ABC

Tuesday, 5 March 2019

ರೈತರಿಗೆ 25 ಲಕ್ಷ ಋಣಮುಕ್ತ ಪತ್ರ ರವಾನೆ ಕಾರ್ಯದಲ್ಲಿ ಅಂಚೆ ಇಲಾಖೆ: ಕುಮಾರಣ್ಣನ ದಿಟ್ಟ ನಿರ್ಧಾರ

ಬೆಂಗಳೂರು: ವಾರದೊಳಗೆ ಫಲಾನುಭವಿ ರೈತರಿಗೆ 25 ಲಕ್ಷ  ಋಣಮುಕ್ತ ಪತ್ರ ತಲುಪಿಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಸೂಚಿಸಿರುವುದರಿಂದ ಬೆಂಗಳೂರಿನ ಮ್ಯೂಸಿಯಂ ರಸ್ತೆಯಲ್ಲಿರುವ ಅಂಚೆ ಕಚೇರಿಯ ಸಿಬ್ಬಂದಿಗಳು ಗುರುವಾರದಿಂದ  ಬಿಡುವಿಲ್ಲದಂತೆ ಕೆಲಸ ಮಾಡುತ್ತಿದ್ದಾರೆ. ಮಾರ್ಚ್ 5 ರೊಳಗೆ ಈ ಕಾಗದ ಪತ್ರಗಳನ್ನು ಫಲಾನುಭವಿಗಳಿಗೆ ರವಾನಿಸುವಂತೆ  ಸರ್ಕಾರ ಗಡವು ವಿಧಿಸಿರುವುದರಿಂದ ಸಿಬ್ಬಂದಿಗಳು ಕಾಗದದ ಒಳಗೆ ಪತ್ರ ಸೇರಿಸಿ, ಅವುಗಳಿಗೆ ಸ್ಟಾಂಪ್ ಹಾಕಿ, ಪ್ರದೇಶವಾರು ವಿಂಗಂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಎಲ್ಲಾ ರೈತರಿಗೆ ನೀಡಲಾಗುತ್ತಿರುವ ಒಂದು ಪೇಜಿನ ಈ ಪತ್ರದಲ್ಲಿ ಅವರಿಗೆ ಈ ಯೋಜನೆ ಘೋಷಿಸಿರುವುದಾಗಿ ಮುಖ್ಯಮಂತ್ರಿ ವಿವರಿಸಿದ್ದಾರೆ. 2018 ಜುಲೈ 5 ರಂದು ಮೊದಲ ಬಜೆಟ್ ಮಂಡನೆ ವೇಳೆಯಲ್ಲಿ ಮುಖ್ಯಮಂತ್ರಿ 34 ಸಾವಿರ ಕೋಟಿ ರೂ. ಮೊತ್ತದ ಸಾಲ ಮನ್ನಾ ಘೋಷಣೆ ಮಾಡಿದ್ದರು. ನಂತರ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾಲ ಮನ್ನಾ ಸೇರಿ ಇದನ್ನು 45 ಸಾವಿರ ಕೋಟಿ ರೂ. ಗೆ ಏರಿಕೆ ಮಾಡಲಾಗಿತ್ತು. ಇದರಿಂದಾಗಿ 44. 89 ಲಕ್ಷ ರೈತರಿಗೆ ಅನುಕೂಲವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.ನಿಗದಿತ ಅವಧಿಯಲ್ಲಿ ಈ ಕಾರ್ಯ ಪೂರ್ಣಗೊಳಿಸಲು ಆದ್ಯತೆ ನೀಡಲಾಗಿದೆ ಎಂದು ಬೆಂಗಳೂರು ವಲಯದ ಪೋಸ್ಟ್ ಮಾಸ್ಟರ್ ಜನರಲ್  ಸಿ.ಎ. ವರ್ಮಾ ತಿಳಿಸಿದ್ದಾರೆ.
ಹೊರ ಗುತ್ತಿಗೆ ಸಿಬ್ಬಂದಿ ಸೇರಿದಂತೆ ಒಟ್ಟಾರೇ 80 ಸಿಬ್ಬಂದಿಗಳು ಎರಡು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮ್ಯೂಸಿಯಂ ರಸ್ತೆಯ ಶಾಖೆಯಲ್ಲಿಯೇ ಈ ಕೆಲಸ ಮಾಡಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಪ್ರತ್ಯೇಕ ಸ್ಥಳವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.ಎರಡನೇ ಬಾರಿಗೆ ಈ ರೀತಿಯ ಕೆಲಸದಲ್ಲಿ ಅಂಚೆ ಇಲಾಖೆ ತೊಡಗಿಸಿಕೊಂಡಿದೆ. ಈ ಹಿಂದೆ ಡಿಸೆಂಬರ್ ಕೊನೆಯ ವಾರದಲ್ಲಿ ಪ್ರಧಾನ್ ಮಂತ್ರಿ ಭಾರತ್ ಜನ ಆರೋಗ್ಯ ಯೋಜನೆಯಲ್ಲಿ  65 ಲಕ್ಷ ಆರೋಗ್ಯ ವಿಮೆ ಕಾರ್ಡ್ ರವಾನಿಸಲಾಗಿತ್ತು.ಎನ್ವಿಲೊಪ್ ನಲ್ಲಿ ಕಾಗದ ಪತ್ರ ಹಾಕುವುದಕ್ಕೆ ತಲಾ 50 ಪೈಸೆ ಅಲ್ಲದೆ,  ಒಂದೊಂದು ಕಾಗದ ರವಾನೆಗೆ ಕಂದಾಯ ಇಲಾಖೆ 5 ರೂ. ಪಾವತಿಸುತ್ತದೆ . ರವಾನೆಗಾಗಿ ಪ್ರತಿದಿನ ಲಕ್ಷಗಟ್ಟಲೇ  ಕಾಗದ ಪತ್ರಗಳು ಬರುತ್ತಿದ್ದು,  ಸಂಬಂಧಿತ ಕೆಲಸಗಳು ಕೂಡಾ ನಡೆಯುತ್ತಿವೆ ಎಂದು ವರ್ಮಾ ತಿಳಿಸಿದರು.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...