ABC

Friday, 8 March 2019

ಕಿಸಾನ್ ಸಮ್ಮಾನ್ ಬರೀ ಬಂಡಲ್​​: ರೈತರಿಗೆ ಸಿಕ್ಕಿದ್ದು ₹950 ಮಾತ್ರ, ಕೈ​ ಆರೋಪ.

ಬೆಂಗಳೂರು: ಕೇಂದ್ರದ ಮಹತ್ವಾಕಾಂಕ್ಷೆಯ ಕಿಸಾನ್​ ಸಮ್ಮಾನ್​ ಯೋಜನೆಗೆ ಕರ್ನಾಟಕ ಸರಿಯಾಗಿ ಸ್ಪಂದನೆ ಮಾಡುತ್ತಿಲ್ಲ ಎಂಬ ಆರೋಪಕ್ಕೆ ರಾಜ್ಯ ಕಾಂಗ್ರೆಸ್​ ಟ್ವಿಟರ್​​ನಲ್ಲಿ ತಿರುಗೇಟು ನೀಡಿದೆ.

ಕಳೆದೆರಡು ದಿನಗಳ ಹಿಂದೆ ರಾಜ್ಯಕ್ಕೆ ಭೇಟಿ ನೀಡಿದ್ದ ಮೋದಿ, ರಾಜ್ಯ ಸರ್ಕಾರ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಅರ್ಹ ಫಲಾನುಭವಿಗಳ ಪಟ್ಟಿಯನ್ನು ನೀಡಿಲ್ಲ. ಹೀಗಾಗಿ ಕೇಂದ್ರಕ್ಕೆ ರಾಜ್ಯದ ರೈತರ ಪಟ್ಟಿ ಸಿಕ್ಕಿಲ್ಲ. ಹಲವು ರಾಜ್ಯಗಳ ರೈತರ ಬ್ಯಾಂಕ್ ಖಾತೆಗಳಿಗೆ ಈಗಾಗಲೇ ಕಿಸಾನ್ ಸಮ್ಮಾನ್ ಯೋಜನೆಯ ಹಣ ತಲುಪಿದೆ. ಆದರೆ ರಾಜ್ಯದ ರೈತರಿಗೆ ಇನ್ನೂ ಸಿಕ್ಕಿಲ್ಲ. ಇದಕ್ಕೆಲ್ಲ ಕಾರಣ ರಾಜ್ಯದಲ್ಲಿರುವ ರಿಮೋಟ್ ಕಂಟ್ರೋಲ್ ಮುಖ್ಯಮಂತ್ರಿ ಹಾಗೂ ಅಧಿಕಾರ ದಾಹ ಹೊಂದಿರುವ ಕಾಂಗ್ರೆಸ್" ಎಂದು ಮೋದಿ ವಾಗ್ದಾಳಿ ನಡೆಸಿದ್ದರು.ಕಿಸಾನ್ ಸಮ್ಮಾನ್ ಯೋಜನೆಗೆ ಕರ್ನಾಟಕ ಸರ್ಕಾರ ಸಹಕರಿಸುತ್ತಿಲ್ಲ ಎಂಬ ಪ್ರಧಾನಿ ಮೋದಿಯವರ ಆರೋಪ ಶುದ್ದ ಸುಳ್ಳು

ರಾಜ್ಯ ಕೇಂದ್ರಕ್ಕೆ 2.8ಲಕ್ಷ ರೈತರ ಮಾಹಿತಿ ನೀಡಿದ್ದರೂ ಕೇವಲ 17 ರೈತರಿಗೆ ಯೋಜನೆ ತಲುಪಿದೆ.6 ರೈತರಿಗಷ್ಟೇ ಹಣ ಬಂದಿದ್ದು ₹2000 ಬದಲು ಕೇವಲ ₹950 ಮಾತ್ರವೇ ಬಂದಿದೆ

ಚುನಾವಣೆಗಾಗಿ ಬಿಜೆಪಿ ಮಾಡಲೆತ್ನಿಸಿದ ನಾಟಕ ಬಯಲಾಗಿದೆ. Karnataka Congress (@INCKarnataka) March 8, 2019 ಇದೀಗ ತಿರುಗೇಟು ನೀಡಿರುವ ಕಾಂಗ್ರೆಸ್​​ ಕಿಸಾನ್ ಸಮ್ಮಾನ್ ಯೋಜನೆಗೆ ಕರ್ನಾಟಕ ಸರ್ಕಾರ ಸಹಕರಿಸುತ್ತಿಲ್ಲ ಎಂಬ ಪ್ರಧಾನಿ ಮೋದಿಯವರ ಆರೋಪ ಶುದ್ದ ಸುಳ್ಳು. ರಾಜ್ಯ, ಈಗಾಗಲೇ ಕೇಂದ್ರಕ್ಕೆ 2.8ಲಕ್ಷ ರೈತರ ಮಾಹಿತಿ ನೀಡಿದ್ದರೂ ಕೇವಲ 17 ರೈತರಿಗೆ ಯೋಜನೆ ತಲುಪಿದೆ. 6 ರೈತರಿಗಷ್ಟೇ ₹2000 ಹಣ ಬಂದಿದ್ದು ಉಳಿದವರ ಖಾತೆಗೆ ಕೇವಲ ₹950 ಜಮೆಯಾಗಿದೆ. ಚುನಾವಣೆಗಾಗಿ ಬಿಜೆಪಿ ಮಾಡಲೆತ್ನಿಸಿದ ನಾಟಕ ಬಯಲಾಗಿದೆ ಎಂದು ರಾಜ್ಯ ಕಾಂಗ್ರೆಸ್​ ಟ್ವೀಟ್​ ಮಾಡಿದೆ.

ಬರ ಪೀಡಿತ ಪ್ರದೇಶಗಳಿಗೆ ಪರಿಹಾರ ಧನ, ಕೊಡಗು ಸಂತ್ರಸ್ತರಿಗೆ ಪರಿಹಾರ ಹೀಗೆ ಪ್ರತಿಯೊಂದು ವಿಷಯದಲ್ಲೂ ಕನ್ನಡಿಗರಿಗೆ ಮೋದಿ ಮೋಸ ಮಾಡುತ್ತಲೇ ಬರುತ್ತಿದ್ದಾರೆ.

ಮೋದಿ ತಮ್ಮ ಕೊನೆಯ ಬಜೆಟ್ ನಲ್ಲಿ ಭಾರತೀಯ ಪ್ರಜೆಗಳಿಗೆ ಬಣ್ಣ ಬಣ್ಣದ ಕನಸನ್ನು ಕಟ್ಟಿ ಕೊಟ್ಟಿರುವ ವಿಷಯ ಗೊತ್ತೇ ಇದೆ. ಪ್ರತಿ ಬಜೆಟ್ ನಂತೆ ಈ ಬಜೆಟ್ ನಲ್ಲಿರುವ ಬಹುತೇಕ ಯೋಜನೆಗಳು ಕೂಡ ಕಾರ್ಯ ರೂಪಕ್ಕೆ ಬರುವುದಿಲ್ಲ ಎಂದು ಐದು ವರ್ಷ ಮೋದಿ ಆಡಳಿತ ಎಂಬ ‘ಕರ್ಮಖಾಂಡವನ್ನು’ ಅನುಭವಿಸಿರುವ ಪ್ರಜೆಗಳು ಅರಿತುಕೊಂಡಿದ್ದಾರೆ.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...