ABC

Tuesday, 12 March 2019

ದೇವೇಗೌಡರನ್ನು ಮಣಿಸಲು ನಡೆದಿದೆಯಾ ದೊಡ್ಡ ಷಡ್ಯಂತ್ರ.?

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರು ಮತ್ತು ಅವರ ಕುಟುಂಬವನ್ನು ಮಣಿಸಲು ತೆರೆಮರೆಯಲ್ಲಿ ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ಈ ಷಡ್ಯಂತ್ರಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್‍ನ ಅನೇಕ ನಾಯಕರು ಸಾಥ್ ನೀಡುತ್ತಿದ್ದಾರೆ. ಹಳೇ ಮೈಸೂರು ಭಾಗದಲ್ಲಿ  ದೇವೇಗೌಡರು  ಸಾಧಿಸಿರುವ ಪ್ರಾಬಲ್ಯಕ್ಕೆ ಸೆಡ್ಡು ಹೊಡೆಯಲು ಅನೇಕ ಕುತಂತ್ರಗಳನ್ನು ಹೆಣೆಯಲಾಗುತ್ತಿದೆ. ಆ ಭಾಗದಲ್ಲಿ ಜೆಡಿಎಸ್‍ನೊಂದಿಗೆ ಸ್ಪರ್ಧಿಸಿ ಸೋತು ಹೋಗಿರುವ ಮಾಜಿ ಶಾಸಕರು ಮತ್ತು ಸಂಸದರು  ಈ ಷಡ್ಯಂತ್ರದ ಭಾಗವಾಗಿದ್ದಾರೆ. ಒಕ್ಕಲಿಗ ಸಮುದಾಯದ ಪ್ರಶ್ನಾತೀತ ನಾಯಕರಾಗಿರುವ ದೇವೇಗೌಡರನ್ನು ಮಣಿಸಲು ಅವರ ವಿರೋಧಿಗಳೆಲ್ಲಾ ಒಂದಾಗಿದ್ದಾರೆ. ಹೀಗಾಗಿಯೇ ಮಂಡ್ಯ, ಹಾಸನ, ಮೈಸೂರು ಸೇರಿದಂತೆ ಅನೇಕ ಕಡೆ ಎಲ್ಲ ಕಾಂಗ್ರೆಸ್ ಮತ್ತು ಬಿಜೆಪಿಯ ಅತೃಪ್ತರು ತೆರೆಮರೆಯಲ್ಲಿ ಒಂದಾಗಿ ಜೆಡಿಎಸ್ ಅಭ್ಯರ್ಥಿಗಳನ್ನು ಸೋಲಿಸಲು ಒಂದಾಗಿದ್ದಾರೆ. ಆದರೆ ದೇವೇಗೌಡರು ಮಾತ್ರ ತಮ್ಮ ಏಕಾಂಗಿ ಹೋರಾಟವನ್ನು ಗಟ್ಟಿಯಾಗಿ ಮುಂದುವರೆಸಿದ್ದಾರೆ. ದೇವೇಗೌಡರನ್ನು ರಾಜಕೀಯವಾಗಿ ಕಟ್ಟಿಹಾಕುವುದು ಅಷ್ಟು ಸುಲಭವಲ್ಲ ಎಂಬುದು ಅವರ ವಿರೋಧಿಗಳಿಗೆ ತಿಳಿದಿರುವ ಸತ್ಯ. ಇನ್ನು ದೇವೇಗೌಡರು ಮತ್ತು ಸಿಎಂ ಕುಮಾರಸ್ವಾಮಿ ಖುದ್ದು ಪ್ರಚಾರಕ್ಕೆ ಇಳಿದಾಗ ಬಹುತೇಕ ಕ್ಷೇತ್ರಗಳಲ್ಲಿ ಫಲಿತಾಂಶ ಬದಲಾಗಲಿದೆ. ಇನ್ನು ಈ ಷಡ್ಯಂತ್ರದ ಬಗ್ಗೆ ದೇವೇಗೌಡರಿಗೂ ಮಾಹಿತಿ ಸಿಕ್ಕಿದ್ದು ರಾಜಕೀಯ ಪಡಸಾಲೆಯಲ್ಲಿ ಪಳಗಿರುವ ದೇವೇಗೌಡರು ಶತ್ರುಗಳಿಗೆ ಸೆಡ್ಡು ಹೊಡೆಯಲು ಹಲವು ರಣತಂತ್ರಗಳನ್ನು ಹೆಣೆಯುತ್ತಿದ್ದಾರೆ.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...