ABC

Thursday, 7 February 2019

ಕುಮಾರಸ್ವಾಮಿ ಟಚ್ ಮಾಡಿದವರಿಗೆ ಏನಾದ್ರು ಆಗುತ್ತೆ ಜ್ಯೋತಿಷಿಗಳು ಹೇಳಿದ್ದಾರೆ: ಹೆಚ್ ಡಿ ರೇವಣ್ಣ

ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರನ್ನು ಟಚ್ ಮಾಡಿದವರಿಗೆ ಏನಾದರು ಆಗುತ್ತೆ ಜೋತಿಷಿಗಳು ಹೇಳಿದ್ದಾರೆ ಎಂದು ಲೋಕಪಯೋಗಿ ಸಚಿವ ಹೆಚ್.ಡಿ ರೇವಣ್ಣ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಧ್ಯಮಗಳೊಂದಿಗೆ ಗುರುವಾರ ಮಾತನಾಡಿದ ಅವರು, ಕುಮಾರಸ್ವಾಮಿ ವಿರುದ್ಥ ಸಂಚು ರೂಪಿಸುವವರಿಗೆ ಏನಾದರು ಹಾಗುತ್ತೇ ಎಂದು ಜ್ಯೋತಿಷಿಗಳು ಹೇಳಿದ್ದಾರೆ ಎಂದರು. ಬಿಜೆಪಿಗೆ ರಾಜ್ಯದ ಬಗ್ಗೆ ಚಿಂತನೆ ಇಲ್ಲ, ಇವತ್ತು ಬಜೆಟ್ ಮಂಡನೆ ಆಗುತ್ತೆ, ರೈತರ ಪರ, ಬಡವರ ಪರ ಸರ್ಕಾರ ಬಜೆಟ್ ಇರುತ್ತೆ, ಯಾರನ್ನು ಆಪರೇಷನ್ ಮಾಡೋಕೆ ಆಗೊಲ್ಲ, ಯಡಿಯೂರಪ್ಪ ಆಪರೇಷನ್ ಮಾಡೋಕೆ ಹೋಗಿ ಫೇಲ್ ಆಗಿದ್ದಾರೆ ಎಂದು ರೇವಣ್ಣ ತಿಳಿಸಿದರು.

ಆಪರೇಷನ್ ಮಾಡೋಕೆ ಆಪರೇಷನ್ ಥಿಯೇಟರ್ ಖಾಲಿ ಇಲ್ಲ, ಸರ್ಕಾರಕ್ಕೆ ಏನು ಆಗೊಲ್ಲ 5 ವರ್ಷ ಸರ್ಕಾರ ಸ್ಥಿರವಾಗಿರುತ್ತಾದೆ. ಯಡಿಯೂರಪ್ಪ ಆಪರೇಷನ್ ಫೇಲ್ ಆಗಿದೆ ಎಂದು ಇದೇ ಸಂದರ್ಭದಲ್ಲಿ ರೇವಣ್ಣ ಹೇಳಿದರು.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...