ABC

Sunday, 3 March 2019

ಸುಮಲತಾಗೆ ಕೇಳಿರುವ ಪ್ರಶ್ನೆಗಳ ಸುರಿಮಳೆ: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್.

ದಿ. ಅಂಬರೀಶ್ ಪತ್ನಿ ಸುಮಲತಾ ಅವರಿಗೆ ಜೆಡಿಎಸ್ ಬಹಿರಂಗ ಪ್ರಶ್ನೆಗಳ ಸುರಿಮಳೆಯನ್ನು ಸಾಮಾಜಿಕ ಜಾಲತಾಣದ ಮುಖಾಂತರ ಕೇಳಿದೆ.ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ದತೆ ನಡೆಸುತ್ತಿರುವ ಸುಮಲತಾ ಅಂಬರೀಶ್​ಗೆ ಮಂಡ್ಯದ ಅಖಂಡ ಜನತೆ ಹೆಸರಲ್ಲಿ ಜೆಡಿಎಸ್ ಕಾರ್ಯಕರ್ತರು ಪದೇ ಪದೇ ಅಂಬರೀಶ್ ಹೆಸರು ಬಳಸಿ ಪ್ರಶ್ನೆಯನ್ನು ಹಾಕುತ್ತಿದ್ದಾರೆ.

ಸುಮಲತಾಗೆ ಕೇಳಿರುವ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

೧. ಅಂಬರೀಶಣ್ಣ ಬದುಕಿದ್ದಾಗ ನನ್ನ ಕುಟುಂಬಸ್ಥರನ್ನು ರಾಜಕೀಯಕ್ಕೆ ಕರೆತರುವುದಿಲ್ಲ‌ ಎಂದಿದ್ದರು.ಅವರ ಮಾತಿಗೆ ನೀವು ಕಿಂಚಿತ್ತೂ ಬೆಲೆ ಕೊಡುವುದಿಲ್ಲವ ಸುಮಲತಾ ಅಕ್ಕ..?

೨. ಕಳೆದ ಚುನಾವಣೆಯಲ್ಲಿ ಬಿ-ಫಾರಂ ಮನೆ ಬಾಗಿಲಿಗೆ ಬಂದರೂ ರಾಜಕೀಯದಿಂದ ಬೇಸತ್ತ ಅಂಬರೀಶಣ್ಣ ಚುನಾವಣೆಯಿಂದ ದೂರುಳಿದಿದ್ದರು. ಅಂಬರೀಶ್ ಅವರ ಆ ನಡೆ ಮರೆತುಹೊಯ್ತ ಸುಮಲತಾ ಅಕ್ಕ..?

೩. ಅಂಬರೀಶ್ ಅವ್ರಿಗೆ ಬೇಡವಾದ ರಾಜಕೀಯ ನಿಮಗೇಕೆ..? ಮಂಡ್ಯ ಜನರ ಋಣ ತೀರಿಸಲು ರಾಜಕೀಯ ಬೇಕ..? ಮಂಡ್ಯ ಜನರ ಋಣ ತೀರೀಸಲು NGO ಸಂಸ್ಥೆ ತೆರೆದು ಮಂಡ್ಯ ಜನತೆಗೆ ಸಹಾಯ ಮಾಡಲಾಗಲ್ವ ಸುಮಲತಾ ಅಕ್ಕ..?
೪. ಅಂಬರೀಶ್ ನಿಧನರಾದಾಗ ಮುಖ್ಯಮಂತ್ರಿ ಅನ್ನೋದನ್ನು ಮರೆತು ಕುಮಾರಣ್ಣ ಸಾಮಾನ್ಯ ಅಭಿಮಾನಿಯಂತೆ ಮಂಡ್ಯ ಜನರಿಗೆ ಅಂಬರೀಶ್ ಅಣ್ಣನ‌ ಅಂತಿಮ ದರ್ಶನ ಮಾಡಿಸಿದ್ರು.ಇದನ್ನ ನೀವು ಮರೆತರೂ ಮಂಡ್ಯ ಜನ‌ ಮರೆಯೋದಿಲ್ಲ ಸುಮಲತಾ ಅಕ್ಕ..?

೫. ಅಂಬರೀಶ್ ಅಣ್ಣನ ಹೆಸರಿನಲ್ಲಿ ಮೈಸೂರಿನಲ್ಲಿ ಫಿಲ್ಮ್ ಸಿಟಿ ಕಟ್ಟಬೇಕು ಎಂದ ಕುಮಾರಣ್ಣನ ಗೆಲ್ಲಿಸಬೇಕೋ..? ಅಥವಾ ಅಂಬಿ ಅಣ್ಣ ನಮ್ಮನ್ನೆಲ್ಲಾ ಅಗಲಿ ತಿಂಗಳು ಕಳೆಯುವ ಮುನ್ನ ಅಣ್ಣನ ಅಗಲಿಕೆಯನ್ನೇ ಬಂಡವಾಳ ಮಾಡಿಕೊಂಡ ನಿಮ್ಮನ್ನ ಗೆಲ್ಲಿಸಬೇಕೋ..? ನೇರವಾಗಿ ಹೇಳಿ ಸುಮಲತಾ ಅಕ್ಕ..?

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...