ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಗೃಹ ಕಚೇರಿ ಕೃಷ್ಣಾದಲ್ಲಿ ತುರ್ತು ಸುದ್ದಿಗೋಷ್ಠಿ ಕರೆದಿದ್ದು, ವಿಧಾನಸಭೆಯ ಪ್ರತಿ ಪಕ್ಷದ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಕಾಂಗ್ರೆಸ್ ಶಾಸಕರಿಗೆ ಆಮಿಷ.
ಕಾಂಗ್ರೆಸ್ ಜೆಡಿಎಸ್ನ ಸುಮಾರು 35 ಶಾಸಕರಿಗೆ ಕಳೆದ ಆರು ತಿಂಗಳಿಂದ ಬಿಜೆಪಿ ಮುಖಂಡರುಗಳು ಹಣ, ಸಚಿವ ಸ್ಥಾನ ಹಾಗೂ ವಿವಿಧ ರೀತಿಯ ಆಮಿಷಗಳನ್ನು ಒಡ್ಡಿದ್ದಾರೆ. ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಮಲ್ಲೇಶ್ವರ ಶಾಸಕ ಅಶ್ವತ್ ನಾರಾಯಣ, ಶಾಸಕ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಮತ್ತಿತರ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಿಗೆ ಆಮಿಷ ಒಡ್ಡಿರುವ ಧ್ವನಿಮುದ್ರಿಕೆ ಸಿಡಿಯನ್ನು ಸಿಎಂ ಎಚ್ ಡಿ ಕುಮಾರಸ್ವಾಮಿ ಬಿಡುಗಡೆ ಮಾಡಿದ್ದಾರೆ.
ನೇರ ಪ್ರಸಾರ ಕ್ಕಾಗಿ ವೀಕ್ಷಣೆ ಮಾಡಿhttps://www.facebook.com/636057286582068/videos/1041944125993545/
ಸಿಎಂ ಸೀಟಿನಲ್ಲಿ ಕಳೆದ ರಾತ್ರಿ ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿ ಮಾಡಿ ದೂರು ಕೊಟ್ಟು ಬಂದಿದ್ದು, ಆಪರೇಷನ್ ಕಮಲ ಮಾಡಿರುವುದನ್ನು ಸಾಕ್ಷಿ ಸಮೇತ ಸಿಎಂ ಮಾಧ್ಯಮಗಳ ಮುಖಾಂತರ ಮತ್ತು ಸಾಮಾಜಿಕ ಜಾಲತಾಣಗಳ ಮುಖಾಂತರ ರಾಜ್ಯ ಹಾಗೂ ರಾಷ್ಟ್ರದ ಜನತೆ ಮುಂದೆ ಬಿಜೆಪಿಯವರ ಆಪರೇಷನ್ ಕಮಲದ ಆಡಿಯೋ ರಿಲೀಸ್ ಮಾಡಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ದೇಶದಲ್ಲಿನ ಜಡ್ಜ್ ಗಳನ್ನು ಬುಕ್ ಮಾಡಿದ್ದಾರೆ ಎಂಬ ಗಂಭೀರವಾದಂತಹ ಆರೋಪವನ್ನು ಸಿಎಂ ಕುಮಾರಸ್ವಾಮಿ ಮಾಡಿದ್ದು, ಈ ಬಗ್ಗೆ ಕುದ್ದು ಬಿಎಸ್ ಯಡಿಯೂರಪ್ಪ ಆಪರೇಶನ್ ಕಮಲದ ವೇಳೆ ಮಾತನಾಡುವ ಆಡಿಯೋದಲ್ಲಿ ದಾಖಲಾಗಿದೆ ಎನ್ನಲಾಗಿದೆ.
ಗೃಹ ಕಚೇರಿ ಕೃಷ್ಣಾದಲ್ಲಿ ಪತ್ರಿಕಾ ಗೋಷ್ಟಿ ನಡೆಸಿ ಮಾತನಾಡಿದ ಸಿಎಂ ಕುಮಾರಸ್ವಾಮಿ ಬಿಎಸ್ ವೈ, ಮೋದಿ, ಅಮಿತ್ ಶಾ ವಿರುದ್ಧ ತೀವ್ರ ವಾಗ್ಧಾಳಿಯನ್ನು ನಡೆಸಿದ್ದಾರೆ.
ದೇವದುರ್ಗದ ಸರ್ಕಿಟ್ ಹೌಸ್ ನಲ್ಲಿ ಆಪರೇಶನ್ ಡೀಲ್ ಮಾಡುವಾಗ ಶಾಸಕ ನಾಗನಗೌಡ ಪುತ್ರ ಶರಣೇಗೌಡ ಅವರ ಬಳಿ ಯಡಿಯೂರಪ್ಪ ಆಪರೇಶನ್ ಕಮಲದ ಡೀಲ್ ಮಾಡುವ ವಿಡಿಯೋವನ್ನು ಸಿಎಂ ಕುಮಾರಸ್ವಾಮಿ ಪತ್ರಿಕಾ ಗೋಷ್ಟಿ ನಡೆಸಿ ಆಡಿಯೋ ರಿಲೀಸ್ ಮಾಡಿದ್ದಾರೆ.
ನೀವು ಯಾವುದೇ ರೀತಿಯ ವಿಪ್ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಪ್ರಧಾನಿ ಮೋದಿ, ಅಮಿತ್ ಶಾ ಈ ಬಗ್ಗೆ ಎಲ್ಲಾ ಸೆಟ್ಟಿಂಗ್ ಗಳನ್ನು ಮಾಡಿದ್ದಾರೆ. 50 ಕೋಟಿ ರೂ. ಕೊಡುತ್ತೇನೆ ಬಿಜೆಪಿ ಜೊತೆ ಬನ್ನಿ ಎಂದು ಶರಣೇಗೌಡ ಅವರಿಗೆ ಪ್ರಸ್ತಾಪ ಮಾಡಿದ್ದಾರೆ ಎನ್ನಲಾಗಿದೆ. ಈ ವೇಳೆ ಹಾಸನದ ಶಾಸಕ ಪ್ರೀತಂ ಗೌಡ ದೇವದುರ್ಗ ಶಾಸಕರು ಜೊತೆಗಿದ್ದರು ಎಂದಿದ್ದಾರೆ. ಮುಂಬೈನಲ್ಲಿ ಪೇಮೆಂಟ್ ಮಾಡುತ್ತೇವೆ, ಚುನಾವಣೆಗೆ ಬೇಕದಷ್ಟು ಹಣ ಕೊಡುತ್ತೇನೆ ಎಂದು ಶಾಸಕರ ಪುತ್ರನಿಗೆ ಬಿಎಸ್ ವೈ ಆಮಿಷವೊಡ್ಡಿದ್ದಾರೆ ಎನ್ನಲಾಗಿದೆ. ಸ್ಪೀಕರ್ ರಮೇಶ್ ಕುಮಾರ್ ಅವರನ್ನು 50 ಕೋಟಿಗೆ ಕೊಂಡುಕೊಂಡಿರುವುದಾಗಿ ಆಡಿಯೋದಲ್ಲಿ ಯಡಿಯೂರಪ್ಪ ಮಾತನಾಡಿದ್ದಾರೆ ಎನ್ನಲಾಗಿದೆ.
ಮತ್ತು ಕುಮಾರಸ್ವಾಮಿ ಅವರು ಮಾತನಾಡಿ ಇದು ಇದು ರಾಜ್ಯ ಸರ್ಕಾರದ ಬಜೆಟ್ ಅಲ್ಲ ಸಾರ್ವಜನಿಕರ ಬಜೆಟ್ ಎಂದು ತಿಳಿಸಿದರು. ಆಡಿಯೋ ರಿಲೀಸ್ ಮಾಡುವ ವೇಳೆಯಲ್ಲಿ ಮಾಧ್ಯಮದವರು ಮಧ್ಯದಲ್ಲಿ ಮಾತನಾಡಲು ಮುಂದಾದಾಗ ಸಿಎಂ ಕುಮಾರಸ್ವಾಮಿಯವರು ಒಂದು ಹಾಸ್ಯ ಚಟಾಕಿ ಇನ್ನೂ ಸಹ ಬೀರಿದ್ದಾರೆಏನೆಂದರೆ ನಿಮಗೆ ಬ್ರೇಕಿಂಗ್ ನ್ಯೂಸ್ ಬೇಕಲ್ವಾ ಬ್ರೇಕಿಂಗ್ ನ್ಯೂಸ್ ಮತ್ತು ಟಿಆರ್ಪಿ ಬೇಕಲ್ವಾ ಬಿಡುಗಡೆ ಮಾಡ್ತಾ ಇದೀನಿ ಇದು ರಾಜ್ಯದ ಜನತೆಗೆ ತಿಳಿಯಬೇಕು ನಾನು ಸರ್ಕಾರ ರಚನೆಯಾದ ದಿನದಿಂದಲೂ ಇಲ್ಲಿಯವರೆಗೂ ಸರಿಯಾಗಿ ಸರ್ಕಾರದ ಕೆಲಸ ಮಾಡಲು ಬಿಡುತ್ತಿಲ್ಲ ಅದಕ್ಕಾಗಿ ಈ ಪತ್ರಿಕಾಗೋಷ್ಠಿಯನ್ನು ಕರೆದಿರುವ ಉದ್ದೇಶವೆಂದು ತಿಳಿಸಿದರು.

No comments:
Post a Comment