ಚಿಕ್ಕಮಂಗಳೂರು: ನಿಖಿಲ್ ಕುಮಾರಸ್ವಾಮಿ ರಾಜಕೀಯಕ್ಕೆ ಕಾಲಿಡಲು ಸಿದ್ಧತೆ ನಡೆಸುತ್ತಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ನಿಖಿಲ್ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಗೋಬ್ಯಾಕ್ ನಿಖಿಲ್ ಆಂದೋಲನ ಆರಂಭಗೊಂಡಿದೆ. ಈ ಬಗ್ಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಿಖಿಲ್ ಕುಮಾರ್ಸ್ವಾಮಿ ಪ್ರತಿಕ್ರಿಯಿಸಿದ್ದು, ಈ ರೀತಿ ವಿಚಾರಗಳಿಗೆ ಮಹತ್ವ ಕೊಡಬಾರದು ಎಂದಿದ್ದಾರೆ.
“ನಿಖಿಲ್ ರಾಜಕೀಯಕ್ಕೆ ಕಾಲಿಡಬೇಕು ಎಂದು ಕೆಲವರು ಹೇಳಿದರೆ ಇನ್ನೂ ಕೆಲವರು ಅವರು ಬರಬಾರದು ಎಂದು ಹೇಳುತ್ತಾರೆ. ಪೂರ್ವಸಿದ್ಧತೆ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಇಂತಹ ಕೆಲಸ ಮಾಡುತ್ತಾರೆ,” ಎಂದು ಕುಮಾರಸ್ವಾಮಿ ಆರೋಪಿಸಿದರು.
ಸೋಷಿಯಲ್ ಮೀಡಿಯಾದಲ್ಲಿ ಈ ರೀತಿ ಅಭಿಯಾನ ಶುರು ಮಾಡುವವರು ಒಂದು ಕಡೆ ಇದ್ದರೆ, ಓಟ ಹಾಕುವವರು ಮತ್ತೆಲ್ಲೋ ಇರುತ್ತಾರೆ. ಅಪಪ್ರಚಾರ ಮಾಡಲೆಂದೇ ವಿಶೇಷ ಗುಂಪೊಂದು ಇದೆ. ಆದರೆ, ನಿಜವಾದ ಪ್ರೀತಿ ವಿಶ್ವಾಸ ಇಟ್ಟವರು ಎಲ್ಲಿದ್ದರೂ ಮತ ಹಾಕುತ್ತಾರೆ,” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಶೃಂಗೇರಿ ಪೀಠದಲ್ಲಿ ನಡೆದ ಚಂಡಿಕಾಯಾಗದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಅವರ ಪತ್ನಿ ಚೆನ್ನಮ್ಮ, ನಿಖಿಲ್ ಕುಮಾರಸ್ವಾಮಿ, ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಪಾಲ್ಗೊಂಡಿದ್ದರು.
ಮಂಡ್ಯದ ಜನತೆಯ ನಾಡಿಮಿಡಿತ ಅರ್ಥವಾಗಿದೆ-ನಿಖಿಲ್:
ಶೃಂಗೇರಿಗೆ ಬಂದ ಉದ್ದೇಶದ ಬಗ್ಗೆ ಮಾತನಾಡಿದ ನಿಖಿಲ್, “ನಾವು ಈ ದೇವಸ್ಥಾನಕ್ಕೆ ಮೊದಲಿನಿಂದಲೂ ನಡೆದುಕೊಂಡು ಬರುತ್ತಾ ಇದ್ದೇವೆ. ತಾಯಿ ಶಾರದಾಂಬೆ, ಜಗದ್ಗುರುಗಳ ಆಶೀರ್ವಾದ ಪಡೆಯಲು ನಾವು ಬಂದಿದ್ದೇವೆ. ಶ್ರೀಗಳ ಜೊತೆ ದೊಡ್ಡವರ ನಂಟು ಹಿಂದಿನಿಂದಲೂ ಇದೆ. ಅವರ ಆಶೀರ್ವಾದ, ತಾಯಿಯ ಆಶೀರ್ವಾದದಿಂದ ಇವತ್ತು ತಂದೆ ಈ ಸ್ಥಾನದಲ್ಲಿದ್ದಾರೆ. ಮಂಡ್ಯದ ಜನತೆಯ ನಾಡಿ ಮಿಡಿತವನ್ನು ಅರ್ಥಮಾಡಿಕೊಂಡಿರುವುದಕ್ಕೆ ಪಕ್ಷ ಟಿಕೆಟ್ ಕೊಡಲು ಮುಂದೆ ಬಂದಿದೆ. ಅಲ್ಲಿ ಜನತೆಯ ಸೇವೆ ಮಾಡಲು ಸಿದ್ಧನಿದ್ದೇನೆ,” ಎಂದರು ನಿಖಿಲ್.
ಗೋ ಬ್ಯಾಕ್ ಆಂದೋಲನದ ಬಗ್ಗೆ ತಲೆಕೆಡಿಸಿಕೊಂಡಿಲ್ಲ:
ಸಾಮಾಜಿಕ ಜಾಲತಾಣಗಳಲ್ಲಿ ಗೋ ಬ್ಯಾಕ್ ನಿಖಿಲ್ ಚಳುವಳಿ ಕುರಿತು ಪ್ರತಿಕ್ರಿಯಿಸಿದ್ದಾರೆ. ಜನರ ನಾಡಿ ಮಿಡಿತ ತಿಳಿದುಕೊಂಡು ಟಿಕೆಟ್ ಕೊಡುತ್ತಿದ್ದಾರೆ. ಮಂಡ್ಯ ಜನರ ಸೇವೆಗಾಗಿ ನಾನು ರಾಜಕೀಯಕ್ಕೆ ಬರುತ್ತಿದ್ದೇನೆ. ಈಗಾಗಲೇ ವರಿಷ್ಠರು ಕಾರ್ಯಕರ್ತರು, ಶಾಸಕರು, ನಾಯಕರ ಜೊತೆ ಚರ್ಚಿಸಿ ಟಿಕೆಟ್ ನೀಡುವ ಬಗ್ಗೆ ತೀರ್ಮಾನಿಸಿದ್ದೇವೆ. ಗೋಬ್ಯಾಕ್ ಚಳುವಳಿ ಬಗ್ಗೆ ನಾನು ತಲೆಕಡಿಸಿಕೊಳ್ಳುವುದಿಲ್ಲ,” ಎಂದರು.

No comments:
Post a Comment