ಮಂಡ್ಯ: ಮಂಡ್ಯದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ನನಗೆ ಆರೋಗ್ಯ ಮುಖ್ಯ ಅಲ್ಲ. ಜನರ ಹಿತ ಮುಖ್ಯ. ನನ್ನ ಜೀವನವನ್ನ ಬಡವರಿಗಾಗಿ ಮೀಸಲಿಡ್ತೀನಿ. ನಾನು ಹುಟ್ಟಿದ್ದು ಹಾಸನ. ರಾಜಕೀಯ ವಾಗಿ ಜನ್ಮ ಕೊಟ್ಟಿದ್ದು ರಾಮನಗರ. ರಾಜಕೀಯವಾಗಿ ಬೆಳೆಯಲು ಅವಕಾಶ ಮಾಡಿಕೊಟ್ಟಿದ್ದು ಮಂಡ್ಯ ಜನ ಎಂದು ಹೇಳಿದ್ದಾರೆ.ಹಾಸನ ಜನ ದೇವೇಗೌಡರನ್ನ ಕೈ ಬಿಟ್ಟಾಗ. ನೀವು ದೇವೇಗೌಡರ ಕೈ ಹಿಡಿದಿದ್ದೀರ. ಕಳೆದ ವಿಧಾನಸಭಾ ಚುನಾವಣೆಯಲ್ಲೇ ನಿಖಿಲ್ ಪ್ರಚಾರಕ್ಕೆ ಬಂದಿದ್ದ. ಇವತ್ತು ನಿಮ್ಮ ಸೇವೆ ನಾನು ಮಾಡಬೇಕಿದೆ. ಇಡೀ ರಾಜ್ಯವನ್ನ ನಾನು ನೋಡಬೇಕಿದೆ. ನನ್ನ ಬಜೆಟ್ ಬಗ್ಗೆ ಮಂಡ್ಯ ಬಜೆಟ್ ಅಂದ್ರು. ಇಂದು ಹಾಸನದವರು ಅಂತಾರೆ. ನಿಮ್ಮ ಹೃದಯದಿಂದ ನನ್ನನ್ನ ತೆಗೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ.
ಇನ್ನು ನಿಖಿಲ್‌ಗೆ ಗೋ ಬ್ಯಾಕ್ ಎಂದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಕುಮಾರಸ್ವಾಮಿ, ಯಾರಿಗೋ ಹೆದರಿ ಓಡಿ ಹೋಗುವವರ ಜಾಯಮಾನ ನಮ್ಮದಲ್ಲ ಎಂದಿದ್ದಾರೆ.
ಇನ್ನು ಅಂಬಿ ಬಗ್ಗೆ ಮಾತನಾಡಿದ ಸಿಎಂ, ನನಗೆ ಮೊದಲು ಅಂಬಿ ನಿಧನದ ಸುದ್ದಿ ಕೊಟ್ಟಿದ್ದೇ ನನ್ನ ಮಗ ನಿಖಿಲ್. ನನ್ನ ಮಗ ಬೇರೆ ಅಲ್ಲ. ಅಂಬಿ ಮಗ ಬೇರೆ ಅಲ್ಲ. ಅಂದು ಇನ್ನೂ ಅಂಬಿ ಮನೆ ದುರಸ್ಥಿ ಆಗಿರಲಿಲ್ಲ. ಪಾರ್ಥಿವ ಶರೀರ ಎಲ್ಲಿಗೆ ತಕೊಂಡ್ ಹೋಗ್ಬೇಕು ಅನ್ನೋದು ಗೊತ್ತಿರಲಿಲ್ಲ. ಅಧಿಕಾರಿಗಳನ್ನ ಕಳಿಸಿ ಅವರ ಮನೆ ಕ್ಲೀನ್ ಮಾಡಿಸಿದೆ. ಅಂಬಿಗೆ ಅಣ್ಣನ ಸ್ಥಾನ ನಾನು ಕೊಟ್ಟಿದ್ದೇನೆ.
ಅಂದು ಮಂಡ್ಯಕ್ಕೆ ಪಾರ್ಥಿವ ಶರೀರ ತಕೊಂಡ್ ಹೋಗಬಾರದು ಅಂದವರು. ಇಂದು ಈ ಜಿಲ್ಲೆ, ಮಣ್ಣಿನ ಬಗ್ಗೆ ಮಾತಾಡ್ತಾರೆ. ದೇಶದ ಇತಿಹಾಸದಲ್ಲಿ ಇಂತಹ ಘಟನೆ ನಡೆದಿರಲಿಲ್ಲ. ಮಿಲಿಟರಿ ವಿಮಾನ ತರಿಸಿ ಅಂಬಿ ಪಾರ್ಥಿವ ಶರೀರವನ್ನ ಮಂಡ್ಯಕ್ಕೆ ತರಿಸಿದೆ. ಸಿಎಂ ಆಗಿ ಅಲ್ಲ, ಅಂಬಿ ಅಭಿಮಾನಿಯಾಗಿ, ತಮ್ಮನಾಗಿ ಅಂಬಿ ಪಾರ್ಥಿವ ಶರೀರದ ಮುಂದೆ ಕುಳಿತಿದ್ದೆ. ಆದರೂ ನನ್ನ ಬಗ್ಗೆ ಅಭಿಮಾನಿಗಳು ಟೀಕೆ ಮಾಡ್ತೀರಿ. ನನ್ನ, ಅಂಬಿ ಸಂಬಂಧ ನಿಮಗೇನು ಗೊತ್ತು? ಎಂದು ಪ್ರಶ್ನಿಸಿದ್ದಾರೆ.
ನಾನು ಹಣ ಸಂಪಾದನೆ ಮಾಡಿಲ್ಲ. ನಿಮ್ಮಂತಹ ಜನರ ಪ್ರೀತಿ, ವಿಶ್ವಾಸ ಸಂಪಾದಿಸಿದ್ದೇನೆ. ನನ್ನ ಸ್ಟೋರಿ ಇಂದಿನಿಂದ ಮಂಡ್ಯದಲ್ಲಿ ಆರಂಭ. ಚಾಕರಿ ಮಾಡೋರಿಗೆ ಗೌರವಿಸೋರು ಮಂಡ್ಯ ಜನ.ಇಲ್ಲಿಯ ಜನ ನಮ್ಮ ಕುಟುಂಬವನ್ನ ಎಂದೂ ಕೈ ಬಿಡಲ್ಲ.

No comments:
Post a Comment