ABC

Wednesday, 6 March 2019

ಮೋದಿ ಸರ್ಕಾರದ ಆರ್ಥಿಕ ದಿವಾಳಿತನ ನನ್ನ ರಾಜ್ಯದಲ್ಲಿಲ್ಲ: ಸಿಎಂ ಕುಮಾರಸ್ವಾಮಿ ವಾಗ್ದಾಳಿ.

ಬೆಂಗಳೂರು: ನಮ್ಮ ಹತ್ತಿರ ರೈತರ ಖಾತೆಯ ಬಗ್ಗೆ ಮಾಹಿತಿ ಇದೆ, ಆದರೆ ಅವರ ಹತ್ತಿರ ದುಡ್ಡೇ ಇಲ್ಲ. ನರೇಗಾ ಹಣವನ್ನು ತಗೆದುಕೊಂಡು ರೈತರ ಖಾತೆಗೆ ಹಾಕುತ್ತಿದ್ದಾರೆ.ಅವರ ಸರ್ಕಾರದ ಆರ್ಥಿಕ ದಿವಾಳಿತನ ನನ್ನ ರಾಜ್ಯದಲ್ಲಿ ಇಲ್ಲ ಎಂದು ಪ್ರಧಾನಿ ಮೋದಿ ವಿರುದ್ದ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕುಮಾರಸ್ವಾಮಿ ರಿಮೋಟ್ ಕಂಟ್ರೋಲ್ ಸಿಎಂ ಎಂದು ಮೋದಿ ಹೇಳಿಕೆ ನೀಡಿದ್ದಾರೆ, ಅವರದೇ ರೀತಿಯಲ್ಲಿ ಹೇಳೋದಾದ್ರೆ ರಿಮೋಟ್ ಕಂಟ್ರೋಲ್ ಆಡಳಿತದಲ್ಲೂ ಅಭಿವೃದ್ಧಿ ಪರ ಕೆಲಸಗಳಾಗಿವೆ. ಎಷ್ಟು ಅಭಿವೃದ್ಧಿ ಕೆಲಸ ಆಗಿದೆ ಅಂತ ಕೇಂದ್ರಕ್ಕೂ ಮಾಹಿತಿ ಹೊಗಿರುತ್ತದೆ. ಇವತ್ತು ಅಂತಹ ಮಟ್ಟದಲ್ಲೂ ದೊಡ್ಡ ಅಚಿವ್​ಮೆಂಟ್ ಮಾಡಿದ್ದೇನೆ. ನಾನು ಅವರಿಂದ ಹೇಳಿಸಿಕೊಳ್ಳುವ ಅಗತ್ಯವಿಲ್ಲ.ಅವರಿಗಿಂತ ದೊಡ್ಡ ಮಟ್ಟದಲ್ಲಿ ನಾಡಿನ ರಕ್ಷಣೆ ಮಾಡುವ ನಿಟ್ಟಿನಲ್ಲಿ ನನ್ನ ಕೆಲಸ ಮಾಡಿದ್ದೇನೆ‌ ಎಂದು ತಿರುಗೇಟು ನೀಡಿದರು.

ರೈತರ ಸಾಲ ಮನ್ನ ವಿಷಯದಲ್ಲಿ ಮೋದಿಯವರಿಗೆ ಮಾಹಿತಿ ಕೊರತೆ ಇದೆ. ಸುಮಾರು ಏಳು ಲಕ್ಷ ರೈತರ ಸಹಕಾರ ಬ್ಯಾಂಕ್ ನಲ್ಲಿರುವ ಸಾಲವನ್ನ ಮನ್ನ ಮಾಡಲಾಗಿದೆ.ಅದರ ಜೊತೆಗೆ ಆರೂವರೆ ಲಕ್ಷ ವಾಣಿಜ್ಯ ಬ್ಯಾಂಕ್ ಸಾಲಮನ್ನಾ ಮಾಡಲಾಗಿದೆ.ನರೇಂದ್ರ ಮೋದಿಯವರಿಗೆ ಒಂದು ಮಾತು ಹೇಳೋಕೆ ಇಷ್ಟಪಡ್ತೀನಿ. ಹುಡುಗಾಟಿಕೆಯ ಮಾತು ಏನಿದೆ, ಅವರಿಗೆ ಸರಿಯಾದ ರೀತಿಯಲ್ಲಿ ಮಾಹಿತಿ ಇಲ್ಲ. ಅವರಿಗೆ ಬೇಕು ಅಂದ್ರೆ ನಮ್ಮ ಅಧಿಕಾರಿಗಳನ್ನ ಕಳಿಸಿ ಮಾಹಿತಿ ಕೊಡುತ್ತೇವೆ. ಅವರ ಹೇಳಿಕೆಯನ್ನ ನೋಡಿದರೆ ಜನರು ಎಚ್ಚರಿಕೆಯಿಂದ ಇರಬೇಕು. ಅತ್ಯಂತ ಸುಳ್ಳುಗಳನ್ನ ಹೇಳುವ ಪ್ರಧಾನಮಂತ್ರಿ ಈ ದೇಶದಲ್ಲಿ ಮತ್ತೊಬ್ಬರು ಬರೋದಿಲ್ಲ ಎಂದು ವ್ಯಂಗ್ಯವಾಡಿದರು.

ರೈತರ ಖಾತೆಗೆಳಿಗೆ ಎರಡು ಸಾವಿರ ರೂ ಸಂದಾಯ ಮಾಡುವ ಯೋಜನೆಗಾಗಿ ಸರಿಯಾದ ರೀತಿಯ ಖಾತೆ ವಿವರ ನೀಡುತ್ತಿಲ್ಲ ಅಂತ ಮೋದಿ ಆರೋಪ ಮಾಡಿದ್ದಾರೆ. ‌ಅವರು ಯಾವೆಲ್ಲಾ ಮಾಹಿತಿ ಕೇಳಿದ್ದಾರೆ ಅದೆಲ್ಲವನ್ನೂ ಕೊಡುತ್ತೇವೆ. ಆದರೆ ಕೇಂದ್ರದ ಬಳಿ ಖಾತೆಗೆ ಹಾಕಲು ಹಣವೇ ಇಲ್ಲ ಎಂದರು.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...