ಶಿವಮೊಗ್ಗ: ರೈತರ ಸಾಲ ಮನ್ನಾ ಮಾಡುವುದು ಪಾಪದ ಕೆಲ್ಸ ಅಂತ ಹೇಳುವ ಮೋದಿ, ರೈತರ ಖಾತೆಗೆ ಹಣ ಹಾಕುತ್ತಿದ್ದಾರೆ. ಜೆಡಿಎಸ್ ಒಂದು ಹೆಜ್ಜೆ ಮುಂದೆ ಇಟ್ಟು ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡುತ್ತಿದೆ ಎಂದು ಸಿಎಂ ಕುಮಾರಸ್ವಾಮಿ ಬಿಜೆಪಿ ವಿರುದ್ಧ ಹರಿ ಹಾಯ್ದರು.ಹಳೆ ಜೈಲು ಆವರಣದಲ್ಲಿ ನೆಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಡಿಸಿಸಿ ಬ್ಯಾಂಕ್ ವತಿಯಿಂದ 69.800 ರೈತರಿಗೆ ಋಣಮುಕ್ತ ಪತ್ರ ಹಾಗೂ ಶಿಮುಲ್ ವತಿಯಿಂದ ನಿವೃತ್ತ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿಗಳಿಗೆ ನಿವೃತ್ತ ವೇತನ ನೀಡುವ ಯೋಜನೆಗೆ ಸಿಎಮ್ ಚಾಲನೆ ನೀಡಿ ಮಾತನಾಡಿದರು.
ರೈತರ ವಿಚಾರದಲ್ಲಿ ಹುಡುಗಾಟದ ರಾಜಕೀಯ ಬೇಡ. ರೈತರ ಸಾಲ ಮನ್ನಾವನ್ನು ಒಂದೇ ರಾತ್ರಿಯಲ್ಲಿ ಮಾಡಬೇಕಿತ್ತು ಎಂದು ಬಿಎಸ್ ವೈ ಹೇಳಿದ್ದಾರೆ. ಆದ್ರೆ ಹಾಗೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಸಿದ್ದರಾಮಯ್ಯನವರ ಸಾಲ ಮನ್ನಾದ ಹಣವನ್ನು ನೀಡಿದ್ದೇನೆ. ಈಗ 45 ಸಾವಿರ ಕೋಟಿ ರೂ ಸಾಲ ಮನ್ನ ಮಾಡುವ ಎಲ್ಲಾ ತಯಾರಿ ನಡೆಸಲಾಗುತ್ತದೆ. ಸದ್ಯ 12 ಸಾವಿರ ಕೋಟಿ ರೂ ರೈತರ ಸಾಲ ಮನ್ನಾಗೆ ಹಣ ಇಡಲಾಗಿದ್ದು, ಮುಂಬರುವ ವರ್ಷಕ್ಕೆ 13 ಸಾವಿರ ಕೋಟಿ ರೂ ಇಡಲಾಗಿದೆ ಎಂದರು.
ಮುಂಗಾರು ಹಾಗೂ ಹಿಂಗಾರಿನಲ್ಲಿ ಒಟ್ಟು 33 ಸಾವಿರ ಕೋಟಿ ರೂ ನಷ್ಟವಾಗಿದೆ. ಪ್ರಧಾನ ಮಂತ್ರಿ ಸಾಲ ಮನ್ನಾ ಮಾಡುವುದು ಪಾಪದ ಕೆಲ್ಸ ಅಂತ ಹೇಳಿದ್ದಾರೆ. ಈಗ ತೀರ್ಮಾನ ನಿಮ್ಮಗೆ ಬಿಟ್ಟಿದ್ದೆನೆ. ಮೋದಿಗೆ ನಾಲ್ಕುವರೆ ವರ್ಷ ನೆನಪಾಗದ ರೈತರು ಚುನಾವಣೆ ಬಂದಾಗ ರೈತರು ನೆನಪಾಗಿದ್ದಾರಾ ಎಂದು ಸಿಎಂ.ಎಚ್.ಡಿ.ಕೆ ಪ್ರಶ್ನೆ ಮಾಡಿದರು.ಬಡವರ ಬಂಧು ಯೋಜನೆಯಡಿ 4.50 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ. ಗೃಹ ಲಕ್ಷ್ಮಿ ಬೆಳೆ ಸಾಲ ಯೋಜನೆ. ರೈತರಿಗೆ ಕಾಯಕ ಯೋಜನೆಯಡಿ ಸಾಲ ನೀಡಲಾಗುತ್ತಿದೆ. ಚುನಾವಣೆ ಬಂದಾಗ ಪಕ್ಷ ಇರಲಿ. ಚುನಾವಣೆ ಮುಗಿದ ಮೇಲೆ ನಿಮ್ಮ ಹೊಟ್ಟೆ ಪಾಡು ನೋಡಿಕೊಳ್ಳಿ ಎಂದು ರೈತರಿಗೆ ಸಲಹೆ ನೀಡಿದರು.
ನಾನು ಹಾಸನ, ಮಂಡ್ಯ, ಮೈಸೂರು ಜಿಲ್ಲೆಯ ಸಿಎಂ ಎಂದು ಹೇಳುವ ಜಿಲ್ಲೆಯ ನಾಯಕರು ಶಿಕಾರಿಪುರ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರಗಳಿಗೆ ನೀರಾವರಿ ಯೋಜನೆ ನೀಡಿದ್ದನ್ನ ಮರೆತಿದ್ದಾರೆ ಅನಿಸುತ್ತೆ. ಶಿವಮೊಗ್ಗ ಅಭಿವೃದ್ಧಿಯಲ್ಲಿ ನಮ್ಮ ಪಾಲು ಸಹ ಇದೆ, ಎಂದು ಯಡಿಯೂರಪ್ಪನವರ ವಿರುದ್ದ ವಾಗ್ದಾಳಿ ನೆಡೆಸಿದರು.
ಸಿಎಂ ಕುಮಾರಸ್ವಾಮಿರವರಿಗೆ ನೇಗಿಲು ಹೊತ್ತ ರೈತನ ಬೆಳ್ಳಿ ಪುತ್ಥಳಿ ನೀಡಿ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಹಕಾರ ಸಚಿವ ಬಂಡ್ಯೆಪ್ಪ ಕಾಶಂಪೂರ್ , ಎಂಎಲ್ ಸಿ ಭೋಜೆಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡ, ಶಿಮುಲ್ ಅಧ್ಯಕ್ಷ ವಿಧ್ಯಾಧರ್ ಸೇರಿ ಇತರರು ಹಾಜರಿದ್ದರು.

No comments:
Post a Comment