ABC

Thursday, 7 March 2019

ಚುನಾವಣಾ ಸಮೀಕ್ಷೆ: ಜೆಡಿ ಎಸ್ ಗೆ ವರನೀಡಲಿದೆ ಕರ್ನಾಟಕದ ಜನತೆ.

ಬೆಂಗಳೂರು: ಕರ್ನಾಟಕ ಚುನಾವಣೆ ಸಮೀಪಿಸುತ್ತಿದ್ದಂತೆ ಓಟಿಂಗ್ ಪೋಲ್ ಗಳು ಎದ್ದು ನಿಂತಿವೆ. ಪತ್ರಿಕೆಗಳು ಚುನಾವಣಾ ಸಮೀಕ್ಷೆಗಳನ್ನು ಮಾಡುತ್ತಿವೆ. ಇವುಗಳ ನಡುವೆಯೇ ಈ ಬಾರಿ ಎಲ್ಲಾ ಸಮೀಕ್ಷೆಗಳು ತಲೆಕೆಳಗಾಗಲಿವೆ ಎನ್ನುವ ಅಭಿಪ್ರಾಯಗಳು ಭಾರೀ ಚರ್ಚೆಯಲ್ಲಿವೆ.

ಕಾಂಗ್ರೆಸ್ ಜನರ ವಿಶ್ವಾಸ ಕಳೆದುಕೊಂಡಿದೆ
ಈ ಬಾರಿ ಕಾಂಗ್ರೆಸ್ ಮತ ಕಳೆದುಕೊಳ್ಳಲು ರಾಜ್ಯದಲ್ಲಿ ಕಾಂಗ್ರೆಸ್ ನಾಯಕರ ಗೂಂಡಾಗಿರಿಯೇ ಮುಖ್ಯ ಕಾರಣವಾಗಲಿದೆ ಎನ್ನುವ ಮಾತುಗಳು ಭಾರೀ ಚರ್ಚೆಯಲ್ಲಿವೆ. ಉಳಿದಂತೆ ಕಾಂಗ್ರೆಸ್ ನ ದಲಿತ ವಿರೋಧಿ ನೀತಿಗಳಿಂದಾಗಿ ದಲಿತರ ಬೆಂಬಲವನ್ನು ಕಳೆದುಕೊಳ್ಳಲಿದೆ ಎನ್ನಲಾಗಿದೆ. ಕಾಂಗ್ರೆಸ್ ಸರಕಾರ ಕೇವಲ ಭಾಗ್ಯಗಳನ್ನು ತೋರಿಸಿ ಮತಗಳನ್ನು ಪಡೆಯಲು ಸಾಧ್ಯವಿಲ್ಲ. ದಲಿತರ ಅಭಿವೃದ್ಧಿಗಾಗಿ ಇರಿಸಲಾಗಿದ್ದ ಅನುದಾನವನ್ನು ರೈತರ ಸಾಲ ಮನ್ನಾಕ್ಕೆ ಬಳಸಿರುವುದರಿಂದಾಗಿ ಕಾಂಗ್ರೆಸ್ ಸರಕಾರ ರಾಜ್ಯದ ಬಹುಸಂಖ್ಯಾತರ ವಿಶ್ವಾಸವನ್ನು ಕಳೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಸಿಎಂ ಸಿದ್ದರಾಮಯ್ಯರು ಬಹುತೇಕ ಪ್ರಕರಣಗಳ ಬಗ್ಗೆ ಅಸಡ್ಡೆಯಿಂದ ಉತ್ತರಿಸಿರುವುದೂ ಜನರಲ್ಲಿ ನೋವನ್ನುಂಟು ಮಾಡಿದೆ ಎನ್ನಲಾಗಿದೆ.

ಬಿಜೆಪಿ ಈ ಕಾರಣಗಳಿಗಾಗಿ ಮತವನ್ನು ಕಳೆದುಕೊಳ್ಳಲಿದೆ
ರಾಜ್ಯ ಬಿಜೆಪಿಯ ಸಂಘಟನೆಗಳ ಕ್ರೂರ ನಿಲುವುಗಳು ಈ ಬಾರಿ ಬಿಜೆಪಿಗೆ ಭಾರೀ ಹೊಡೆತವನ್ನು ನೀಡಲಿದೆ ಎನ್ನುವ ಮಾಹಿತಿಗಳು ಲಭಿಸಿವೆ. ಕೋಮು ಗಲಭೆ, ಕೊಲೆ, ದಾನಮ್ಮಳಂತಹ ಮುಗ್ಧೆಯ ಅತ್ಯಾಚಾರದಲ್ಲಿ ಬಿಜೆಪಿ ಪರ ಸಂಘಟನೆಗಳ ಕಾರ್ಯಕರ್ತರು ಆರೋಪಿಗಳಾಗಿರುವುದು ಬಿಜೆಪಿಗೆ ದೊಡ್ಡ ಹೊಡೆತವನ್ನು ನೀಡಿದೆ ಎಂದು ಹೇಳಲಾಗಿದೆ.

ಈಗಾಗಲೇ ಬಿಜೆಪಿ ಆಯೋಜಿಸಿದ್ದ ಹಲವು ಚುನಾವಣಾ ಪ್ರಚಾರ ಸಭೆಯಲ್ಲಿ ರಾಷ್ಟ್ರೀಯ ನಾಯಕರಿಗೇ ಖಾಲಿ ಕುರ್ಚಿಗಳ ದರ್ಶನವಾಗಿದ್ದು, ಜನತೆಯ ವಿಶ್ವಾಸವನ್ನು ಬಿಜೆಪಿ ಕಳೆದುಕೊಂಡಿದೆ ಎನ್ನುವ ಮಾತುಗಳು ಚರ್ಚೆಯಲ್ಲಿವೆ. ಬಿಜೆಪಿ ನಾಯಕರ ಸಂವಿಧಾನ ವಿರೋಧಿ ಹೇಳಿಕೆಗಳು ಮುಖ್ಯವಾಗಿ ಬಿಜೆಪಿಗೆ ದೊಡ್ಡ ಹೊಡೆತವನ್ನೇ ನೀಡಲಿದೆ ಎನ್ನಲಾಗಿದೆ.

ಜನರ ವಿಶ್ವಾಸಗಳಿಸುತ್ತಿರುವ ಜೆಡಿಎಸ್
ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿಯ ತಿಕ್ಕಾಟದಿಂದ ಜೆಡಿಎಸ್ ಕಡೆಗೆ ಜನತೆ ಮುಖ ಮಾಡಲಿದ್ದಾರೆ ಎನ್ನುವ ಮಾತುಗಳು ರಾಜ್ಯದಲ್ಲಿ ಚರ್ಚೆಯಲ್ಲಿವೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಜೆಡಿಎಸ್ ಗೆಲುವಿಗಾಗಿ ಈ ವಯಸ್ಸಿನಲ್ಲೂ ಚುರುಕಾಗಿ ಓಡಾಡುತ್ತಿದ್ದಾರೆ. ಈಗಾಗಲೇ ಬಿಎಸ್ಪಿ ಮತ್ತು ಜೆಡಿಎಸ್ ಮೈತ್ರಿಯಿಂದಾಗಿ ಜೆಡಿಎಸ್ ಗೆ ಆನೆ ಬಲ ಬಂದಿದ್ದು, ಮುಂದಿನ ಚುನಾವಣೆಯನ್ನು ಎದುರಿಸಲು ಜೆಡಿಎಸ್ ಗೆ ಇನ್ನಷ್ಟು ಬಲ ದೊರೆತಿದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿಯ ತಿಕ್ಕಾಟಕ್ಕೆ ಪರ್ಯಾಯ ಶಕ್ತಿಯಾಗಿ ಜೆಡಿಎಸ್ ಅಧಿಕಾರವನ್ನು ಹಿಡಿಯಲಿದೆ ಎಂಬ ಮಾತುಗಳು ಕೇಳಿ ಬಂದಿವೆ. ಹಾಗಾಗಿ ಈ ಬಾರಿಯ ಚುನಾವಣಾ ಸಮೀಕ್ಷೆಗಳು ತಲೆಕೆಳಗಾಗಲಿವೆ ಎಂದು ತಿಳಿದು ಬಂದಿದೆ.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...