ABC

Tuesday, 5 March 2019

ಕುಟುಂಬ ರಾಜಕಾರಣ ಎನ್ನುವ ರಾಜಕೀಯ ನಾಯಕರುಗಳಿಗೆ ಮತ್ತು : ಅತೃಪ್ತ ಆತ್ಮಗಳಿಗೆ ಒಂದು ಸ್ಪಷ್ಟನೆ .

ಕುಟುಂಬ ರಾಜಕಾರಣ ಇನ್ನೊಂದು ಮತ್ತೊಂದು ಅನ್ನುವ ಅತೃಪ್ತ ಆತ್ಮಗಳಿಗೆ ಒಂದು ಸ್ಪಷ್ಟನೆ ...

ಪ್ರಜ್ವಲ್ ರೇವಣ್ಣ ಮತ್ತು ನಿಖಿಲ್ ಕುಮಾರಣ್ಣ ಏಕೆ ರಾಜಕೀಯಕ್ಕೆ ಬರಬೇಕು ನಾನು ಹೇಳ್ತಿನಿ ಕೇಳಿ ???????

ದೇವೇಗೌಡರು ಕುಮಾರಣ್ಣ ರೇವಣ್ಣರ ನಂತರ ನಮ್ಮ ಜಾತ್ಯತೀತ ಜನತಾದಳದ ನೊಗ ಹೊರುವ ಸಾಮರ್ಥ್ಯ ಬಹುಶಃ ಈ ಜೋಡಿ ಎತ್ತುಗಳಿಗೆ ಖಂಡಿತ ಇದೆ ಅನ್ನೋದು ನನ್ನ ನಂಬಿಕೆ..... ದೂರಾಲೋಚನೆ ಮಾಡಿದರೆ ಇದು ಸತ್ಯನೂ ಕೂಡ..........

ಇವತ್ತು ಇರೋ ಪರಿಸ್ಥಿತಿ ನಾಳೆ ಇರುತ್ತೋ ಇರಲ್ವೋ ಭಗವಂತ ಬಲ್ಲ ಆದರೆ ಜೆಡಿಎಸ್ ನಿಜವಾಗಿಯೂ ಬೇರುಮಟ್ಟದಲ್ಲಿ ಬಿಗಿಯಾಗಿ ಬುಡವನ್ನು ಅಲುಗಾಡಿಸಲು ಬಿಡದೆ ಗಟ್ಟಿಯಾಗಿ ಕಾಪಾಡಿಕೊಂಡು ಹೋಗೋದೆ ಆದರೆ ಇವರಿಬ್ಬರ ರಂಗಪ್ರವೇಶ ಈಗ ಜಾತ್ಯತೀತ ಜನತಾದಳ ನಂಬಿರೋ ಲಕ್ಷಾಂತರ ಕಾರ್ಯಕರ್ತರಿಗೆ ಅತ್ಯವಶ್ಯಕ.................

ಏನಪ್ಪ ಇವರನ್ನು ಬಿಟ್ಟರೆ ಜೆಡಿಎಸ್ ಅಲ್ಲಿ ಬೇರೆ ಯಾರು ಇಲ್ವಾ ಅಂತ ವಿರೋಧಿಗಳು ಪ್ರಶ್ನೆ ಹಾಕಬಹುದು....... ಕೇಳಲಿ ಸಂತೋಷ........ ಆದರೆ ಒಂದು ಪಕ್ಷ ಮುನ್ನೆಡೆಸೋ ಕಷ್ಟನಾ ಹೋಗಿ ದೇವೇಗೌಡರಿಗೆ ಕುಮಾರಣ್ಣರಿಗೆ ಯಡಿಯೂರಪ್ಪರಿಗೆ ಸಿದ್ದರಾಮಯ್ಯನವರನ್ನು ಕೇಳಿ ಅವರಿಗೆ ಪಕ್ಕಾ ಗೊತ್ತಿರತ್ತೆ......

ಸುಮ್ಮನೆ ಕೂತು ಕಥೆ ಹೊಡ್ದಂಗಲ್ಲಾ ಒಂದು ಪಕ್ಷ ಉಳಿಸಿಕೊಳ್ಳೋದು...ನಮ್ಮ ಕರ್ನಾಟಕದ ರಾಜಕೀಯ ವಿಚಾರದಲ್ಲಿ ಮಾತಾಡೋದೆ ಆದರೆ ಎಷ್ಟು ಪಕ್ಷ ಬಂದು ಹೋಗಿಲ್ಲಾ......ಎಂತೆಂತಹ ಘಟಾನುಘಟಿ ನಾಯಕರು ಪಾಪದಸಿ ಪಕ್ಷ ಕಟ್ಟಿ ಕಡೆಗೆ ಸೋತು ಸುಣ್ಣವಾಗಿ ಮನೆಗೆ ಹೋಗಿಲ್ಲಾ........

ಯಡಿಯೂರಪ್ಪರ ಕಾಯಿ ಹೋಳು... ಸಿದ್ದರಾಮಣ್ಣ ತಕ್ಕಡಿ.....ಬಂಗಾರಪ್ಪರ ತೆಂಗಿನಮರ.....ಪಟೇಲರ ಬಾಣ....
ಮಲ್ಯನ ನೇಗಿಲ ಹೊತ್ತ ರೈತ......ವಿಜಯಸಂಕೇಶ್ವರರ ಕನ್ನಡನಾಡು......ರಾಮುಲು ಬಿಎಸ್ಆರು........ ಲಾಟೀನು ಪಾಟೀನು ಎಲ್ಲಾ ಬಂದ ದಾರಿಗೆ ಸುಂಕ ಇಲ್ಲದೆ ಹೊರಟೋದ್ವು.........

ಆದರೆ ನಮ್ಮ ಕಾರ್ಯಕರ್ತರ ಬಲದಿಂದಲೇ ಇನ್ನು ಗಟ್ಟಿಯಾಗಿ ಬೇರೂರಿರೋ ಜಾತ್ಯತೀತ ಜನತಾದಳ ತೆನೆ ಹೊತ್ತ ರೈತ ಮಹಿಳೆ ಅಲುಗಾಡಿಸಲೂ ಸಹ ಯಾರಿಗೂ ಸಾಧ್ಯವಾಗಲಿಲ್ಲ.........
ಕಾರಣ ದೇವೇಗೌಡರ ಮೇಲಿರೋ ಗೌರವ ಕುಮಾರಣ್ಣರ ಮೇಲಿರೋ ಆತ್ಮಾಭಿಮಾನ ರೇವಣ್ಣರ ಅಭಿವೃದ್ಧಿ ನಿಜ ತಾನೇ.................??????

ಇದೆ ಜತ್ಯಾತೀತ ಜನತಾದಳ ಪಕ್ಷ ದ ನಿಜವಾದ ಶಕ್ತಿ ಮತ್ತು ಆಸ್ತಿ. ಇಷ್ಟು ವರ್ಷ ಜೋಪಾನ ಮಾಡಿಕೊಂಡು ಬಂದಿರೋ ಈ ಆಲದಮರದಂತಹ ಪಕ್ಷ ಲಕ್ಷಾಂತರ ಕಾರ್ಯಕರ್ತರ ಪಾಲಿಗೆ ನೆರಳಾಗಿದೆ......ಕೋಟ್ಯಾಂತರ ಬಡವರ ಪಾಲಿಗೆ ಕುಮಾರಣ್ಣರ ಮೂಲಕ ವರವಾಗಿದೆ.......ರೈತರ ಪಾಲಿಗೆ ಸಂಜೀವಿನಿಯಾಗಿದೆ..........

ಈಗ ಹೇಳಿ ಇಂತಹ ಪಕ್ಷ ಉಳಿಯಬೇಕು ಈಗ ನೆಡೆಯುತ್ತಿರೋ ಕುಮಾರಣ್ಣರ ರೇವಣ್ಣರ ಕೆಲಸ ಕಾರ್ಯ ಸೇವೆ ಮುಂದುವರಿಸಲು ಯಾರಾದರೂ ಸೂಕ್ತ ಉತ್ತರಾಧಿಕಾರಿಗಳು ಬೇಕೆ ಬೇಕು ತಾನೇ??????????????

ಪಕ್ಷ ಮತ್ತು ಪಕ್ಷದ ಬೇರು ಪಕ್ಷದ ಕಾರ್ಯಕರ್ತರು ಉಳಿಯಲೇಬೇಕು ಇನ್ನು ಮುಂಬರುವ ದಿನಗಳಲ್ಲೂ ಸಹ ಜಾತ್ಯಾತೀತ ಜನತಾದಳ ತನ್ನ ವರ್ಚಸ್ಸು ಉಳಿಸಿಕೊಂಡು ಭವಿಷ್ಯದಲ್ಲೂ ದೇವೇಗೌಡರ ಕುಮಾರಣ್ಣರ ರೇವಣ್ಣರ ಕೆಲಸ ಕಾರ್ಯಗಳು ಸೇವೆಗಳು ಮುಂದುವರಿಯಲು ಈ ಇಬ್ಬರೂ ಯುವಸಾರಥಿಗಳಿಗೆ ಜನ ಆಶೀರ್ವಾದ ಮಾಡಲೇಬೇಕು.......

ವಿಜಯೇಂದ್ರ ರಾಘವೇಂದ್ರ ಯತೀಂದ್ರರಿಗೆ ಒಂದು ನ್ಯಾಯ ನಮ್ಮ ಯುವಸಾರಥಿಗಳಿಗೆ ಏಕೆ ಇನ್ನೊಂದು ನ್ಯಾಯ???????????????

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...