ಮಹಾ ಶಿವರಾತ್ರಿಯನ್ನು ಶಿಶಿರ ಋತುವಿನ ಮಾಘಮಾಸದ ಕೃಷ್ಣ ಪಕ್ಷ ಚತುರ್ದಶಿಯಂದು ದೇಶದೆಲ್ಲೆಡೆ ಸಂಭ್ರಮದಿಂದ ಆಚರಿಸುತ್ತಾರೆ. ಶಿವಮಂದಿರಗಳಲ್ಲಿ ಇಂದು ಶಿವನಿಗೆ ಪ್ರಿಯವಾದ ಅಭಿಷೇಕ, ವೇದ, ಮಂತ್ರ ಘೋಷ, ಪೂಜಾ ಕಾರ್ಯ ಭಕ್ತರ ಉಪವಾಸಚಾರಣೆ. ಶಂಕರನನ್ನು ಶ್ರದ್ಧೆ ಭಕ್ತಿಯಿಂದ ನಾಲ್ಕು ಆಯಾಮಗಳಲ್ಲಿ ಪೂಜಿಸಿದರೆ ಮೋಕ್ಷ ಪ್ರಾಪ್ತಿ ಎಂಬ ನಂಬಿಕೆ ಹಿಂದೂಗಳಲ್ಲಿದೆ.
ಹಗಲೆಲ್ಲಾ ಉಪವಾಸವಿದ್ದು, ರಾತ್ರಿಯಿಡೀ ಜಾಗರಣೆ ಮಾಡಿ ಪರಮೇಶ್ವರನ ಕೃಪೆಗೆ ಪಾತ್ರರಾಗುತ್ತಾರೆ ಎಂಬ ನಂಬಿಕೆ. ಪ್ರತಿ ತಿಂಗಳು ಚತುರ್ದಶಿಯಂದು ಮಾಸ ಶಿವರಾತ್ರಿ, ಮಾಘ ಮಾಸದ ಕೃಷ್ಣ ಚತುರ್ದಶಿಯಂದು ಮಹಾಶಿವರಾತ್ರಿ. ಇಂದು ಲಯಕರ್ತನಾದ ಪರಮಶಿವನು ಹುಟ್ಟಿದನೆಂದು ಕೆಲವರ ನಂಬಿಕೆ.
ಸಮುದ್ರ ಮಂಥನ ಕಾಲದಲ್ಲಿ ಹಾಲಹಲ ಕುಡಿದು ವಿಷಕಂಠನಾದ ದಿನವೆಂದು ಕೆಲವರು ಹೇಳುವರು. ಶಿವ-ಪಾರ್ವತಿಯ ಕಲ್ಯಾಣದ ದಿನವೆಂದು ಕೆಲವರ ವಾದ. ಮಹೇಶ್ವರನು ಲಿಂಗವಾಗಿ ಉದ್ಭವಿಸಿದನೆಂದು ಆ ದಿನವೇ ಮಹಾಶಿವರಾತ್ರಿ ಎಂದು ಅದಕ್ಕಾಗಿ ಶಿವನನ್ನು ಲಿಂಗರೂಪದಲ್ಲಿಯೇ ಪೂಜಿಸುತ್ತೇವೆ ಎಂಬುದು ಹೆಚ್ಚು ಪ್ರಚಲಿತವಾಗಿದೆ.
ಶಿವನಿಗೆ ಲಿಂಗದ ರೂಪದಲ್ಲಿ ಪೂಜೆ ಮಾಡಲು ಕಾರಣವೇನು ? ಜಾಗರಣೆಯನ್ನು ಏಕೆ ಮಾಡುತ್ತೇವೆ ಎಂಬುದಕ್ಕೆ ಶಿವಪುರಾಣದಲ್ಲಿ ಉಲ್ಲೇಖವಿದೆ. ಒಮ್ಮೆ ಬ್ರಹ್ಮ ಮತ್ತು ವಿಷ್ಣು ಇಬ್ಬರಲ್ಲಿ ತಾನು ಹೆಚ್ಚು ಎಂಬ ವಾದವು ಪ್ರಾರಂಭವಾಗಿ ಅದು ಅತಿರೇಕಕ್ಕೆ ಹೋದಾಗ ಶಿವನ ಸಂಕಲ್ಪದಿಂದ ಬ್ರಹ್ಮ ಮತ್ತು ವಿಷ್ಣುವಿನ ನಡುವೆ ಒಂದು ಬೃಹತ್ ಆಕಾರದ ಜ್ಯೋತಿರ್ಲಿಂಗವು ಏರ್ಪಟ್ಟಿತು.ಅವರಿಬ್ಬರ ಮಧ್ಯದಲ್ಲಿ ಆ ಲಿಂಗವು ಉದ್ಭವಿಸಿದಾಗ ಅವರಲ್ಲಿ ತಾತ್ಕಾಲಿಕವಾಗಿ ವಾದ ವಿವಾದವು ಕಡಿಮೆಯಾಗಿ ಅದರ ಆದಿ ಅಂತ್ಯವನ್ನು ಕಂಡುಕೊಳ್ಳುವ ಆಸಕ್ತಿ ಹುಟ್ಟಿತು. ಬ್ರಹ್ಮನು ಹಂಸವಾಗಿಯೂ, ವಿಷ್ಣುವು ವರಾಹ ರೂಪನಾಗಿಯೂ, ಆದಿ, ಅಂತ್ಯವನ್ನು ಹುಡುಕಲು ಹೊರಟರು.
ಇಬ್ಬರಿಗೂ ಕೊನೆ, ಮೊದಲು ಗೋಚರವಾಗಲಿಲ್ಲ. ಆದರೆ, ಬ್ರಹ್ಮನು ಕೇದಗೆಯ ಬಳಿ ಸಾಕ್ಷ್ಯ ಹೇಳಿಸಿ ತಾನು ಜ್ಯೋತಿರ್ಲಿಂಗದ ಕೊನೆಯನ್ನು ನೋಡಿದನು ಎಂದನು. ಕುಪಿತನಾದ ಶಿವನು ನಿನಗೆ ಭೂ ಲೋಕದಲ್ಲಿ ಪೂಜಾ ಕೈಂಕರ್ಯಗಳು ಇಲ್ಲದಂತಾಗಲಿ ಎಂದನು. ವಿಷ್ಣು ನಿಜವನ್ನು ನುಡಿದಿದ್ದರಿಂದ ನಿರಂತರ ಪೂಜೆ ಲಭ್ಯವಾಯಿತು.
ಕೇದಗೆ ಹೂವಿಗೆ ಪೂಜೆಯಲ್ಲಿ ಪ್ರಾಶಸ್ತ್ಯ ಸಿಗದೇ ಹೋಯಿತು. ಈ ಜ್ಯೋತಿರ್ಲಿಂಗದಿಂದ ಬಿದ್ದ ಕಿಡಿಗಳೇ ದ್ವಾರದ ಜ್ಯೋತಿರ್ಲಿಂಗಗಳು ಎಂಬ ನಂಬಿಕೆ ಇದೆ. ಈ ಜ್ಯೋತಿರ್ಲಿಂಗಗಳನ್ನು ಜೀವಮಾನದಲ್ಲಿ ಒಮ್ಮೆ ಸಂದರ್ಶಿಸಿದರೆ ಎಲ್ಲ ಪಾಪಗಳಿಂದ ಮುಕ್ತ ಎಂಬ ನಂಬಿಕೆಯೂ ಜನಜನಿತವಾಗಿದೆ.ಇವುಗಳು ಗುಜರಾತ್‍ನಲ್ಲಿ ಸೋಮನಾಥೇಶ್ವರ, ಶ್ರೀಶೈಲದಲ್ಲಿ ಮಲ್ಲಿಕಾರ್ಜುನ, ಉಜ್ಜಯಿನಿಯಲ್ಲಿ ಮಹಾಕಾಳೇಶ್ವರ, ಮಧ್ಯ ಪ್ರದೇಶದಲ್ಲಿ ಓಂಕಾರೇಶ್ವರ, ಹಿಮಾಲಯದಲ್ಲಿ ಕೇದಾರೇಶ್ವರ, ಮಹಾರಾಷ್ಟ್ರದಲ್ಲಿ ಭೀಮಾಶಂಕರ, ವಾರಣಾಸಿಯಲ್ಲಿ ಕಾಶಿವಿಶ್ವೇಶ್ವರ, ಮಹಾರಾಷ್ಟ್ರದಲ್ಲಿ ತ್ರ್ಯಂಬಕೇಶ್ವರ, ದೇವಘಡದಲ್ಲಿ ವೈದ್ಯನಾಥೇಶ್ವರ, ತಮಿಳುನಾಡಿನಲ್ಲಿ ರಾಮೇಶ್ವರ, ಔರಂಗಾಬಾದ್‍ನಲ್ಲಿ ಭೀಮೇಶ್ವರನಾಗಿ ನೆಲೆಸಿದ್ದಾನೆ ಪರಮ ಶಿವ.
ಮಹಾಶಿವರಾತ್ರಿಯ ದಿನದಂದು ರಾತ್ರಿ ಶಿವನಿಗೂ, ಪಾರ್ವತಿಗೂ ಕಲ್ಯಾಣವಾಯಿತು. ಈ ವಿವಾದಕ್ಕೆ ಮೂರು ಲೋಕಗಳೂ ಜಾಗರಣೆ ಇದ್ದ ಕಾರಣದಿಂದ ಅಂದು ಭಕ್ತಾದಿಗಳು ಸಾಂಕೇತಿಕವಾಗಿ ಜಾಗರಣೆ ಮಾಡುವರು. ಇಂದು ಓಂ ನಮಃ ಶಿವಾಯ ಎಂಬ ಪಂಚಾಕ್ಷರಿ ಮಂತ್ರ ಪಠಣದಿಂದ ಶಿವನಿಗೆ ಪ್ರಿಯವಾದ ಬಿಲ್ವಾರ್ಚನೆ ಮಾಡಿ ಉಪವಾಸ ಮತ್ತು ಜಾಗರಣೆ ಮಾಡುತ್ತಾರೋ ಅವರಿಗೆ ಶಿವನು ಸುಪ್ರೀತನಾಗುತ್ತಾನೆ ಎಂದು ಶಿವಪುರಾಣವು ತಿಳಿಸುತ್ತದೆ.
ಇದಕ್ಕೆ ಪೂರಕವಾಗಿ ಒಂದು ಕಥೆ ಪ್ರಚಲಿತವಾಗಿದೆ. ವಾರಣಾಸಿಯಲ್ಲಿ ಒಬ್ಬ ಸುಸ್ವರಡು ಎಂಬ ಬೇಡನಿದ್ದನು. ಅವನು ಕಾಡಿನಲ್ಲಿ ಹೋಗುವಾಗ ದಾರಿತಪ್ಪಿದನು. ಅಂದು ಇಡೀ ದಿವಸ ಅನ್ನ ಆಹಾರಗಳಿಲ್ಲದೆ ಕಾಲಕಳೆಯುವಂತಾಯ್ತು. ರಾತ್ರಿ ಒಂದು ಬಿಲ್ವ ವೃಕ್ಷದ ಮೇಲೆ ಕುಳಿತನು.ರಾತ್ರಿ ಏನು ಮಾಡಲು ತಿಳಿಯದೆ ಒಂದೊಂದೇ ಎಲೆಯನ್ನು ಮರದ ಕೆಳಗೆ ಎಸೆಯುತ್ತಿದ್ದನು. ಅದು ನೇರವಾಗಿ ಮರದ ಕೆಳಗೆ ಇದ್ದ ಶಿವಲಿಂಗದ ಮೇಲೆ ಬೀಳುತ್ತಿತ್ತು. ಗೊತ್ತಿಲ್ಲದೆಯೇ ಮಹಾಶಿವರಾತ್ರಿಯಂದು ಉಪವಾಸ, ಜಾಗರಣೆ ಅಷ್ಟೇ ಅಲ್ಲ ಬಿಲ್ವಾರ್ಚನೆ ಮಾಡಿದ್ದರಿಂದ ಅವನಿಗೆ ಮೋಕ್ಷ ಪ್ರಾಪ್ತಿಯಾಯಿತೆಂದು ಪುರಾಣದಲ್ಲಿ ಉಲ್ಲೇಖವಿದೆ. ಹೀಗೆ ಮಹಾಶಿವರಾತ್ರಿಗೆ ತನ್ನದೇ ಆದ ಮಹತ್ವವಿದೆ. ಸಚ್ಚಿದಾನಂದ ಶಿವನನ್ನು ಇಂದು ಭಕ್ತಿಯಿಂದ ಪೂಜಿಸಿದರೆ ಸಕಲ ಇಷ್ಟಾರ್ಥಗಳು ಈಡೇರುತ್ತದೆ ಎಂದು ಪುರಾಣಗಳು ತಿಳಿಸುತ್ತವೆ.
https://play.google.com/store/apps/details?id=com.application.onead&referrer=GFN1E0 Sign up with OneAD app. You can earn up to 2.5 L monthly OneAD Balance. Your referral code for registration is GFN1E0 . Register today

No comments:
Post a Comment