವೀಕಾರ.
ಮೆಟ್ರೋ 2ನೇ ಹಂತದ ಕಾಮಗಾರಿ ಜಾರಿ.102 ಕಿಲೋ ಮೀಟರ್ವರೆಗೆ ನಮ್ಮ ಮೆಟ್ರೋ ವಿಸ್ತರಣೆ.
ಹಿರಿಯ ನಾಗರಿಕರಿಗೂ ಮಾಸಾಶನ ಏರಿಕೆ

ಸಂಧ್ಯಾ ಸುರಕ್ಷಾ ಪಿಂಚಣಿ 1 ಸಾವಿರಕ್ಕೆ ಏರಿಕೆ.ಬಾಣಂತಿಯರಿಗೆ ಮಾಸಿಕ 1 ಸಾವಿರ ರೂ. ಮಾಸಾಶನ.600 ರೂ.ನಿಂದ 1 ಸಾವಿರಕ್ಕ ಮಾಸಾಶನ ಏರಿಕೆ.
ತಿಪ್ಪಗೊಂಡನಹಳ್ಳಿ ಜಲಾಶಯ ಪುನಶ್ಚೇತನ ಕಾರ್ಯಕ್ಕೆ ಸರ್ಕಾರದ ಆದ್ಯತೆ

ಬೆಂಗಳೂರು ನಗರದಲ್ಲೇ ತ್ಯಾಜ್ಯ ನೀರು ಸಂಸ್ಕರಣೆಗೆ 117 ಘಟಕಗಳ ಸ್ಥಾಪನೆ.ಮುಖ್ಯಮಂತ್ರಿಗಳ ನವನಿರ್ಮಾಣ ಯೋಜನೆ ಅಡಿ 8015 ಕೋಟಿ ರೂಪಾಯಿ.2020ರೊಳಗೆ ಬೆಂಗಳೂರು ಅಭಿವೃದ್ಧಿ ಹೊಸ ದಿಕ್ಕಿನಲ್ಲಿ ಕೊಂಡೊಯ್ಯಲು ಸಿದ್ಧ..
ಸಾವಯವ ಕೃಷಿಗೆ 35 ಕೋಟಿ ರೂ. ಅನುದಾನ.ಕೃಷಿ ವಿಶ್ವವಿದ್ಯಾಲಯಕ್ಕೆ 40 ಕೋಟಿ ಅನುದಾನ.ಕೃಷಿಭಾಗ್ಯ ಯೋಜನೆಯಡಿ ಕೃಷಿ ಹೊಂಡಕ್ಕಾಗಿ 350 ಕೋಟಿ ರೂ. ಮೀಸಲು.
ತೋಟಗಾರಿಕೆಗೆ 150 ಕೋಟಿ ರೂ. ವಿಶೇಷ ಪ್ಯಾಕೇಜ್

ಜೇನು ಕೃಷಿಗೆ 5 ಕೋಟಿ ರೂ. ಅನುದಾನ .ಧಾರವಾಡದಲ್ಲಿ ಮಾವು ಸಂಸ್ಕರಣಾ ಘಟಕ.ಕೋಲಾರದಲ್ಲಿ ಟಮೋಟಾ ಸಂಸ್ಕರಣಾ ಘಟಕ ನಿರ್ಮಾಣ.ದ್ರಾಕ್ಷಿ, ದಾಳಿಂಬೆ ಬೆಳೆಗಾರರಿಗೆ 150 ಕೋಟಿ ವಿಶೇಷ ಪ್ಯಾಕೇಜ್.
ದೇವೇಗೌಡರ ಕಾಲದಲ್ಲಿದ್ದ ಹನಿ ನೀರಾವರಿ ಯೋಜನೆಗೆ 268 ಕೋಟಿ ಹಣ .ಜಲಾನಯನ ಪ್ರದೇಶದ 9 ಲಕ್ಷ ಹೆಕ್ಟೇರ್ ಪ್ರದೇಶ ಅಭಿವೃದ್ಧಿಗೆ 100 ಕೋಟಿ .ಕರ್ನಾಟಕ ಬೀಜ ನಿಗಮಕ್ಕೆ 5 ಕೋಟಿ ರೂಪಾಯಿ ಅನುದಾನ ಹಣ ನಿಗದಿ.
2019-20ಕ್ಕೆ ಕೃಷಿ ಕ್ಷೇತ್ರದ ಹೊಸ ಘೋಷಣೆ

ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಮೀನಾಗಾರಿಕೆ ಇಲಾಖೆ.
ಕೃಷಿಭಾಗ್ಯ ಯೋಜನೆಯಡಿ ಕೃಷಿಹೊಂಡ ನಿರ್ಮಾಣಕ್ಕೆ 250 ಕೋಟಿರೂ.
ಶೂನ್ಯ ಬಂಡವಾಳ ಕೃಷಿ ಅಳವಡಿಕೆ ಕಾರ್ಯಕ್ರಮಕ್ಕೆ 40 ಕೋಟಿ ರೂ.
ಸಾವಯವ ಕೃಷಿ ಉತ್ಪನ್ನಗಳ ಅಭಿವೃದ್ಧಿಗೆ 35 ಕೋಟಿ ರೂ ಅನುದಾನ.
ಉತ್ಪನ್ನಗಳ ಮಾರುಕಟ್ಟೆ ಬಲವರ್ಧನೆ ಪ್ರೋತ್ಸಾಹಕ್ಕೆ 2 ಕೋಟಿ ರೂಪಾಯಿ.
ಅರ್ಹ ಉದ್ದಿಮೆದಾರರು, ನವೋದ್ಯಮಿಗಳಿಗೆ ಉತ್ತೇಜನ ನೀಡಲು ಹಣ.


ಇಸ್ರೇಲ್ ಮಾದರಿಯಲ್ಲಿ ಕಿರು ನೀರಾವರಿ ಯೋಜನೆಗೆ 145 ಕೋಟಿ ರೂ.
ರೇಷ್ಮೆ ಕೃಷಿ ಸಂಶೋಧನೆಗೆ 2 ಕೋಟಿ ರೂ. ಅನುದಾನ.ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಗೆ 10 ಕೋಟಿ ರೂ. ಅನುದಾನ.ಚಾಮರಾಜನಗರದಲ್ಲಿ ರೇಷ್ಮೆ ಕಾರ್ಖಾನೆ ಪುನಶ್ಚೇತನಕ್ಕೆ 5 ಕೋಟಿ ರೂ.ಕಾರ್ಖಾನೆ ನೌಕರರ ತರಬೇತಿಗೆ 2 ಕೋಟಿ ರೂ. ಮೀಸಲು.ರೇಷ್ಮೆ ಮಾರುಕಟ್ಟೆ ಬಲವರ್ಧನೆಗೆ 10 ಕೋಟಿ ರೂ.

ಸಂತೆ ಮರಳ್ಳಿ ರೇಷ್ಮೆ ಕಾರ್ಖಾನೆಗೆ 2 ಕೋಟಿ ರೂ. ಮೀಸಲು.15 ದಿನಗಳಲ್ಲಿ ಸುಸಜ್ಜಿತ ಪಶುಚಿಕಿತ್ಸಾ ಕೇಂದ್ರ.ಮಂಗನ ಕಾಯಿಲೆ ಲಸಿಕೆ ತಯಾರಿಕೆಗೆ 5 ಕೋಟಿ ರೂ. ಮೀಸಲು.ನಾಟಿ ಕೋಳಿ ಸಾಕಾಣಿಕೆಗೆ 5 ಕೋಟಿ ರೂ. ಅನುದಾನ.
ಪಶು ಚಿಕಿತ್ಸೆ ನೀಡಲು 15 ಜಿಲ್ಲೆಗಳಲ್ಲಿ ಕೇಂದ್ರ ಸ್ಥಾಪನೆಗೆ 12 ಕೋಟಿ ರೂ.ನಾಟಿ ಕೋಳಿ ಸಾಕಾಣಿಕೆ ಮಾಡುವುದಕ್ಕೆ ಯುವಕರಿಗೆ ಪ್ರೋತ್ಸಾಹ ಧನ.ಕುರಿಸಾಕಾಣಿಕೆದಾರರಿಗೆ ಉತ್ತೇಜನ ನೀಡಲು 2 ಕೋಟಿ ರೂ ಅನುದಾನ.

ಈರುಳ್ಳಿ, ಆಲೂಗಡ್ಡೆ, ಟಮೋಟೆಗೆ 50 ಕೋಟಿ ರೂ. ಬೆಂಬಲ ಬೆಲೆ .12 ಬೆಳೆಗಳಿಗೆ ರೈತರ ಕಣಜ ಯೋಜನೆ ಜಾರಿ.ಪ್ರತೀ ಲೀಟರ್ ಹಾಲು ಉತ್ಪಾದನೆ ಪ್ರೋತ್ಸಾಹ 5ರಿಂದ 6 ರೂಗೆ ಏರಿಕೆ

ನಂಜನಗೂಡು ತಾಲೂಕು ಕೆರೆ ತುಂಬಿಸುವ ಯೋಜನೆಗೆ ಅನುದಾನ

ಕಂಪ್ಲಿ ನೀರಾವರಿ ಯೋಜನೆಗೆ 75 ಕೋಟಿ ರೂ. ಮೀಸಲು
ಬಳ್ಳಾರಿ ಗ್ರಾಮಾಂತರ ಕೆರೆ ತುಂಬಿಸುವ ಯೋಜನೆಗೆ 60 ಕೋಟಿ ರೂ.
ಬಿಯರ್ ಮೇಲೆ ಅಬಕಾರಿ ಸುಂಕ ಹೆಚ್ಚಳ
ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನದಲ್ಲಿ ಒಂದು ರೂಪಾಯಿ ಹೆಚ್ಚಳ
ಕ್ಷೀರ ಭಾಗ್ಯ ಯೋಜನೆ ಅಡಿಯಲ್ಲಿ ಶಾಲಾ ಮಕ್ಕಳಿಗೆ ಪ್ರತಿ ನಿತ್ಯವೂ ಹಾಲು
ಹಾಲು ಉತ್ಪಾದಕರ ಕ್ಷೇಮಾಭಿವೃದ್ಧಿಗೆ 2,502 ಕೋಟಿ ರೂಪಾಯಿ ಮೀಸಲು.
ಮೀನುಗಾರಿಕೆ ದೋಣಿಗಳಿಗೆ ಶೇ.50ರಷ್ಟು ಸಹಾಯಧನ

ಸಿಗಡಿ ಮೀನು ಪ್ರೋತ್ಸಾಹಕ್ಕೆ ಶೇ.50ರಷ್ಟು ಅನುದಾನ..ಮಲ್ಪೆ ಕಡಲು ತೀರದಲ್ಲಿ ತ್ಯಾಜ್ಯ ಘಟಕ ನಿರ್ಮಾಣಕ್ಕೆ 15 ಕೋಟಿ ರೂ. ಡೀಸೆಲ್, ಸೀಮೆಎಣ್ಣೆಗೆ ಸಬ್ಸಿಡಿ 158 ಕೋಟಿ..
1523 ಕೋಟಿ ರೂಪಾಯಿ ವೆಚ್ಚದಲ್ಲಿ ಜಲ ಸಂಪನ್ಮೂಲ ಯೋಜನೆಗಳು ಜಾರಿ
300 ಕೋಟಿ ವೆಚ್ಚದಲ್ಲಿ 16 ಸಾವಿರ ಹೆಕ್ಟೇರ್ ಜಮೀನಿಗೆ ನೀರಾವರಿ ಯೋಜನೆ
ಇಂಡಿ ಹಾಗೂ ನಾಗಠಾಣಾ ವ್ಯಾಪ್ತಿಯ ವರ್ತಿ ರೇವಣಸಿದ್ಧೇಶ್ವರ ಏತನೀರಾವರಿ
ಕಂಪ್ಲಿ ವ್ಯಾಪ್ತಿಯಲ್ಲೂ ನೀರಾವರಿ ಯೋಜನೆ ಜಾರಿಗೆ ಸರ್ಕಾರದಿಂದ ಅನುದಾನ
200 ಕೋಟಿ ರೂ ವೆಚ್ಚದಲ್ಲಿ ಶಿಕಾರಿಪುರ 200 ಕೆರೆಗಳನ್ನು ತುಂಬಿಸಲು ಯೋಜನೆ
ರಾಜ್ಯದ 3 ತರಕಾರಿ ಮಾರುಕಟ್ಟೆಗಳಲ್ಲಿ 10 ಕೋಟಿ ವೆಚ್ಚದಲ್ಲಿ ತ್ಯಾಜ್ಯ ಘಟಕ
ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಸ್ಪರ್ಧಾತ್ಮಕ ದರ ದೊರೆಯುವವರೆಗೆ ಸಂಗ್ರಹ
ಕರ್ನಾಟಕ ಉಗ್ರಾಣ ನಿಗಮಗಳ ಘಟಕಗಳಲ್ಲಿ ಬೆಳೆ ಸಂಗ್ರಹಣೆಗೆ ಯೋಜನೆ

ಉಗ್ರಾಣ ನಿಗಮಗಳಲ್ಲಿ ಸಂಗ್ರಹಣೆಗೆ 200 ಕೋಟಿ ರೂಪಾಯಿ ಅನುದಾನ.
ರೈತರು ಹಾಗೂ ರೈತ ಮಹಿಳೆಯರ ಆಭರಣಗಳನ್ನು ಅಡವಿಟ್ಟು ಸಾಲ
ಗೃಹ ಲಕ್ಷ್ಮಿ ಬೆಳೆ ಸಾಲ ಯೋಜನೆ ಅಡಿ ಸಣ್ಣ, ಅತಿ ಸಣ್ಣ ರೈತರಿಗೆ ಸಾಲ
ಶೇಕಡ 3ರಷ್ಟು ಬೆಳೆ ಸಾಲ ನೀಡಲು ರಾಜ್ಯ ಸರ್ಕಾರದಿಂದ ಯೋಜನೆ.
ಪ್ರಮುಖ 6 ಸಿರಿಧಾನ್ಯ ಬೆಳೆಗಳಿಗೆ 10 ಕೋಟಿ ರೂ. ಬೆಂಬಲ ಬೆಲೆ
ಹಾಪ್‌ಕಾಮ್ಸ್‌ ಮತ್ತು ನಂದಿನಿ ಘಟಕಗಳಲ್ಲಿ ಸಿರಿಧಾನ್ಯ ಮಾರಾಟ
ಗದಗದಲ್ಲಿ ಹೆಸರುಬೇಳೆ ಸಂಸ್ಕರಣಾ ಘಟಕ ನಿರ್ಮಾಣ
200 ಕೋಟಿ ವೆಚ್ಚದಲ್ಲಿ ಶಿಕಾರಿಪುರ ಕೆರೆ ತುಂಬಿಸುವ ಯೋಜನೆ
ಚನ್ನರಾಯಪಟ್ಟಣ- ಹೊಳೆನರಸೀಪುರದಲ್ಲಿ ಕೆರೆ ತುಂಬಿಸುವ ಯೋಜನೆ
1600 ಕೋಟಿ ರೂ. ವೆಚ್ಚದಲ್ಲಿ ಕೆರೆ ತುಂಬಿಸುವ ಯೋಜನೆ

ಪ್ರತಿ ಸಂತೆಗೆ ಮೂಲಸೌಕರ್ಯಕ್ಕೆ 1 ಕೋಟಿ ರೂ. …
ಇನ್ನೂ ಇದೆ..


No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...